2008-09 ರವರೆಗೆ ದೇಶದ ಎಲ್ಲಾ ಮಾಧ್ಯಮಗಳು ನನ್ನ ಬಗ್ಗೆ 24 ಗಂಟೆ ಹೊಗಳುತ್ತಿದ್ದವು, ನಿಮಗೆ ನೆನಪಿದೆಯೇ?: ರಾಹುಲ್ ಗಾಂಧಿ
ಮೂಲತಃ ಮಹಾರಾಜರಿಗೆ ಸೇರಿದ್ದ ಭಾರತದ ಆಸ್ತಿಯನ್ನು ಸಂವಿಧಾನದ ಮೂಲಕ ಸಾರ್ವಜನಿಕರಿಗೆ ನೀಡಲಾಗಿದೆ. ಆದರೆ ಬಿಜೆಪಿ ಇದಕ್ಕೆ ವಿರುದ್ಧವಾಗಿ ಮಾಡುತ್ತಿದೆ. ಅವರು ಆ ಆಸ್ತಿಗಳನ್ನು ನಿಮ್ಮಿಂದ ತೆಗೆದುಕೊಳ್ಳುವ 'ಮಹಾರಾಜರಿಗೆ' ಹಿಂದಿರುಗಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ನಾನು ರಾಜಕೀಯಕ್ಕೆ ಸೇರಿದಾಗ, ದೇಶದ ಮಾಧ್ಯಮಗಳು ಕನಿಷ್ಠ 5-6 ವರ್ಷಗಳ ಕಾಲ ಅವರನ್ನು ಹೊಗಳುತ್ತಲೇ ಇದ್ದವು ಆದರೆ ಅದರ ನಂತರ ಏನೋ ಬದಲಾಗಿದೆ ಎಂದು ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಯಾತ್ರೆಯ (Bharat Jodo yatra) ನಡುವೆ ಕಾಂಗ್ರೆಸ್ (Congress) ಬಿಡುಗಡೆ ಮಾಡಿದ ಇತ್ತೀಚಿನ ವಿಡಿಯೊದಲ್ಲಿ ಹೇಳಿದ್ದಾರೆ. “ನಾನು ರಾಜಕೀಯಕ್ಕೆ ಸೇರಿದಾಗ, 2008-09 ರವರೆಗೆ, ದೇಶದ ಎಲ್ಲಾ ಮಾಧ್ಯಮಗಳು ನನ್ನ ಬಗ್ಗೆ 24 ಗಂಟೆಗಳ ಕಾಲ ‘ವಾಹ್, ವಾಹ್’ ಮಾಡುತ್ತಿದ್ದವು. ನಿಮಗೆ ನೆನಪಿದೆಯೇ? ನಂತರ ನಾನು ಎರಡು ವಿಷಯಗಳನ್ನು ಎತ್ತಿದಾಗ ಎಲ್ಲವೂ ಬದಲಾಯಿತು ಎಂದು ರಾಹುಲ್ ಗಾಂಧಿ ವಿಡಿಯೊದಲ್ಲಿ ಹೇಳಿದ್ದಾರೆ. ಭಾರತ್ ಜೋಡೋ ಭಾಷಣಗಳ ಸಂಗ್ರಹ ಮತ್ತು ರಾಜಕೀಯದಲ್ಲಿ ಅವರ ಆರಂಭಿಕ ದಿನಗಳ ತುಣುಕುಗಳು ಈ ವಿಡಿಯೊದಲ್ಲಿದೆ.”ನಾನು ಎರಡು ವಿಷಯಗಳನ್ನು ಎತ್ತಿದ್ದೆ. ಅದರಲ್ಲಿ ಒಂದು ನಿಯಮ್ಗಿರಿ ಮತ್ತು ಎರಡನೆಯದು ಭಟ್ಟ ಪರ್ಸೌಲ್. ನಾನು ಭೂಮಿಯ ಪ್ರಶ್ನೆಯನ್ನು ಎತ್ತಿದ ಕ್ಷಣ ಮತ್ತು ನಾನು ಭೂಮಿಯ ಮೇಲಿನ ಬಡವರ ಹಕ್ಕನ್ನು ರಕ್ಷಿಸಲು ಪ್ರಾರಂಭಿಸಿದ ಕ್ಷಣ ಇಡೀ ಮಾಧ್ಯಮದ ತಮಾಶೆ ಪ್ರಾರಂಭವಾಯಿತು. ನಾವು ಆದಿವಾಸಿಗಳಿಗೆ PESA ಕಾಯ್ದೆ ಮತ್ತು ಅವರ ಭೂಮಿಯ ಹಕ್ಕುಗಳಿಗಾಗಿ ಇತರ ಕಾನೂನುಗಳನ್ನು ತಂದೆವು. ನಂತರ ಮಾಧ್ಯಮಗಳು ನನ್ನ ವಿರುದ್ಧ 24 ಗಂಟೆಗಳ ಕಾಲ ಬರೆಯಲು ಪ್ರಾರಂಭಿಸಿದವು ಎಂದು ರಾಹುಲ್ ಗಾಂಧಿ ಹೇಳಿದರು.
