ಹೆಚ್ಚುವರಿಯಾಗಿ 50 ರೂ. ಕೊಡುವಂತೆ ಕೇಳಿದ್ದಕ್ಕೆ ಬಟ್ಟೆ ಅಂಗಡಿಯವನ ಬೆರಳು ಕಚ್ಚಿ ವ್ಯಕ್ತಿ ಪರಾರಿ

|

Updated on: Apr 14, 2024 | 12:22 PM

ಹೆಚ್ಚುವರಿಯಾಗಿ 50 ರೂ. ಕೊಡುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಬಟ್ಟೆ ಅಂಗಡಿಯವನ ಬೆರಳು ಕಚ್ಚಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಬಟ್ಟೆ ಅಂಗಡಿಗೆ ಹೋಗಿ ಮಗಳಿಗೆ ಫ್ರಾಕ್​ ಒಂದನ್ನು ಖರೀದಿಸಿದ್ದರು. ಮಾಲೀಕ ಶಿವಚಂದ್ರ ಕಾರವಾರಿಯಾ ಅವರಿಗೆ ಹಣ ಕೊಟ್ಟು ಬಟ್ಟೆ ತೆಗೆದುಕೊಂಡು ಹೋಗಿದ್ದರು.ಆದರೆ ಮನೆಗೆ ಹೋಗಿ ಮಗಳಿಗೆ ಫ್ರಾಕ್ ಹಾಕಿದಾಗ ಅದು ಚಿಕ್ಕ ಗಾತ್ರದಲ್ಲಿರುವುದು ಗೊತ್ತಾಗಿದೆ.

ಹೆಚ್ಚುವರಿಯಾಗಿ 50 ರೂ. ಕೊಡುವಂತೆ ಕೇಳಿದ್ದಕ್ಕೆ ಬಟ್ಟೆ ಅಂಗಡಿಯವನ ಬೆರಳು ಕಚ್ಚಿ ವ್ಯಕ್ತಿ ಪರಾರಿ
ಪೊಲೀಸ್
Image Credit source: India Today
Follow us on

ಹೆಚ್ಚುವರಿಯಾಗಿ 50 ರೂ. ಕೊಡುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಬಟ್ಟೆ ಅಂಗಡಿಯವನ ಬೆರಳು ಕಚ್ಚಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಬಟ್ಟೆ ಅಂಗಡಿಗೆ ಹೋಗಿ ಮಗಳಿಗೆ ಫ್ರಾಕ್​ ಒಂದನ್ನು ಖರೀದಿಸಿದ್ದರು. ಮಾಲೀಕ ಶಿವಚಂದ್ರ ಕಾರವಾರಿಯಾ ಅವರಿಗೆ ಹಣ ಕೊಟ್ಟು ಬಟ್ಟೆ ತೆಗೆದುಕೊಂಡು ಹೋಗಿದ್ದರು.ಆದರೆ ಮನೆಗೆ ಹೋಗಿ ಮಗಳಿಗೆ ಫ್ರಾಕ್ ಹಾಕಿದಾಗ ಅದು ಚಿಕ್ಕ ಗಾತ್ರದಲ್ಲಿರುವುದು ಗೊತ್ತಾಗಿದೆ.

ಮರುದಿನ ದೊಡ್ಡ ಗಾತ್ರದ ಫ್ರಾಕ್​ ಖರೀದಿಸಬೇಕೆಂದು ಮತ್ತೆ ಅದೇ ಬಟ್ಟೆ ಅಂಗಡಿಗೆ ಬಂದಿದ್ದಾರೆ. ಬಳಿಕ ದೊಡ್ಡ ಫ್ರಾಕ್​ ಕೊಡಿ ಎಂದು ಕೇಳಿದ್ದಾರೆ, ಅದಕ್ಕೆ ಅಂಗಡಿ ಮಾಲೀಕ ಆಯ್ತು ತಗೊಳ್ಳಿ ಆದರೆ ಈ ಫ್ರಾಕ್​ನ ಗಾತ್ರ ಉದ್ದವಾದ ಕಾರಣ ಇನ್ನೂ 50 ರೂ. ಹೆಚ್ಚುವರಿಯಾಗಿ ನೀಡಬೇಕು ಎಂದು ಕೇಳಿದ್ದಾರೆ.

ಅದಕ್ಕೆ ಕೋಪಗೊಂಡ ಗ್ರಾಹಕ ವಾದ ನಡೆಸಿದ್ದಾರೆ, 50 ರೂ. ಕೊಡುವುದಿಲ್ಲ ಎಂದು ಜಗಳವಾಡಿದ್ದಾರೆ. ಬಳಿಕ ಅಂಗಡಿ ಮಾಲೇಕ ಹಾಗೂ ಹಾಗೂ ಆತನ ಮಗನ ಕೈಗೆ ಕಚ್ಚಿ ಪರಾರಿಯಾಗಿದ್ದಾನೆ. ಗಾಯಗೊಂಡ ಕಾರವಾರಿಯಾ ಸಮೀಪದ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಅಂಗಡಿಯವರ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.

ಮತ್ತಷ್ಟು ಓದಿ: Shocking: ಕನಸಿನಲ್ಲಿ ದೇವಿ ನರಬಲಿ ಕೇಳಿದಳು ಎಂದು ವ್ಯಕ್ತಿಯ ಹತ್ಯೆಗೈದ ಮಹಿಳೆ

ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಆತನನ್ನು ಬಂಧಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