ಅಪ್ಪನ ಗೊರಕೆಗೆ ಬೇಸತ್ತ ಮಗನಿಂದ ತಂದೆಯ ಘೋರ ಹತ್ಯೆ, ಎಲ್ಲಿ?
ಲಕ್ನೋ: ತಂದೆಯ ಗೊರಕೆ ಕಾಟಕ್ಕೆ ಬೇಸತ್ತ ಮಗ ತನ್ನ ಅಪ್ಪನನ್ನೇ ಬರ್ಬರವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಪಿಲಿಬಿತ್ ಜಿಲ್ಲೆಯ ಸೌಧ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 65 ವರ್ಷದ ರಾಮ್ಸ್ವರೂಪ್ ಮಗನಿಂದ ಹತನಾದ ದುರ್ದೈವಿ. ಸೌಧ ಗ್ರಾಮದ ನಿವಾಸಿಯಾದ ರಾಮ್ಸ್ವರೂಪ್ ತನ್ನ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಾದ ನವೀನ್ ಮತ್ತು ಮುಕೇಶ್ ಜೊತೆ ವಾಸವಿದ್ದನು. ಈ ಹಿಂದೆ ಹಲವಾರು ಬಾರಿ ರಾಮ್ ಸ್ವರೂಪ್ ಗೊರಕೆ ಹೊಡೆಯುವ ವಿಚಾರವಾಗಿ ಆತನ ದೊಡ್ಡ ಮಗ ನವೀನ್ನೊಟ್ಟಿಗೆ ಗಲಾಟೆಗಳಾಗಿತ್ತು ಎಂದು […]
ಲಕ್ನೋ: ತಂದೆಯ ಗೊರಕೆ ಕಾಟಕ್ಕೆ ಬೇಸತ್ತ ಮಗ ತನ್ನ ಅಪ್ಪನನ್ನೇ ಬರ್ಬರವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಪಿಲಿಬಿತ್ ಜಿಲ್ಲೆಯ ಸೌಧ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 65 ವರ್ಷದ ರಾಮ್ಸ್ವರೂಪ್ ಮಗನಿಂದ ಹತನಾದ ದುರ್ದೈವಿ.
ಸೌಧ ಗ್ರಾಮದ ನಿವಾಸಿಯಾದ ರಾಮ್ಸ್ವರೂಪ್ ತನ್ನ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಾದ ನವೀನ್ ಮತ್ತು ಮುಕೇಶ್ ಜೊತೆ ವಾಸವಿದ್ದನು. ಈ ಹಿಂದೆ ಹಲವಾರು ಬಾರಿ ರಾಮ್ ಸ್ವರೂಪ್ ಗೊರಕೆ ಹೊಡೆಯುವ ವಿಚಾರವಾಗಿ ಆತನ ದೊಡ್ಡ ಮಗ ನವೀನ್ನೊಟ್ಟಿಗೆ ಗಲಾಟೆಗಳಾಗಿತ್ತು ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳ ಹಿಂದೆ, ರಾಮ್ಸ್ವರೂಪ್ ಪತ್ನಿ ಹಾಗೂ ಕಿರಿಯ ಮಗ ಮುಕೇಶ್ ತಮ್ಮ ನೆಂಟರ ಮನೆಗೆ ಹೋಗಿದ್ದರಂತೆ. ಈ ವೇಳೆ, ಕಳೆದ ಮಂಗಳವಾರ ರಾತ್ರಿಯಂದು ನವೀನ್ ತನ್ನ ತಂದೆಯ ಜೊತೆ ಗೊರಕೆ ವಿಚಾರವಾಗಿ ಮತ್ತೊಮ್ಮೆ ತಗಾದೆ ತೆಗೆದಿದ್ದನಂತೆ. ಇಬ್ಬರ ನಡುವೆ ತೀವ್ರ ವಾಗ್ವಾದ ಸಂಭವಿಸಿದೆ. ಕೊನೆಗೆ, ನವೀನ್ ಕೋಪದ ಕೈಗೆ ಬುದ್ಧಿ ಕೊಟ್ಟು ರಾಮ್ ಸ್ವರೂಪ್ಗೆ ದೊಣ್ಣೆಯಿಂದ ಸಿಕ್ಕಾಪಟ್ಟೆ ಹೊಡೆದಿದ್ದಾನೆ.
ದೊಣ್ಣೆಯ ಏಟಿನಿಂದ ಕುಸಿದುಬಿದ್ದ ರಾಮ್ ಸ್ವರೂಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆಗ ನವೀನ್ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇನ್ನು ಕಿರಿಯ ಮಗ ಮುಕೇಶ್ ಮನೆಗೆ ಹಿಂದಿರುಗಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಇದೀಗ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ಪರಾರಿಯಾದ ಮುಕೇಶ್ನ ಪತ್ತೆಹಚ್ಚಲು ಮುಂದಾಗಿದ್ದಾರೆ.
Published On - 3:04 pm, Thu, 13 August 20