ಪ್ರೇಯಸಿಯ ಪತಿಯಿಂದ ತಪ್ಪಿಸಿಕೊಳ್ಳಲು ಐದನೇ ಅಂತಸ್ತಿನಿಂದ ಹಾರಿದ ಯುವಕ; ಗಾಬರಿ ಪ್ರಾಣಕ್ಕೇ ಕುತ್ತು ತಂದ ಘಟನೆ ಇದು !

| Updated By: Lakshmi Hegde

Updated on: Dec 16, 2021 | 2:54 PM

ಪೊಲೀಸರಿಗೆ ಇದೀಗ ತಲೆನೋವಾಗಿರುವುದು ಆ ಮಹಿಳೆ (ಮೊಹ್ಸಿನ್​ ಪ್ರಿಯತಮೆ) ಮತ್ತು ಆಕೆಯ ಪತಿ. ಮಹಿಳೆ ಮೊಹ್ಸಿನ್​​ನನ್ನು ಆಸ್ಪತ್ರೆಗೆ ದಾಖಲಿಸಿದಳು. ಆದರೆ ಆತ ಮೃತಪಟ್ಟಾಗಿನಿಂದಲೂ ಅವಳು ಮತ್ತು ಪತಿ ಇಬ್ಬರೂ ಕಾಣಿಸುತ್ತಿಲ್ಲ.

ಪ್ರೇಯಸಿಯ ಪತಿಯಿಂದ ತಪ್ಪಿಸಿಕೊಳ್ಳಲು ಐದನೇ ಅಂತಸ್ತಿನಿಂದ ಹಾರಿದ ಯುವಕ; ಗಾಬರಿ ಪ್ರಾಣಕ್ಕೇ ಕುತ್ತು ತಂದ ಘಟನೆ ಇದು !
ಸಾಂಕೇತಿಕ ಚಿತ್ರ
Follow us on

