Bird Flu: ಕೊಟ್ಟಾಯಂನಲ್ಲಿ 3 ಹಕ್ಕಿ ಜ್ವರ ಕೇಸ್​ ಪತ್ತೆ; ಇಂದಿನಿಂದಲೇ ಶುರುವಾಗಲಿಗೆ ಸಾಮೂಹಿಕವಾಗಿ ಹಕ್ಕಿಗಳನ್ನು ಕೊಲ್ಲುವ ಪ್ರಕ್ರಿಯೆ

ಕೇರಳದಲ್ಲಿ ಕಳೆದ ಕೆಲವು ವಾರಗಳಿಂದಲೂ ಹಕ್ಕಿಜ್ವರದ ಆತಂಕ ಇದೆ. ಇಲ್ಲಿ ಬಾತುಕೋಳಿಗಳು ಸೇರಿ ಮನೆಯಲ್ಲಿ ಸಾಕುವ ಕೆಲವು ಪಕ್ಷಿಗಳು ಸಾಯುತ್ತಿವೆ. ಅದರಲ್ಲಿ ಕಳೆದ ವಾರ  ಆಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಸರ್ಕಾರವೂ ಅಲರ್ಟ್ ಆಗಿದೆ.

Bird Flu: ಕೊಟ್ಟಾಯಂನಲ್ಲಿ 3 ಹಕ್ಕಿ ಜ್ವರ ಕೇಸ್​ ಪತ್ತೆ; ಇಂದಿನಿಂದಲೇ ಶುರುವಾಗಲಿಗೆ ಸಾಮೂಹಿಕವಾಗಿ ಹಕ್ಕಿಗಳನ್ನು ಕೊಲ್ಲುವ ಪ್ರಕ್ರಿಯೆ
ಸಾಂಕೇತಿಕ ಚಿತ್ರ
Follow us
| Updated By: Lakshmi Hegde

Updated on:Dec 15, 2021 | 10:14 AM

ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಮೂರು ಹಕ್ಕಿ ಜ್ವರದ ಪ್ರಕರಣ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ವೇಚರ್​, ಅಯ್ಮಾನಂ ಮತ್ತು ಕಲ್ಲಾರಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಾತುಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಇಂದಿನಿಂದಲೇ ಸೋಂಕಿತ ಹಕ್ಕಿಗಳನ್ನು ಸಾಮೂಹಿಕವಾಗಿ ಕೊಲ್ಲುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಪಶು ಸಂಗೋಪನಾ ಇಲಾಖೆಯ 10 ಕ್ಷಿಪ್ರ ಪ್ರಕ್ರಿಯಾ ತಂಡಗಳು ಸೇರಿ ಹಕ್ಕಿಗಳನ್ನು ಕೊಲ್ಲಲಿವೆ. ಇನ್ನು ಪ್ರಾಥಮಿಕವಾಗಿ ನಡೆಸಿದ ಮೌಲ್ಯಮಾಪನದ ಪ್ರಕಾರ, ಸದ್ಯದ ಮಟ್ಟಿಗೆ ಹಕ್ಕಿಜ್ವರ ರೋಗವನ್ನು ನಿಯಂತ್ರಣದಲ್ಲಿಡಲು ಏನಿಲ್ಲವೆಂದರೂ  28,500ರಿಂದ 35,000 ಹಕ್ಕಿಗಳನ್ನು ಕೊಲ್ಲಬೇಕಾಗುತ್ತದೆ. 

ಕೇರಳದಲ್ಲಿ ಕಳೆದ ಕೆಲವು ವಾರಗಳಿಂದಲೂ ಹಕ್ಕಿಜ್ವರದ ಆತಂಕ ಇದೆ. ಇಲ್ಲಿ ಬಾತುಕೋಳಿಗಳು ಸೇರಿ ಮನೆಯಲ್ಲಿ ಸಾಕುವ ಕೆಲವು ಪಕ್ಷಿಗಳು ಸಾಯುತ್ತಿವೆ. ಅದರಲ್ಲಿ ಕಳೆದ ವಾರ  ಆಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಸರ್ಕಾರವೂ ಅಲರ್ಟ್ ಆಗಿದೆ. ಈ ಜಿಲ್ಲೆಯಲ್ಲಿ ಕೆಲವು ಹಕ್ಕಿಗಳು ಸತ್ತ ಬೆನ್ನಲ್ಲೇ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ನಂತರ ಅವುಗಳಲ್ಲಿ ಎಚ್​5ಎನ್​1 (ಹಕ್ಕಿ ಜ್ವರ) ಸೋಂಕು ಇರುವುದನ್ನು ಪಶುಸಂಗೋಪನಾ ಇಲಾಖೆ ದೃಢಪಡಿಸಿತ್ತು. ಅದಾದ ಬಳಿಕ ಶುಕ್ರವಾರ ಆಲಪ್ಪುಳ ಜಿಲ್ಲೆಯ ಥಕಾಜಿ ಗ್ರಾಮ ಪಂಚಾಯಿತಿಯ ವಾರ್ಡ್​ ನಂಬರ್​ 10ರಲ್ಲಿ 12,000 ಬಾತುಕೋಳಿಗಳನ್ನು ಕೊಲ್ಲಲಾಗಿತ್ತು. ಅಲಪ್ಪುಳ ಜಿಲ್ಲಾಧಿಕಾರಿ ತುರ್ತು ಸಭೆ ನಡೆಸಿ, ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮತ್ತು ಪ್ರಸರಣ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಿದ್ದರು.

