ಕುಡಿದು ಟೈಟಾಗಿ ಸರ್ಕಾರಿ ಬಸ್ಸನ್ನೇ ಕದ್ದು ಪರಾರಿಯಾಗುತ್ತಿದ್ದ ಭೂಪ ಅರೆಸ್ಟ್

ದೇವನಹಳ್ಳಿ: ಬೈಕ್, ಕಾರು ಕಳ್ಳತನ ‌ಮಾಡೋರನ್ನ ನೋಡಿದ್ವಿ ಆದ್ರೆ ಇಲ್ಲೊಬ್ಬ ಭೂಪ ನೇರವಾಗಿ ಆಂಧ್ರದ ಸರ್ಕಾರಿ ಬಸ್​ನೇ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಿವಾಸಿ ಆಂಧ್ರದಲ್ಲಿ ಬಸ್ ಕಳವು ಮಾಡಿ‌ ಸಿಕ್ಕಿ ಹಾಕಿಕೊಂಡ ಆ‌ಸಾಮಿ. ಕಳೆದ ಎರಡು ದಿನಗಳ ‌ಹಿಂದೆ ಆಂಧ್ರಪ್ರದೇಶದ ಧರ್ಮವರಂಬನ ಬಸ್ ಡಿಪೋ ಬಳಿ ಚಾಲಕ ಮತ್ತು ನಿರ್ವಾಹಕ ಬಸ್ ನಿಲ್ಲಿಸಿ ‌ಉಪಹಾರ ಮಾಡಲು ಹೋದಾಗ ದೇವನಹಳ್ಳಿ ‌ನಿವಾಸಿ ಮುಜಾಮಿಲ್ ಕುಡಿದ ಅಮಲಿನಲ್ಲಿ‌ ಬಸ್ ಕದ್ದು ಪರಾರಿಯಾಗಿದ್ದ. ಇನ್ನೂ […]

ಕುಡಿದು ಟೈಟಾಗಿ ಸರ್ಕಾರಿ ಬಸ್ಸನ್ನೇ ಕದ್ದು ಪರಾರಿಯಾಗುತ್ತಿದ್ದ ಭೂಪ ಅರೆಸ್ಟ್

Updated on: May 27, 2020 | 2:08 PM

ದೇವನಹಳ್ಳಿ: ಬೈಕ್, ಕಾರು ಕಳ್ಳತನ ‌ಮಾಡೋರನ್ನ ನೋಡಿದ್ವಿ ಆದ್ರೆ ಇಲ್ಲೊಬ್ಬ ಭೂಪ ನೇರವಾಗಿ ಆಂಧ್ರದ ಸರ್ಕಾರಿ ಬಸ್​ನೇ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಿವಾಸಿ ಆಂಧ್ರದಲ್ಲಿ ಬಸ್ ಕಳವು ಮಾಡಿ‌ ಸಿಕ್ಕಿ ಹಾಕಿಕೊಂಡ ಆ‌ಸಾಮಿ.

ಕಳೆದ ಎರಡು ದಿನಗಳ ‌ಹಿಂದೆ ಆಂಧ್ರಪ್ರದೇಶದ ಧರ್ಮವರಂಬನ ಬಸ್ ಡಿಪೋ ಬಳಿ ಚಾಲಕ ಮತ್ತು ನಿರ್ವಾಹಕ ಬಸ್ ನಿಲ್ಲಿಸಿ ‌ಉಪಹಾರ ಮಾಡಲು ಹೋದಾಗ ದೇವನಹಳ್ಳಿ ‌ನಿವಾಸಿ ಮುಜಾಮಿಲ್ ಕುಡಿದ ಅಮಲಿನಲ್ಲಿ‌ ಬಸ್ ಕದ್ದು ಪರಾರಿಯಾಗಿದ್ದ. ಇನ್ನೂ ಬಸ್​ನಲ್ಲಿ ಜಿಪಿಎಸ್ ಅಳವಡಿಸಿದ್ದ ಕಾರಣ ಅಧಿಕಾರಿಗಳು ಬಸ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿದರು. ಸುಮಾರು 30 ಕೀಮಿ ದೂರ ಬಂದ ಬಳಿಕ ಬಸ್ ತಡೆದು ಬಸ್ ಓಡಿಸಿಕೊಂಡು ಹೋಗ್ತಿದ್ದ ಮುಜಾಮಿಲ್​ನನ್ನು ಅನಂತಪುರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

Published On - 10:40 am, Wed, 27 May 20