ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಆರೋಪಿಗೆ ಸಮಾಜ ಸೇವೆ ಮಾಡಲು ನಿರ್ದೇಶನ ನೀಡಿದ ದೆಹಲಿ ಹೈಕೋರ್ಟ್!

| Updated By: ರಾಜೇಶ್ ದುಗ್ಗುಮನೆ

Updated on: Mar 27, 2021 | 8:19 PM

ಆದರೆ, ಮೇಲ್ನೋಟಕ್ಕೆ ಸದರಿ ಪ್ರಕರಣದಲ್ಲಿ ಸಂತ್ರಸ್ತೆಯು ಹಿಂಸೆ ಮತ್ತು ಮಾನಸಿಕ ಯಾತನೆ ಅನುಭವಿಸಿದ್ದರಿಂದ ಮತ್ತು ಕೋರ್ಟಿನಲ್ಲಿ ವಿಚಾರಣೆ ಪ್ರಕ್ರಿಯೆ ಶುರವಾದ ನಂತರವೂ ಆಕೆ ನೋವು ಅನುಭವಿಸಿದ್ದರಿಂದ ಆರೋಪಿ ಶಿಕ್ಷೆಗೆ ಅರ್ಹನಾಗಿದ್ದ ಎಂದು ಕೋರ್ಟ್ ಭಾವಿಸಿತು.

ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಆರೋಪಿಗೆ ಸಮಾಜ ಸೇವೆ ಮಾಡಲು ನಿರ್ದೇಶನ ನೀಡಿದ ದೆಹಲಿ ಹೈಕೋರ್ಟ್!
ದೆಹಲಿ ಹೈಕೋರ್ಟ್
Follow us on

ನವದೆಹಲಿ:  ಒಂದಷ್ಟು ದಿನ ಸಮಾಜ ಸೇವೆ ಮಾಡಿ ಪಾಪ ವಿಮೋಚನೆ ಮಾಡಿಕೊಳ್ಳುವಂತೆ ಅಪರಾಧಿಗೆ ಕೋರ್ಟೊಂದು ನೀಡಿರುವ ನಿದರ್ಶನಗಳಿವಿಯೇ? ಸಾಮಾನ್ಯವಾಗಿ ನಮಗೆ ಇಂಥ ಸನ್ನಿವೇಶಗಳು ಹಳೆಕಾಲದ ಸಿನಿಮಾಗಳಲ್ಲಿ ಸಿಗುತ್ತವೆ. ಆದರೆ ದೆಹಲಿ ಹೈಕೋರ್ಟ್ ಈ ಬಗೆಯ ನಿರ್ದೇಶನವನ್ನು ನೀಡಿದ ಪ್ರಸಂಗ ಶುಕ್ರವಾರದಂದು (26ನೇ ಮಾರ್ಚ್) ನಡೆದಿದೆ. ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಒಬ್ಬ ವ್ಯಕ್ತಿಗೆ ಒಂದು ತಿಂಗಳು ಕಾಲ ಮಾದಕ ವ್ಯಸನಿಗಳ ಪುನರ್​ವಸತಿ ಕೇಂದ್ರದಲ್ಲಿ ಸಮುದಾಯ ಸೇವೆ ಸಲ್ಲಿಸಿ ತಾನು ಎಸಗಿದ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳುವಂತೆ ಕೋರ್ಟ್ ನಿರ್ದೇಶನ ನೀಡಿದೆ. ಸಂತ್ರಸ್ತೆ ಮತ್ತು ಆರೋಪಿ ರಾಜಿ ಮಾಡಿಕೊಂಡಿದ್ದರಿಂದ ಅವನ ವಿರುದ್ಧ ದಾಖಲಾಗಿದ್ದ ಎಫ್​ಐಆರ್ ವಜಾಗೊಳಿಸಿಲಾಯಿತು.

ಹೈಕೋರ್ಟಿನ ಏಕ-ಸದಸ್ಯ ಪೀಠದ ನ್ಯಾಯಮೂರ್ತಿ ಸುಬ್ರಮೊನಿಯಮ್ ಪ್ರಸಾದ್ ಈ ನಿರ್ದೇಶನವನ್ನು ಜಾರಿ ಮಾಡಿ, ಸದರಿ ಪ್ರಕರಣದಲ್ಲಿ ಆರೋಪಿಯು ಪ್ರಭಾವ ಬಳಸಲು ಪ್ರಯತ್ನಿಸಿದ್ದರಿಂದ ಅವನ ಮೇಲೆ ರೂ. 1 ಲಕ್ಷ ದಂಡ ವಿಧಿಸಿದರು.

