ಆ್ಯಪ್ ಮೂಲಕ ನೀಡುತ್ತಿದ್ದ ಸಾಲಕ್ಕೆ ಶೇ 35 ಬಡ್ಡಿ! ರೈಡ್ ವೇಳೆ ಹೊರಬಿತ್ತು ಭಯಾನಕ ಸತ್ಯ
ವಂಚನೆಗೆ ಬಳಕೆಯಾದ 75 ಬ್ಯಾಂಕ್ ಖಾತೆ ವಹಿವಾಟಿಗೆ ನಿರ್ಬಂಧ ಹೇರಲಾಗಿದೆ. ಈ 75 ಖಾತೆಗಳಲ್ಲಿ ಸುಮಾರು 423 ಕೋಟಿ ರೂಪಾಯಿ ಇತ್ತು ಎನ್ನಲಾಗಿದೆ. ಈ ರೀತಿ ವಂಚನೆಗೆ 30 ಆ್ಯಪ್ಗಳು ಬಳಕೆ ಆಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್: ಆ್ಯಪ್ ಮೂಲಕ ಸಾಲ ನೀಡಿ ಅದಕ್ಕೆ ಶೇ 35ರವರೆಗೆ ಬಡ್ಡಿ ವಿಧಿಸುತ್ತಿದ್ದ ಪ್ರಕರಣ ಗುರುಗ್ರಾಮ ಹಾಗೂ ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅನೇಕರನ್ನು ಬಂಧಿಸಲಾಗಿದೆ. ವಂಚನೆಗೆ ಬಳಕೆಯಾದ 75 ಬ್ಯಾಂಕ್ ಖಾತೆ ವಹಿವಾಟಿಗೆ ನಿರ್ಬಂಧ ಹೇರಲಾಗಿದೆ. ಈ 75 ಖಾತೆಗಳಲ್ಲಿ ಸುಮಾರು 423 ಕೋಟಿ ರೂಪಾಯಿ ಇತ್ತು ಎನ್ನಲಾಗಿದೆ. ಈ ರೀತಿ ವಂಚನೆಗೆ 30 ಆ್ಯಪ್ಗಳು ಬಳಕೆ ಆಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲ ನೀಡಿದವರು ಕಿರುಕುಳ ನೀಡಿದ ಪ್ರಕರಣದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಹೀಗಾಗಿ, ಪೊಲೀಸರು ಹೈದರಾಬಾದ್, ಗುರುಗ್ರಾಮ ಹಾಗೂ ಹರಿಯಾಣದಲ್ಲಿ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ 16 ಜನರನ್ನು ಬಂಧಿಸಿದ್ದರು. ಈ ವೇಳೆ ನಿಜವಾದ ವಿಚಾರ ಹೊರ ಬಿದ್ದಿದೆ.
ಶರತ್ ಚಂದ್ರ ಎಂಬಾತ ಆನಿಯನ್ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್ ಮತ್ತು ಕ್ರೆಡ್ ಫೋಕ್ಸ್ ಟೆಕ್ನಾಲಜಿ ಕಂಪೆನಿ ಸ್ಥಾಪನೆ ಮಾಡಿದ್ದ. ಈ ಸಂಸ್ಥೆ ಹೆಸರಲ್ಲಿ ಶರತ್ ಆ್ಯಪ್ ಮೂಲಕ ಸಾಲ ನೀಡುತ್ತಿದ್ದ. ಬೆಂಗಳೂರಿನಲ್ಲಿ ಈ ಎರಡು ಕಂಪೆನಿಗಳು ನೋಂದಣಿ ಆಗಿದ್ದವು. ಗುರುಗ್ರಾಮ ಹಾಗೂ ಹೈದರಾಬಾದ್ನಲ್ಲಿ ಕಾಲ್ಸೆಂಟರ್ಗಳನ್ನು ಇವನು ತೆರೆದಿದ್ದ. ಈ ಕಾಲ್ ಸೆಂಟರ್ ಮೂಲಕ ಸಾಲ ಪಡೆದವರಿಗೆ ಕಿರುಕುಳ ನೀಡುವ ಕೆಲಸ ನಡೆಯುತ್ತಿತ್ತು. ಈ ರೀತಿ ಕೆಲಸಕ್ಕಾಗಿಯೇ ಸಾವಿರಕ್ಕೂ ಅಧಿಕ ಜನರನ್ನು ನೇಮಕ ಮಾಡಿಕೊಳ್ಳಲಾಗಿತ್ತು.
ಈ ಘಟನೆ ಬೆನ್ನಲ್ಲೇ ಆರ್ಬಿಐ ಕಠಿಣ ಸಂದೇಶವೊಂದನ್ನು ರವಾನೆ ಮಾಡಿದೆ. ಆ್ಯಪ್ ಮೂಲಕ ಲೋನ್ ನೀಡುವುದಾಗಿ ನಂಬಿಸಿ ಮೋಸ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿವೆ. ಅಲ್ಲದೆ, ಈ ರೀತಿ ಆ್ಯಪ್ಗಳನ್ನು ಬಳಕೆ ಮಾಡಿ ಮೋಸ ಹೋಗಬೇಡಿ ಎನ್ನುವ ಕಿವಿಮಾತನ್ನೂ ಹೇಳಿದೆ.
ಈ ಮಾಜಿ ಸಂಸದನ ಮನೆಯಲ್ಲಿರುವ ಕೆಲಸಗಾರರ ಹೆಸರಲ್ಲಿದೆ ಒಂಬತ್ತು ಕಂಪೆನಿ!
Published On - 9:53 pm, Wed, 23 December 20