ಕೈಕಾಲು ಕಟ್ಟಿ ನಾಯಿಯನ್ನ ಕೊಳಕ್ಕೆ ಎಸೆದು ಟಿಕ್ ಟಾಕ್ ಮಾಡಿದ್ದ ಪುಂಡರು ಅರೆಸ್ಟ್
ಭೋಪಾಲ್: ಹದಿಹರೆಯದ ಇಬ್ಬರು ಯುವಕರು ಕೈಕಾಲು ಕಟ್ಟಿ ನಾಯಿಯನ್ನು ಕೊಳಕ್ಕೆ ಎಸೆದು ಟಿಕ್ ಟಾಕ್ ವಿಡಿಯೋ ಮಾಡಿದ್ದರು. ಅದು ತುಂಬ ವೈರಲ್ ಸಹ ಆಗಿತ್ತು. ಈಗ ಇಬ್ಬರನ್ನು ಗುರುತಿಸಿ ಪೊಲೀಸರು ಬಂಧಿಸಿದ್ದಾರೆ. ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಭಾರತವು ಆನ್‌ಲೈನ್‌ನಲ್ಲಿ ವಿಡಿಯೋ ನೋಡಿ ಅದರಲ್ಲಿ ಇರುವ ದುಷ್ಕರ್ಮಿಗಳನ್ನು ಗುರುತಿಸಲು ಸಂಸ್ಥೆಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿತ್ತು. ಹಾಗೂ 50,000 ರೂಪಾಯಿ ಬಹುಮಾನ ಸಹ ಘೋಷಿಸಿತ್ತು. ಅನೇಕ ಜನರು ಈ ಪೋಸ್ಟ್ನ ರಿಟ್ವೀಟ್ […]
ಭೋಪಾಲ್: ಹದಿಹರೆಯದ ಇಬ್ಬರು ಯುವಕರು ಕೈಕಾಲು ಕಟ್ಟಿ ನಾಯಿಯನ್ನು ಕೊಳಕ್ಕೆ ಎಸೆದು ಟಿಕ್ ಟಾಕ್ ವಿಡಿಯೋ ಮಾಡಿದ್ದರು. ಅದು ತುಂಬ ವೈರಲ್ ಸಹ ಆಗಿತ್ತು. ಈಗ ಇಬ್ಬರನ್ನು ಗುರುತಿಸಿ ಪೊಲೀಸರು ಬಂಧಿಸಿದ್ದಾರೆ. ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಭಾರತವು ಆನ್‌ಲೈನ್‌ನಲ್ಲಿ ವಿಡಿಯೋ ನೋಡಿ ಅದರಲ್ಲಿ ಇರುವ ದುಷ್ಕರ್ಮಿಗಳನ್ನು ಗುರುತಿಸಲು ಸಂಸ್ಥೆಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿತ್ತು. ಹಾಗೂ 50,000 ರೂಪಾಯಿ ಬಹುಮಾನ ಸಹ ಘೋಷಿಸಿತ್ತು.
ಅನೇಕ ಜನರು ಈ ಪೋಸ್ಟ್ನ ರಿಟ್ವೀಟ್ ಮಾಡಿದ್ದರು. ಅಂತಿಮವಾಗಿ ಪೊಲೀಸರ ಕಾರ್ಯಚರಣೆಯೊಂದಿಗೆ ಪ್ರಾಣಿ ಹಿಂಸೆ ಮಾಡಿದ್ದ ದುಷ್ಕರ್ಮಿಗಳನ್ನು ಗುರುತಿಸಿ ಬಂಧಿಸಿಲಾಗಿದೆ. ಈ ಯುವಕರನ್ನು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಗುರುತಿಸಿ ವಶಕ್ಕೆ ಪಡೆಯಲಾಗಿದೆ.
ಮಾಧವ್ ನಗರ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ನಾಯಿ ಕೊಲೆಗಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಪಿಸಿಎ) ಕಾಯ್ದೆ 1960 ರ ಸೆಕ್ಷನ್ 11 (1) (ಎ) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು PETA ತಿಳಿಸಿದೆ. ಆರೋಪಿಗಳಲ್ಲಿ ಒಬ್ಬನು 19 ವರ್ಷದ ಸನ್ನಿ ಬೋರಾಸಿ. ಮತ್ತೊಬ್ಬ ಅಪ್ರಾಪ್ತ ವಯಸ್ಕನಾಗಿದ್ದಾನೆ. ಇಷ್ಟು ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಕ್ಕಾಗಿ PETA ಪೊಲೀಸರನ್ನು ಶ್ಲಾಘಿಸಿದೆ.
Published On - 7:06 am, Wed, 27 May 20