
ಕಟ್ನಿ (ಮಧ್ಯಪ್ರದೇಶ): ಮಧ್ಯಪ್ರದೇಶದ (Madhya Pradesh) ಕಟ್ನಿಯಲ್ಲಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಹೃದಯಾಘಾತದಿಂದ(heart attack) ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ಗುರುವಾರ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯ ನೋಡಿದಾಗ, ರಾಜೇಶ್ ಮೆಹಾನಿ ಎಂಬ ಸಾಯಿ ಭಕ್ತರು ದೇವಾಲಯದಲ್ಲಿ ವಿಗ್ರಹಕ್ಕೆ ಪ್ರದಕ್ಷಿಣೆ ಮಾಡುತ್ತಿರುವುದನ್ನು ತೋರಿಸುತ್ತದೆ. ನಂತರ ಅವರು ಪ್ರಾರ್ಥನೆ ಮಾಡಲು ಕುಳಿತಿದ್ದಾರೆ. ಆದರೆ ಅಲ್ಲಿಂದ ಎದ್ದೇಳಲು ಸಾಧ್ಯವಾಗಲೇ ಇಲ್ಲ. ಇದು ಸೈಲೆಂಟ್ ಹಾರ್ಟ್ ಅಟ್ಯಾಕ್ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಸುಮಾರು 15 ನಿಮಿಷಗಳ ಕಾಲ ವ್ಯಕ್ತಿ ಪ್ರತಿಕ್ರಿಯಿಸದಿದ್ದಾಗ ದೇವಸ್ಥಾನದಲ್ಲಿದ್ದ ಇತರ ಭಕ್ತರು ಅರ್ಚಕರನ್ನು ಕರೆದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿಗೆ ತಲುಪಿದಾಗ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ, ಮೆಹಾನಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದು, ಪ್ರತಿ ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು.
ಶುಕ್ರವಾರ, ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಬಸ್ ಚಾಲಕ ಹಠಾತ್ ಹೃದಯಾಘಾತದಿಂದ ಅದರ ಚಾಲಕ ಸಾವನ್ನಪ್ಪಿದ್ದು, ನಿಯಂತ್ರಣ ತಪ್ಪಿದ ಬಸ್ ಇನ್ನೊಬ್ಬ ವ್ಯಕ್ತಿಗೆ ಗುದ್ದಿ ಆ ವ್ಯಕ್ತಿಸಾವಿಗೀಡಾಗಿದ್ದರು. ಈ ಘಟನೆಯಲ್ಲಿ ಹಲವಾರು ಮಂದಿಗೆ ಗಾಯವಾಗಿತ್ತು.
ಆರೋಗ್ಯ ತಜ್ಞರ ಪ್ರಕಾರ, ಸೈಲೆಂಟ್ ಹೃದಯಾಘತವನ್ನು ಸೈಲೆಂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (SMI) ಎಂದು ಕರೆಯಲಾಗುತ್ತದೆ. ಈ ಹೃದಯಾಘಾತದ ಹೊತ್ತಲ್ಲಿ ತೀವ್ರವಾದ ಎದೆ ನೋವು, ಒತ್ತಡ, ಹಠಾತ್ ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆ ಯಾವುದೂ ಇರುವುದಿಲ್ಲ