ಅಟಲ್​ ಸುರಂಗಮಾರ್ಗದಲ್ಲಿ ಪೊಲೀಸರ ಗೂಂಡಾಗಿರಿ: ವೈರಲ್​ ಆಯ್ತು ವಿಡಿಯೋ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 04, 2021 | 7:19 PM

ಈ ಹಲ್ಲೆ ಶನಿವಾರ ನಡೆದಿದೆ ಎನ್ನಲಾಗುತ್ತಿದೆ. ಈ ವೇಳೆ ಸುರಂಗದಲ್ಲಿ ಯಾರು ಕರ್ತವ್ಯದಲ್ಲಿದ್ದರು ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ಗೂಂಡಾಗಿರಿ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಅಟಲ್​ ಸುರಂಗಮಾರ್ಗದಲ್ಲಿ ಪೊಲೀಸರ ಗೂಂಡಾಗಿರಿ: ವೈರಲ್​ ಆಯ್ತು ವಿಡಿಯೋ
ಅಟಲ್​ ಸುರಂಗ ಮಾರ್ಗ
Follow us on

ನವದೆಹಲಿ: ಹಿಮಾಚಲ ಪ್ರದೇಶದ ಅಟಲ್​ ಸುರಂಗ ಮಾರ್ಗದಲ್ಲಿ ಪೊಲೀಸರು ವ್ಯಕ್ತಿಯೊಬ್ಬನಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸ್​ ಇಲಾಖೆ ತನಿಖೆಗೆ ಆದೇಶಿಸಿದೆ.

ಭಾನುವಾರ ಹಿಮಬಿದ್ದ ಕಾರಣ ಸುರಂಗ ಮಾರ್ಗದಲ್ಲಿ ಭಾರೀ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಈ ವೇಳೆ ವ್ಯಕ್ತಿಯನ್ನು ಕೂರಿಸಿ ಪೊಲೀಸರು ಒದ್ದಿದ್ದಾರೆ. ಈ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್​ ಆಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಶನಿವಾರ ಈ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಈ ವೇಳೆ ಸುರಂಗದಲ್ಲಿ ಯಾರು ಕರ್ತವ್ಯದಲ್ಲಿದ್ದರು ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ಗೂಂಡಾಗಿರಿ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಹಿಮಪಾತದಲ್ಲಿ ಸಿಲುಕಿದ್ದ ಸುಮಾರು 300 ಪ್ರವಾಸಿಗರನ್ನು ಹಿಮಾಚಲ ಪ್ರದೇಶದ ಅಟಲ್ ರೊಹ್ಟಾಂಗ್ ಸುರಂಗಮಾರ್ಗದ ಬಳಿ ಪೊಲೀಸರು ಶನಿವಾರ ರಕ್ಷಿಸಿದ್ದರು.

ಅಟಲ್ ಸುರಂಗದ ಬಳಿ ಹಿಮಪಾತದಲ್ಲಿ ಸಿಲುಕಿದ್ದ 300 ಪ್ರವಾಸಿಗರನ್ನು ರಕ್ಷಿಸಿದ ಪೊಲೀಸರು