ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದ ಜನತೆಗೆ ಕೊಡುಗೆ ಘೋಷಿಸಿದ ಮಮತಾ ಬ್ಯಾನರ್ಜಿ.. ಏನದು?

ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಜನತೆಗೆ ಕೆಲವೊಂದು ಕೊಡುಗೆ ಘೋಷಿಸಿದ್ದಾರೆ.

ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದ ಜನತೆಗೆ ಕೊಡುಗೆ ಘೋಷಿಸಿದ ಮಮತಾ ಬ್ಯಾನರ್ಜಿ.. ಏನದು?
ಮಮತಾ ಬ್ಯಾನರ್ಜಿ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 04, 2020 | 1:28 PM

ಕೋಲ್ಕತ್ತ: ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಜನತೆಗೆ ಕೆಲವೊಂದು ಕೊಡುಗೆ ಘೋಷಿಸಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್​​ಗಳು ಹಾಗೂ ಮುಂದಿನ ತಿಂಗಳಿನಿಂದ ರಾಜ್ಯ ಸರ್ಕಾರಿ ನೌಕರರಿಗೆ ಶೇ.3ರಷ್ಟು ಹೆಚ್ಚಿಸಿದ ತುಟ್ಟಿ ಭತ್ಯೆ ಜೊತೆಗೆ ಕೋವಿಡ್ ಪರೀಕ್ಷೆಯ ವೆಚ್ಚವನ್ನು ಕಡಿತಗೊಳಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಸಭೆಯಲ್ಲಿ ಗುರುವಾರ ಹೇಳಿದ್ದಾರೆ.

ಆನ್​ಲೈನ್ ತರಗತಿ ನಡೆಯುವ ಈ ಸಂದರ್ಭದಲ್ಲಿ ಶಾಲೆಗಳು ಹಾಗೂ ಮದರಸ ವಿದ್ಯಾರ್ಥಿಗಳಿಗೆ ಟ್ಯಾಬ್​​ಗಳನ್ನು ವಿತರಿಸಲಾಗುವುದೆಂದು ತಿಳಿಸಿದ ಮಮತಾ, ಇದರಿಂದ 9.5 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಆಗುತ್ತದೆ ಎಂದರು.

ಕೊರೊನಾ ಸೋಂಕಿನ ಆರ್​ಟಿ-ಪಿಸಿಆರ್ ಪರೀಕ್ಷೆಯ ವೆಚ್ಚವನ್ನು ₹1250ಗಳಿಂದ ₹950 ಗೆ ಇಳಿಸಲಾಗಿದೆ. ಇದಕ್ಕೂ ಮೊದಲು ಅಕ್ಟೋಬರ್​ನಲ್ಲಿ ಪರೀಕ್ಷೆಯ ವೆಚ್ಚವನ್ನು ₹2250 ಗಳಿಂದ  ₹1250ಗೆ ಇಳಿಸಲಾಗಿತ್ತು

ಮಹಾಮಾರಿ ಕೊರೊನಾದಿಂದ ಹಲವು ವಿದ್ಯಾರ್ಥಿಗಳು ಕಂಪ್ಯೂಟರ್ ಮತ್ತು ಮೊಬೈಲ್​ಗಳಿಲ್ಲದೇ ಆನ್​ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣಕ್ಕೆ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ನೀಡಲು ನಿರ್ಧರಿಸಿದೆ ಎಂದರು.