ವಿಜ್ಞಾನಿಗಳ ಸ್ಫೋಟಕ ವರದಿ ಬಿಚ್ಚಿಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ
ಕೊರೊನಾ ಇದ್ದರೂ ತೆರಿಗೆ ಜಾಸ್ತಿ ಆಗ್ತಾಯಿದೆ. ಕೊರೊನಾ ಕೇವಲ ನೆಪವಷ್ಟೆ. ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ತುಂಬಾ ಅನ್ಯಾಯವಾಗಿದೆ. ಕೊರೊನಾಗೆ ಅಂತ 5, 6 ಸಾವಿರ ಖರ್ಚು ಮಾಡಿರಬಹುದು.
ನಿನ್ನೆ ಬೆಳಗಾವಿಯಲ್ಲಿ ಎರಡನೇ ದಿನದ ಚಳಿಗಾಲ ಅಧಿವೇಶನ ನಡೆದಿದೆ. ಈ ವೇಳೆ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅತಿವೃಷ್ಟಿ ಮೇಲಿನ ಚರ್ಚೆ ಆರಂಭಿಸಿದ್ದರು. ಕೊರೊನಾ ಇದ್ದರೂ ತೆರಿಗೆ ಜಾಸ್ತಿ ಆಗ್ತಾಯಿದೆ. ಕೊರೊನಾ ಕೇವಲ ನೆಪವಷ್ಟೆ. ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ತುಂಬಾ ಅನ್ಯಾಯವಾಗಿದೆ. ಕೊರೊನಾಗೆ ಅಂತ 5, 6 ಸಾವಿರ ಖರ್ಚು ಮಾಡಿರಬಹುದು. ಆದರೆ ಕರ್ನಾಟಕ ಸರ್ಕಾರದ ಬಜೆಟ್ 2,47,000 ಕೋಟಿ ಇದೆ. ಅದರಲ್ಲಿ ಆರು ಸಾವಿರ ಖರ್ಚು ಮಾಡಿರಬಹುದು ಅಷ್ಟೆ. ಈ ವರ್ಷ ಕೇಂದ್ರ ಸರ್ಕಾರ ಒಂದು ರೂಪಾಯಿ ಪರಿಹಾರ ನೀಡಿಲ್ಲ. 39,000 ಮನೆಗಳು ಬಿದ್ದು ಹೋಗಿವೆ. ಇನ್ನು 2019ರಲ್ಲಿ ಬಿದ್ದು ಹೋದ ಮನೆಗಳಿಗೆ ಪರಿಹಾರ ನೀಡಿಲ್ಲ. ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಹವಮಾನ ಬದಲಾವಣೆ ಆಗುತ್ತಿದೆ. ಈಗಲೇ ಎಚ್ಚರಿಕೆ ವಹಿಸಿ ಅಂತ ವಿಜ್ಞಾನಿಗಳು ಎಚ್ಚರಿಸಿದ್ದಾರೆ ಅಂತ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ
ಓಮಿಕ್ರಾನ್ ಭೀತಿಯ ನಡುವೆ ನಿಮ್ಮ ದೇಹವನ್ನು ಸುರಕ್ಷಿತವಾಗಿಡಲು ಈ ಯೋಗಾಸನಗಳನ್ನು ಮಾಡಿ