ಬೆಂಗಳೂರಿಗೆ ತೆರಳುತ್ತಿದ್ದ ಕೆಕೆ ಎಕ್ಸ್ಪ್ರೆಸ್ ಸ್ಫೋಟಿಸುವ ಬೆದರಿಕೆ: ಓರ್ವನನ್ನು ವಶಕ್ಕೆ ಪಡೆದ ವಾಡಿ ರೈಲ್ವೆ ಪೊಲೀಸರು
ತನ್ನ ಸಹೋದರನಿಗೆ ಫೈನ್ ಹಾಕಿದ್ದಕ್ಕೆ ಆಕ್ರೋಶಗೊಂಡಿದ್ದ ಆರೋಪಿ ಮದ್ಯದ ಅಮಲಿನಲ್ಲಿ ದೆಹಲಿ-ಬೆಂಗಳೂರು ಕೆ.ಕೆ.ಎಕ್ಸಪ್ರೆಸ್ ರೈಲು ಸ್ಫೋಟಗೊಳ್ಳುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದ.
ಕಲಬುರಗಿ: ದೆಹಲಿ-ಬೆಂಗಳೂರು ಕೆ.ಕೆ.ಎಕ್ಸಪ್ರೆಸ್ ರೈಲು ಸ್ಫೋಟ ಬೆದರಿಕೆ ಕೇಸ್ಗೆ ಸಂಬಂಧಿಸಿ ಕಲಬುರಗಿ ಜಿಲ್ಲೆಯ ವಾಡಿ ರೈಲ್ವೆ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತನ್ನ ಸಹೋದರನಿಗೆ ಫೈನ್ ಹಾಕಿದ್ದಕ್ಕೆ ಆಕ್ರೋಶಗೊಂಡು ಆರೋಪಿ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ.
ತನ್ನ ಸಹೋದರನಿಗೆ ಫೈನ್ ಹಾಕಿದ್ದಕ್ಕೆ ಆಕ್ರೋಶಗೊಂಡಿದ್ದ ಆರೋಪಿ ಮದ್ಯದ ಅಮಲಿನಲ್ಲಿ ದೆಹಲಿ-ಬೆಂಗಳೂರು ಕೆ.ಕೆ.ಎಕ್ಸಪ್ರೆಸ್ ರೈಲು ಸ್ಫೋಟಗೊಳ್ಳುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ವೇಳೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನೊಬ್ಬನನ್ನು ವಶಕ್ಕೆ ಪಡೆದು ರೈಲ್ವೆ ಪೊಲೀಸರು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಇದು ಕುಡುಕ ಸಹೋದರನ ಕಿತಾಪತಿ ಎನ್ನುವುದು ಬಯಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಾಡಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿ ಮೂಲದ ಸತ್ಯ ಎನ್ನುವಾತ ಬೆಂಗಳೂರಿಗೆ ತೆರಳುತ್ತಿರುವ ಕೆಕೆ ಎಕ್ಸಪ್ರೆಸ್ ರೈಲು ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ಎಂಬುವುದು ತಿಳಿದು ಬಂದಿದೆ. ವಶಕ್ಕೆ ಪಡೆದುಕೊಂಡ ಯುವಕನಿಗೆ ಬೇರೊಂದು ರೈಲಿನಲ್ಲಿ ಬೆಂಗಳೂರಿಗೆ ಕಳುಹಿಸುವ ಸಾಧ್ಯತೆ ಇದೆ.
ಘಟನೆ ಹಿನ್ನೆಲೆ ವಶಕ್ಕೆ ಪಡೆದ ವ್ಯಕ್ತಿಯ ತಮ್ಮ ಕೆ.ಕೆ.ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ರೈಲಿನಲ್ಲೇ ಸಿಗರೇಟು ಸೇದಿದ್ದಾನೆ. ಹೀಗಾಗಿ ಆತನಿಗೆ ಫೈನ್ ಹಾಕಲಾಗಿತ್ತು. ಈ ವೇಳೆ ಫೈನ್ ಕಟ್ಟಲು ಹಣ ಇಲ್ಲದ ಕಾರಣ ಆತ ತನ್ನ ಅಣ್ಣನಿಗೆ ಕರೆ ಮಾಡಿ ಹಣ ಗೂಗಲ್ ಪೇ ಮಾಡಲು ಹೇಳಿದ್ದ. ಫೈನ್ ಕಟ್ಟಿದ ಬಳಿಕ ಅಣ್ಣನ ಬಳಿ ತನಗಾದ ಅವಮಾನವನ್ನು ಹೇಳಿಕೊಂಡಿದ್ದ. ಇಷ್ಟಕ್ಕೇ ರೊಚ್ಚಿಗೆದ್ದ ಅಣ್ಣ ಕುಡಿದ ಮತ್ತಿನಲ್ಲಿ ರೈಲ್ವೇ ಕಂಟ್ರೋಲ್ ರೂಂಗೆ ಕರೆ ಮಾಡಿ ಹಲಿ-ಬೆಂಗಳೂರು ಕೆ.ಕೆ.ಎಕ್ಸಪ್ರೆಸ್ ರೈಲು ಸ್ಫೋಟಗೊಳ್ಳಲಿದೆ. ಬಾಂಬ್ ಇಟ್ಟಿದ್ದೇನೆ ಎಂದು ಬೆದರಿಕೆ ಹಾಕಿದ್ದ.
Published On - 9:49 am, Wed, 15 December 21