ಕಾರವಾರ: 8 ದಿನವಾದರೂ ಸಿಗಲಿಲ್ಲ ನಿಶಾಂತ್ ಸುಳಿವು.. ಏನಾದರು ಲೆಫ್ಟಿನೆಂಟ್ ಕಮಾಂಡರ್?

ಎಂಟು ದಿನಗಳ ಹಿಂದೆ ಮಿಗ್-39 ಫೈಟರ್ ಜೆಟ್​ ಪತನದಲ್ಲಿ ನಾಪತ್ತೆಯಾಗಿರುವ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಕುರಿತು ಈವರೆಗೂ ಸುಳಿವು ದೊರಕಿಲ್ಲ. ಪಟ್ಟು ಬಿಡದ ಭಾರತೀಯ ನೌಕಾದಳ ಶೋಧ ಮುಂದುವರೆಸಿದೆ.

ಕಾರವಾರ: 8 ದಿನವಾದರೂ ಸಿಗಲಿಲ್ಲ ನಿಶಾಂತ್ ಸುಳಿವು.. ಏನಾದರು ಲೆಫ್ಟಿನೆಂಟ್ ಕಮಾಂಡರ್?
ಸ್ನೇಹಜೀವಿಯಾಗಿದ್ದ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್
Follow us
guruganesh bhat
|

Updated on:Dec 07, 2020 | 4:51 PM

ಕಾರವಾರ: ಭಾರತೀಯ ನೌಕಾದಳಕ್ಕೆ ಇಂದು ನೌಕಾ ದಿನದ ಸಂಭ್ರಮ. ಆದರೆ ಎಂಟು ದಿನಗಳ ಹಿಂದೆ ನಾಪತ್ತೆಯಾದ ಫೈಟರ್ ಜೆಟ್​ನ ಪೈಲಟ್ ಈವರೆಗೂ ಪತ್ತೆಯಾಗಿಲ್ಲ. ಹೀಗಾಗಿ, ಭಾರತೀಯ ನೌಕಾದಳದ ಅಭಿಮಾನಿಗಳು ಪೈಲಟ್​ರ ಪತ್ತೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ಎಂಟು ದಿನ ಆದರೂ ಸುಳಿವಿಲ್ಲ.. ನವೆಂಬರ್ 26ರಂದು ಪತನಗೊಂಡ ಮಿಗ್-29 ಫೈಟರ್ ಜೆಟ್​ನಿಂದ ಸಮುದ್ರಕ್ಕೆ ಜಿಗಿದಿದ್ದಾರೆ ಎಂದು ಹೇಳಲಾದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಕುರಿತು ಈವರೆಗೂ ಯಾವುದೇ ಸುಳಿವು ದೊರಕಿಲ್ಲ. ಕಳೆದ ಮೇನಲ್ಲಿ ಮದುವೆಯಾಗಿದ್ದ ನಿಶಾಂತ್ ಸಿಂಗ್​ರ ಕುರಿತು ನೌಕಾಪಡೆ ಸಮುದ್ರದ ಇಂಚಿಂಚಲ್ಲೂ ಶೋಧ ಮುಂದುವರೆಸಿದೆ.

ಮಿಗ್-29 ಪತನಗೊಂಡ ತಕ್ಷಣ ಜೆಟ್​ನಲ್ಲಿದ್ದ ಇಬ್ಬರು ಪೈಲಟ್​ಗಳೂ ಸಮುದ್ರಕ್ಕೆ ಜಿಗಿದಿದ್ದಾರೆ. ಆದರೆ ಓರ್ವ ಪೈಲಟ್ ಮಾತ್ರ ನೌಕಾಪಡೆಗೆ ಸಿಕ್ಕಿದ್ದು, ನಿಶಾಂತ್​ರ ಯಾವುದೇ ಸುಳಿವು ಲಭಿಸಿಲ್ಲ. ನಿಶಾಂತ್ ಸಿಂಗ್ ಫೈಟರ್ ಜೆಟ್​ನಿಂದ ಹೊರಬರುವುದನ್ನು ನೋಡಿರುವುದಾಗಿ ನೌಕಾಪಡೆ ರಕ್ಷಿಸಿರುವ ಇನ್ನೋರ್ವ ಪೈಲಟ್ ಹೇಳಿದ್ದಾರೆ. ರಷ್ಯಾ ನಿರ್ಮಿತ 45 ಬಲಶಾಲಿ ಜೆಟ್​ಗಳ ಹನ್ಸಾ ನೌಕಾಪಡೆಗೆ ತೆರಳಿದ್ದ ಮಿಗ್-29ನ ಅವಶೇಷಗಳು ಪತನಗೊಂಡ 50 ಕಿಮೀ ದೂರದಲ್ಲಿ ಪತ್ತೆಯಾಗಿದ್ದವು.

Explainer | ನೌಕಾಪಡೆ ದಿನ Indian Navy Day 2020 ಕರಾಚಿ ಬಂದರು ಮೇಲೆ ಭಾರತೀಯ ಯೋಧರ ಪಾರಮ್ಯದ ನೆನಪು

ನಿಶಾಂತ್ ಮದುವೆಯ ರಜೆ ಅರ್ಜಿ ಹಂಚಿಕೊಂಡ ಅಭಿಮಾನಿಗಳು.. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಮದುವೆ ಮೇ ತಿಂಗಳಲ್ಲಿ ನಿಗದಿಯಾಗಿತ್ತು. ತಮ್ಮ ಮೇಲಧಿಕಾರಿಗೆ ಮದುವೆಗೆ ರಜೆ ಕೋರಿ ಬರೆದ ರಜಾ ಅರ್ಜಿ ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ಅವರು ಮರಳಲಿ ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.

Published On - 1:33 pm, Fri, 4 December 20