ಘಟನೆಯ ಸಂಕ್ಷಿಪ್ತ ವಿವರ

ಸಂತ್ರಸ್ತೆಯು 15 ಜುಲೈ, 2020ರಂದು ಒಂದು ದೂರನ್ನು ದಾಖಲಿಸುತ್ತಾರೆ, ಆಕೆಯ ದೂರಿನ ಸಾರಾಂಶವೇನೆಂದರೆ, ಆಕೆ ಪಿವಿಆರ್ ಕಾಂಪ್ಲೆಕ್ಸ್ ಒಂದರಲ್ಲಿ ಕುಳಿತ್ತಿದ್ದಾಗ ಅಲ್ಲಿಗೆ ಬಂದ ಮನವಿದಾರ (ಆರೋಪಿ) ಆಕೆಯೊಂದಿಗೆ ಮಾತಿಗೆ ಶುರುವಿಟ್ಟುಕೊಂಡು ತಾನೊಬ್ಬ ಆಗರ್ಭ ಶ್ರೀಮಂತ ಅಂತ ಪರಿಚಯಿಸಿಕೊಂಡ.

ಸಂತ್ರಸ್ತೆ ಅವನ ಮಾತುಗಳಲ್ಲಿ ಯಾವುದೇ ಅಭಿರುಚಿ ತೋರದೆ, ಅಲ್ಲಿಂದ ತೊಲಗುವಂತೆ ಗದರಿದಾಗ, ಮನವಿದಾರ ಜಾಗ ಖಾಲಿ ಮಾಡಿದ್ದಾನೆ. ಆದರೆ ಕೇವಲ ಹತ್ತ ನಿಮಿಷಗಳ ನಂತರ ವಾಪಸ್ಸು ಬಂದು ಪುನಃ ಆಕೆಯೊಂದಿಗೆ ಮಾತಾಡುವ ಪ್ರಯತ್ನ ಮಾಡಿದ್ದಾನೆ.
ಅವನ ಕಾಟದಿಂದ ಬೇಸತ್ತ ಮಹಿಳೆಯು ತಾನೇ ಅಲ್ಲಿಂದಎದ್ದು ಹೋಗಲು ಪ್ರಯತ್ನಿಸಿದಾಗ ಮನವಿದಾರ ಆಕೆಯ ಕೈಯನ್ನು ಬೆನ್ನ ಹಿಂದೆ ಬರುವ ಹಾಗೆ ತಿರುಚಿದ್ದಾನೆ. ನಂತರ ಅವನು ಸಂತ್ರಸ್ತೆಯ ಕೆನ್ನೆಗೆ ಹೊಡೆದಾಗ ಅಕೆ ಧರಿಸಿದ್ದ ಕನ್ನಡಕ ನೆಲಕ್ಕೆ ಬಿದ್ದಿದೆ. ಆನಂತರ ಅವನು ತನ್ನಲ್ಲಿದ್ದ ಬ್ಯಾಗ್​ನಿಂದಲೂ ಆಕೆಗೆ ಹೊಡೆದಿದ್ದಾನೆ.

ಪ್ರಾತಿನಿಧಿಕ ರೇಖಾ ಚಿತ್ರ

ಆದರೆ, ದೂರುದಾರೆ ಮತ್ತು ಆರೋಪಿ/ಮನವಿದಾರ ತಮ್ಮ ನಡುವೆ ರಾಜಿ ಮಾಡಿಕೊಂಡಿದ್ದರಿಂದ ಅವನ ವಿರುದ್ಧ ಕೋಡ್​ ಆಫ್ ಕ್ರಿಮಿನಲ್ ಪ್ರೊಸೀಜರ್ (ಸಿಆರ್​ಪಿಸಿ) ಸೆಕ್ಷನ್ 482ರ ಅಡಿಯಲ್ಲಿ ದಾಖಲಾಗಿದ್ದ ದೂರನ್ನು ವಜಾಮಾಡಲಾಯಿತು. ಪ್ರಕರಣವನ್ನು ಮುಂದುವರಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಪೀಠ ಭಾವಿಸಿತು.