ಮೂಲತಃ ಮಹಾರಾಜರಿಗೆ ಸೇರಿದ್ದ ಭಾರತದ ಆಸ್ತಿಯನ್ನು ಸಂವಿಧಾನದ ಮೂಲಕ ಸಾರ್ವಜನಿಕರಿಗೆ ನೀಡಲಾಗಿದೆ. ಆದರೆ ಬಿಜೆಪಿ ಇದಕ್ಕೆ ವಿರುದ್ಧವಾಗಿ ಮಾಡುತ್ತಿದೆ. ಅವರು ಆ ಆಸ್ತಿಗಳನ್ನು ನಿಮ್ಮಿಂದ ತೆಗೆದುಕೊಳ್ಳುವ ‘ಮಹಾರಾಜರಿಗೆ’ ಹಿಂದಿರುಗಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಬಿಜೆಪಿ ನನ್ನ ಇಮೇಜ್ ಡ್ಯಾಮೇಜ್ ಮಾಡಲು ಸಾವಿರಾರು ಕೋಟಿ ಖರ್ಚು ಮಾಡಿದೆ ಎಂದ ರಾಹುಲ್ ಗಾಂಧಿ, ಅದ್ಯಾವುದೂ ವರ್ಕೌಟ್ ಆಗಿಲ್ಲ. ಸತ್ಯಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ತಲೆ ಹಾಕುವ ಕೆಟ್ಟ ಅಭ್ಯಾಸವಿದೆ. ನನ್ನ ಇಮೇಜ್ ಹಾಳು ಮಾಡಲು ಅವರೆಷ್ಟು ಖರ್ಚು ಮಾಡುತ್ತಾರೆ. ಅವರು ನನಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತಿದ್ದಾರೆ ಏಕೆಂದರೆ ಸತ್ಯವನ್ನು ನಿಗ್ರಹಿಸಲು ಸಾಧ್ಯವಿಲ್ಲ. ನೀವು ಒಂದು ಪ್ರಮುಖ ಶಕ್ತಿಯೊಂದಿಗೆ ಹೋರಾಡಿದಾಗ, ನಿಮ್ಮ ಮೇಲೆ ವೈಯಕ್ತಿಕವಾಗಿ ದಾಳಿ ಮಾಡಲಾಗುತ್ತದೆ. ಹಾಗಾಗಿ ನಾನು ವೈಯಕ್ತಿಕವಾಗಿ ದಾಳಿಗೊಳಗಾದಾಗ ನಾನು ಸರಿಯಾದ ಹಾದಿಯಲ್ಲಿದ್ದೇನೆ ಎಂದು ನನಗೆ ತಿಳಿದಿದೆ.
मेरी मीडिया छवि का असली सच क्या है? https://t.co/PW4ZZqIN8b pic.twitter.com/IX9Lp91FgE
— Rahul Gandhi (@RahulGandhi) December 4, 2022
“ಇದು ನನ್ನ ಗುರು. ಇದು ನನಗೆ ಯಾವ ಕಡೆ ಆಯ್ಕೆ ಮಾಡಬೇಕೆಂದು ಕಲಿಸುತ್ತದೆ. ನನ್ನ ಹೋರಾಟದಲ್ಲಿ ನಾನು ಮುಂದೆ ಹೋಗುತ್ತಿದ್ದೇನೆ. ನಾನು ಮುಂದೆ ಹೋಗುವವರೆಗೆ ಎಲ್ಲವೂ ಸರಿಯಾಗಿದೆ” ಎಂದು ರಾಹುಲ್ ಗಾಂಧಿ ವಿಡಿಯೊದಲ್ಲಿ ಹೇಳಿದ್ದಾರೆ.
ಒಡಿಶಾದಲ್ಲಿ ವೇದಾಂತದ ಗಣಿಗಾರಿಕೆ ಕಾರ್ಯಾಚರಣೆಗೆ ನಿಯಮ್ ಗಿರಿ ಭೂಸ್ವಾಧೀನವನ್ನು ಕಾನೂನುಬಾಹಿರ ಎಂದು ರಾಹುಲ್ ಗಾಂಧಿ ವಿರೋಧಿಸಿದ್ದರು. ಆಮೇಲೆ ಅನುಮತಿ ನಿರಾಕರಿಸಲಾಯಿತು. ಉತ್ತರ ಪ್ರದೇಶದ ಪರ್ಸೌಲ್ ನಲ್ಲಿರುವ ಭಟ್ಟ, 2011 ರಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಬೃಹತ್ ರೈತರ ಪ್ರತಿಭಟನೆಗೆ ಸಾಕ್ಷಿಯಾಯಿತು. ಮಾಯಾವತಿ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಇದು ರಾಜಕೀಯದಲ್ಲಿ ರಾಹುಲ್ ಗಾಂಧಿಯವರ ಪ್ರಯಾಣದ ಗಮನಾರ್ಹ ಕ್ಷಣಗಳಲ್ಲಿ ಒಂದಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