29ವರ್ಷದ ಯುವಕನೊಬ್ಬ ಕಟ್ಟಡವೊಂದರ 5ನೇ ಅಂತಸ್ತಿನಿಂದ ಬಿದ್ದು ಮೃತಪಟ್ಟ ಘಟನೆ  ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಹಾಗಂತ ಇದು ಆತ್ಮಹತ್ಯೆಯೂ ಅಲ್ಲ, ಕೊಲೆಯೂ ಅಲ್ಲ. ಅಕಸ್ಮಾತ್ ಆಗಿರುವ ಸಾವು. ಈತ ತನ್ನ ಪ್ರಿಯತಮೆಯ ಪತಿಯ ಕೈಗೆ ತಾನು ಸಿಗಬಾರದು ಎಂದು ಪಾರಾಗಲು ಹೋಗಿ, ಜೀವವನ್ನೇ ಕಳೆದುಕೊಂಡ ದುರ್ದೈವಿ.  ಮೃತನನ್ನು ಮೋಹ್ಸಿನ್​​ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ಮೂಲದವನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೊಹ್ಸಿನ್​  ವಿವಾಹಿತ ಮಹಿಳೆಯೊಬ್ಬರೊಂದಿಗೆ ಲಿವ್​ ಇನ್​ ರಿಲೇಶನ್​ಶಿಪ್​​ನಲ್ಲಿದ್ದ. ಈ ಮಹಿಳೆ ಎರಡು ವರ್ಷಗಳ ಹಿಂದೆ ತನ್ನ ಪತಿಯನ್ನು ಬಿಟ್ಟು, ಹೇಳದೆ ಕೇಳದೆ ಈತನೊಂದಿಗೆ ನೈನಿತಾಲ್​ನಿಂದ ಪುಟ್ಟ ಮಗಳನ್ನೂ ಕರೆದುಕೊಂಡು ಈ ಯುವಕನೊಟ್ಟಿಗೆ ಓಡಿ ಬಂದಿದ್ದರು. ಅಂದಿನಿಂದಲೂ ಮಹಿಳೆ, ಆಕೆಯ ಮಗಳು ಮತ್ತು ಯುವಕ ಜೈಪುರದಲ್ಲಿ ಬಾಡಿಗೆ ಫ್ಲ್ಯಾಟ್​​ನಲ್ಲಿ ವಾಸವಾಗಿದ್ದರು. ಆದರೆ ಎರಡು ವರ್ಷಗಳಿಂದಲೂ ಪತಿ ತನ್ನ ಕಳೆದುಹೋದ ಪತ್ನಿಗಾಗಿ ಹುಡುಕತ್ತಲೇ ಇದ್ದ.  ಅಂತೂ ಹೇಗೇಗೋ ಮಾಡಿ ಪತ್ನಿಯ ಸುಳಿವನ್ನು ತಿಳಿದ ಪತಿ ಭಾನುವಾರ ಸೀದಾ ಅವರು ವಾಸವಾಗಿದ್ದ ಮನೆಬಾಗಿಲಿಗೇ ಬಂದು ನಿಂತಿದ್ದ. ತನ್ನ ಪ್ರಿಯತಮೆಯ ಪತಿಯನ್ನು ನೋಡುತ್ತಿದ್ದಂತೆ ಮೋಹ್ಸಿನ್​ ಕಂಗಾಲಾಗಿದ್ದ. ತನ್ನ ಮನೆಯ ಬಾಲ್ಕನಿಯಿಂದಲೇ ಜಿಗಿದಿದ್ದ. ತಾನು ಮಹಿಳೆಯರ ಪತಿ ಕೈಗೆ ಸಿಕ್ಕಿಬಿದ್ದರೆ ಜೀವ ಉಳಿಯುವುದಿಲ್ಲ ಅಥವಾ ಜೈಲುಪಾಲಾಗುತ್ತೇನೆ ಎಂದು ಹೆದರಿ, ತಪ್ಪಿಸಿಕೊಳ್ಳುವ ಸಲುವಾಗಿ ಆತ ಐದನೇ ಮಹಡಿಯಲ್ಲಿರುವ ಮನೆಯಿಂದ ಕೆಳಗೆ ಹಾರಿದ್ದ. ಕೆಳಗೆ ಬಿದ್ದು ರಕ್ತದ ಮಡುವಿನಲ್ಲಿ ಇದ್ದ ಆತನನ್ನು ಮಹಿಳೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಳು. ಆದರೆ ಸೋಮವಾರ ಸಂಜೆ ಹೊತ್ತಿಗೆ ಮೃತಪಟ್ಟಿದ್ದಾನೆ. ಈ ಘಟನೆಯನ್ನು ಜೈಪುರ ಪ್ರತಾಪ್​ ನಗರ ಪೊಲೀಸ್​ ಠಾಣೆ ಅಧಿಕಾರಿ ಬಲ್ವೀರ್ ಸಿಂಗ್​ ವಿವರಿಸಿದ್ದಾರೆ.

ಆದರೆ ಪೊಲೀಸರಿಗೆ ಇದೀಗ ತಲೆನೋವಾಗಿರುವುದು ಆ ಮಹಿಳೆ (ಮೊಹ್ಸಿನ್​ ಪ್ರಿಯತಮೆ) ಮತ್ತು ಆಕೆಯ ಪತಿ. ಮಹಿಳೆ ಮೊಹ್ಸಿನ್​​ನನ್ನು ಆಸ್ಪತ್ರೆಗೆ ದಾಖಲಿಸಿದಳು. ಆದರೆ ಆತ ಮೃತಪಟ್ಟಾಗಿನಿಂದಲೂ ಅವಳು ಮತ್ತು ಪತಿ ಇಬ್ಬರೂ ಕಾಣಿಸುತ್ತಿಲ್ಲ. ಅವರಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಕೆರೆ ಜಾಗ ಅಕ್ರಮ ಒತ್ತುವರಿಯಲ್ಲಿ ಅಧಿಕಾರಿಗಳ ಕೈವಾಡ; ಕೆರೆ ಸಂರಕ್ಷಣೆ ಹೋರಾಟ ಸಮಿತಿಯಿಂದ ಉಪವಾಸದ ಸತ್ಯಾಗ್ರಹ ಎಚ್ಚರಿಕೆ

Published On - 2:53 pm, Thu, 16 December 21