ಆದರೆ, ಮೇಲ್ನೋಟಕ್ಕೆ ಸದರಿ ಪ್ರಕರಣದಲ್ಲಿ ಸಂತ್ರಸ್ತೆಯು ಹಿಂಸೆ ಮತ್ತು ಮಾನಸಿಕ ಯಾತನೆ ಅನುಭವಿಸಿದ್ದರಿಂದ ಮತ್ತು ಕೋರ್ಟಿನಲ್ಲಿ ವಿಚಾರಣೆ ಪ್ರಕ್ರಿಯೆ ಶುರವಾದ ನಂತರವೂ ಆಕೆ ನೋವು ಅನುಭವಿಸಿದ್ದರಿಂದ ಆರೋಪಿ ಶಿಕ್ಷೆಗೆ ಅರ್ಹನಾಗಿದ್ದ ಎಂದು ಕೋರ್ಟ್ ಭಾವಿಸಿತು. ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 354 ಮತ್ತು 506 ರ ಅಡಿ ಮನವಿದಾರ ಅಪರಾಧವೆಸಗಿದ್ದಾನೆ ಅಂತ ಕೋರ್ಟ್ ಹೇಳಿತು. ಸಿಸಿಟಿವಿ ಫುಟೇಜ್ ಸಹ ಅಪರಾಧ ನಡೆದಿರುವುದನ್ನು ಸ್ಪಷ್ಟಪಡಿಸಿವೆ. ಆದರೆ, ದೂರುದಾರೆ, ಪ್ರಕರಣವನ್ನು ಮುಂದುವರಿಸಲು ನಿರಾಸಕ್ತಿ ತೋರಿದ್ದರಿಂದ ಅದನ್ನು ಮುಂದುವರಿಸುಸುವುದರಲ್ಲಿ ಯಾವುದೇ ಆರ್ಥವಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.

ಎಫ್​ಐಆರ್ ವಜಾಗೊಳಿಸಿದ ನಂತರ ಸ್ವಲ್ಪ ಸಮಯವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿದಾರನಿಗೆ ನಿರ್ದೇಶನ ನೀಡಿ, ಮತ್ತೊಮ್ಮೆ ಅಂಥ ಕೃತ್ಯಗಳನ್ನು ಎಸೆಗದಂತೆ ಎಚ್ಚರಿಕೆ ನೀಡಿತು.

ಮನವಿದಾರನಿಗೆ ಏಪ್ರಿಲ್ 1, 2021 ರಿಂದ ಏಪ್ರಿಲ್ 30, 2021 ರವರೆಗೆ ಮಾದಕ ವ್ಯಸನಿಗಳ ಪುನರ್​ವಸತಿ ಕೇಂದ್ರದಲ್ಲಿ ಸಮುದಾಯ ಸೇವೆ ಸಲ್ಲಿಸುವಂತೆ ಸೂಚಿಸಿತು.

ಅಲ್ಲದೆ ರೂ. 1 ಲಕ್ಷ ದಂಡದ ಮೊತ್ತದಲ್ಲಿ 25,000 ರೂ.ಗಳನ್ನು ವಕೀಲರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಗೆ,
25,000 ರೂ.ಗಳನ್ನು ನಿರ್ಮಲ್ ಛಾಯಾ ಪ್ರತಿಷ್ಠಾನಕ್ಕೆ ಮತ್ತು 50,000 ರೂ.ಗಳನ್ನು ಯುದ್ಧದಲ್ಲಿ ಗಾಯಗೊಳ್ಳುವ ಸೇನಾ ಯೋಧರ ಕಲ್ಯಾಣ ನಿಧಿಗೆ ನೀಡುವಂತೆ ಸೂಚಿಸಿತು.

ಇತ್ತೀಚಿಗೆ, ಇಂಥದ್ದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ 21-ವರ್ಷ ವಯಸ್ಸಿನ ಯುವಕನೊಬ್ಬನಿಗೆ ಅವನ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಎರಡು ಪಾರ್ಟಿಗಳ ನಡುವೆ ರಾಜಿ ನಡೆದ ಕಾರಣ ವಜಾಗೊಂಡ ಮೇಲೆ, ಒಂದು ತಿಂಗಳ ಕಾಲ ಗುರುದ್ವಾರ ಬಗಲಾ ಸಾಹಿಬ್​ನಲ್ಲಿ ಒಂದು ತಿಂಗಳವರೆಗೆ ಸಮುದಾಯ ಸೇವೆ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: Bengaluru Crime ಲೆಕ್ಚರರ್ ಮಗನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಯುವಕ ಅರೆಸ್ಟ್​