ಅಪಾಯದಲ್ಲಿರುವ ದೇಶಗಳ ಪ್ರಯಾಣಿಕರಿಗೆ ಡಿಸೆಂಬರ್ 20ರಿಂದ ಆರ್‌ಟಿ-ಪಿಸಿಆರ್ ಮುಂಗಡ ಬುಕಿಂಗ್ ಕಡ್ಡಾಯ

ಕಡ್ಡಾಯ ಆರ್‌ಟಿ-ಪಿಸಿಆರ್ ಮುಂಗಡ ಬುಕಿಂಗ್ ಡಿಸೆಂಬರ್ 19 ರಂದು ರಾತ್ರಿ 11:59 ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. “ಮೊದಲ ಹಂತದಲ್ಲಿ, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್- ಆರು ಮೆಟ್ರೋ ನಗರಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಪ್ರಕಟಣೆ ಹೇಳಿದೆ.

ಅಪಾಯದಲ್ಲಿರುವ ದೇಶಗಳ ಪ್ರಯಾಣಿಕರಿಗೆ ಡಿಸೆಂಬರ್ 20ರಿಂದ ಆರ್‌ಟಿ-ಪಿಸಿಆರ್ ಮುಂಗಡ ಬುಕಿಂಗ್ ಕಡ್ಡಾಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 14, 2021 | 8:27 PM

ದೆಹಲಿ: ಕೊವಿಡ್ -19 ರ ಒಮಿಕ್ರಾನ್ ರೂಪಾಂತರದ (Omicron variant) ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಆರು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ‘ಅಪಾಯದಲ್ಲಿರುವ’ ದೇಶಗಳಿಂದ ಬರುವ ಪ್ರಯಾಣಿಕರು ಡಿಸೆಂಬರ್ 20ರಿಂದ ಕಡ್ಡಾಯವಾಗಿ RT-PCR ಪರೀಕ್ಷೆಗಳನ್ನು ಮುಂಗಡವಾಗಿ ಕಾಯ್ದಿರಿಸಬೇಕಾಗುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ(ministry of civil aviation) ಮಂಗಳವಾರ ಹೇಳಿದೆ. ಪ್ರಯಾಣಿಕರು ಅಪಾಯದಲ್ಲಿರುವ  ದೇಶಗಳಿಂದ ಬರುತ್ತಿದ್ದರೆ ಅಥವಾ ಕಳೆದ 14 ದಿನಗಳಲ್ಲಿ ಅಂತಹ ದೇಶಗಳಿಗೆ ಭೇಟಿ ನೀಡಿದ್ದರೆ ಅವರು ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮುಂಗಡ ಕಾಯ್ದಿರಿಸಲು  ಏರ್ ಸುವಿಧಾ ಪೋರ್ಟಲ್ ಅನ್ನು ಮಾರ್ಪಡಿಸಲಾಗುವುದು. ಸಂಬಂಧಿತ ವಿಮಾನ ನಿಲ್ದಾಣದ ವೆಬ್‌ಸೈಟ್‌ಗೆ ಲಿಂಕ್ ಅನ್ನು ಏರ್ ಸುವಿಧಾ ಪ್ಲಾಟ್‌ಫಾರ್ಮ್‌ನಲ್ಲಿ ಒದಗಿಸಲಾಗುವುದು. ಇದು ಸ್ವಯಂ ಘೋಷಣೆ ಫಾರ್ಮ್ (SDF) ಅನ್ನು ಭರ್ತಿ ಮಾಡುವಾಗ ಪ್ರಯಾಣಿಕರಿಗೆ ಪ್ರದರ್ಶಿಸುತ್ತದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ಸಚಿವಾಲಯ ಹೊರಡಿಸಿದ ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.

ಕಡ್ಡಾಯ ಆರ್‌ಟಿ-ಪಿಸಿಆರ್ ಮುಂಗಡ ಬುಕಿಂಗ್ ಡಿಸೆಂಬರ್ 19 ರಂದು ರಾತ್ರಿ 11:59 ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. “ಮೊದಲ ಹಂತದಲ್ಲಿ, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್- ಆರು ಮೆಟ್ರೋ ನಗರಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಪ್ರಕಟಣೆ ಹೇಳಿದೆ.

ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ತಮ್ಮ ಪ್ರಯಾಣಿಕರ ಕೊವಿಡ್ -19 ಪರೀಕ್ಷೆಯ ಪೂರ್ವ-ಬುಕಿಂಗ್ ಅನ್ನು ಅವರು ವಿಮಾನ ಹತ್ತುವ ಮೊದಲು ಪರಿಶೀಲಿಸಲು ಸಲಹೆಯನ್ನು ನೀಡುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಗೆ ಸಚಿವಾಲಯ ನಿರ್ದೇಶನ ನೀಡಿದೆ. “ಮುಂಗಡ ಬುಕಿಂಗ್‌ನಲ್ಲಿ ಪ್ರಯಾಣಿಕರಿಗೆ ತೊಂದರೆಯಾಗಿದ್ದರೆ ಅವರಿಗೆ ಬೋರ್ಡಿಂಗ್ ಅನ್ನು ನಿರಾಕರಿಸಲಾಗುವುದಿಲ್ಲ. ಆದಾಗ್ಯೂ, ಅಂತಹ ಪ್ರಯಾಣಿಕರನ್ನು ಗುರುತಿಸಲು ಮತ್ತು ಪರೀಕ್ಷೆಗಾಗಿ ವಿಮಾನ ನಿಲ್ದಾಣದ ನೋಂದಣಿ ಕೌಂಟರ್‌ಗೆ ಕರೆದೊಯ್ಯಲು ವಿಮಾನಯಾನ ಸಂಸ್ಥೆಯು ಜವಾಬ್ದಾರವಾಗಿರುತ್ತದೆ ಎಂದು ಅದು ಹೇಳಿದೆ.

ಒಮಿಕ್ರಾನ್ ಆತಂಕದ ನಡುವೆ ಭಾರತದ ‘ಅಪಾಯಕಾರಿ’ ಎಂದು ಗುರುತಿಸಿರುವ ದೇಶಗಳ ಪಟ್ಟಿಯು ಪ್ರಸ್ತುತ ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಬ್ರೆಜಿಲ್, ಚೀನಾ, ಘಾನಾ, ಹಾಂಗ್ ಕಾಂಗ್, ಇಸ್ರೇಲ್, ಮಾರಿಷಸ್, ನ್ಯೂಜಿಲೆಂಡ್, ತಾಂಜಾನಿಯಾ ಮತ್ತು ಜಿಂಬಾಬ್ವೆ ಮೊದಲಾದವುಗಳನ್ನು ಒಳಗೊಂಡಿದೆ.

ಒಮಿಕ್ರಾನ್ ನ ಹೊಸ ಪ್ರಯಾಣದ ನಿಯಮಗಳು ಡಿಸೆಂಬರ್ 1 ರಿಂದ ಜಾರಿಗೆ ಬಂದವು. ರೂಪಾಂತರದ ಹೊರಹೊಮ್ಮುವಿಕೆಯು ಸಾಮಾನ್ಯ ಅಂತರಾಷ್ಟ್ರೀಯ ವಾಣಿಜ್ಯ ವಿಮಾನಗಳ ಪುನರಾರಂಭದಲ್ಲಿ ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು. ಕಳೆದ ವರ್ಷ ಮಾರ್ಚ್‌ನಿಂದ ರದ್ದಾಗಿದ್ದ ಸೇವೆಯನ್ನು ಡಿಸೆಂಬರ್ 15 ರಿಂದ ಪುನರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ನಿಷೇಧವನ್ನು ಮುಂದಿನ ವರ್ಷ ಕನಿಷ್ಠ ಜನವರಿ 31 ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಕಳೆದ 7 ವರ್ಷಗಳಲ್ಲಿ 8.5 ಲಕ್ಷಕ್ಕೂ ಹೆಚ್ಚು ಭಾರತೀಯರು ಪೌರತ್ವ ತ್ಯಜಿಸಿದ್ದಾರೆ: ಸರ್ಕಾರ

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?