ಆಲಪ್ಪುಳ ಮತ್ತು ಕೊಟ್ಟಾಯಂಗಳಲ್ಲಿ ಹಿನ್ನೀರು ಮತ್ತು ಜಲಮೂಲಗಳ ಪ್ರಮಾಣ ಹೆಚ್ಚಿರುವ ಕಾರಣ ರೈತರು ದೊಡ್ಡ ಮಟ್ಟದಲ್ಲಿ ಬಾತುಕೋಳಿಗಳ ಸಾಕಣೆ ಮಾಡುತ್ತಾರೆ. ಮಾಂಸ ಮತ್ತು ಮೊಟ್ಟೆಗಾಗಿ ರೈತರು ಸಾಕುತ್ತಾರೆ. ಬಾತುಕೋಳಿಗಳ ಮೊಟ್ಟೆಗೆ, ಕೋಳಿಮೊಟ್ಟೆಗಿಂತಲೂ ಅಧಿಕ ಬೆಲೆಯಿದೆ.  ಹೀಗೆ ಬೃಹತ್​ ಪ್ರಮಾಣದಲ್ಲಿ ಬಾತುಕೋಳಿಗಳ ಸಾಕಣೆ ಇಲ್ಲಿ ನಡೆಯುವುದರಿಂದ ಹಕ್ಕಿಜ್ವರದ ಪ್ರಕರಣವೂ ಆಗಾಗ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅಂದರೆ ಇಲ್ಲಿನ ಜಲಮೂಲಗಳಿಗೆ ವಲಸೆ ಬರುವ ಹಕ್ಕಿಗಳಿಂದ ಈ ವೈರಸ್ ಹರಡುತ್ತದೆ. ಆದರೆ ಇಲ್ಲಿ ಹಕ್ಕಿಜ್ವರದ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ಬಾತುಕೋಳಿಗಳು, ಇಲ್ಲಿನ ಕೋಳಿಗಳ ಮೊಟ್ಟೆಗಳು, ಮಾಂಸಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಿದೆ. ಬರೀ ಆಲಪ್ಪುಳದಲ್ಲಷ್ಟೇ ಅಲ್ಲ,  ಚಂಪಕುಳಂ, ನೆಡುಮುಡಿ, ಮುಟ್ಟಾರ್, ವಿಯಪುರಂ, ಕರುವಟ್ಟ, ತೃಕ್ಕುನ್ನಪುಳ, ತಕಝಿ, ಪುರಕ್ಕಾಡ್, ಅಂಬಲಪುಳ ದಕ್ಷಿಣ, ಅಂಬಲಪುಳ ಉತ್ತರ, ಎಡತ್ವ ಪಂಚಾಯತ್‌ಗಳು ಮತ್ತು ಹರಿಪ್ಪಾಡ್ ಪುರಸಭೆ ವ್ಯಾಪ್ತಿಯಲ್ಲೂ ನಿಷೇಧ ಅನ್ವಯ ಆಗಲಿದೆ. ಅದರ ಮಧ್ಯೆ ಹಕ್ಕಿಗಳನ್ನು ಕೊಲ್ಲುವ ಪ್ರಕ್ರಿಯೆಯೂ ಶುರುವಾಗಲಿದೆ.

ಇದನ್ನೂ ಓದಿ: ಬೆಂಗಳೂರಿಗೆ ತೆರಳುತ್ತಿದ್ದ ಕೆಕೆ ಎಕ್ಸ್​​ಪ್ರೆಸ್​ ಸ್ಫೋಟಿಸುವ ಬೆದರಿಕೆ: ಓರ್ವನನ್ನು ವಶಕ್ಕೆ ಪಡೆದ ವಾಡಿ ರೈಲ್ವೆ ಪೊಲೀಸರು

Published On - 8:38 am, Wed, 15 December 21

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