AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೆಹರ್ ಸಿಂಗ್ ಹೆಗಲ ಮೇಲೆ ಹೈಕಮಾಂಡ್ ಬಂದೂಕು: ಒಕ್ಕಲಿಗ ಸಚಿವರನ್ನು ಫೀಲ್ಡ್​ಗಿಳಿಸಿದ ಆರ್​ಎಸ್​ಎಸ್

ರಾಜ್ಯಸಭಾ ಸದಸ್ಯರಾಗಿ ಮಾಡಿರುವ ಟಿಕೆಟ್ ತ್ಯಾಗದ ಕುರಿತಾದ ಟ್ವೀಟ್ ಗೆ ಅಷ್ಟು ತೂಕ ಇದೆ ಎಂಬುದು ಅರ್ಥವಾಗಿದ್ದು ತ್ಯಾಗದ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪುನರುಚ್ಚರಿಸಿದಾಗಲೇ.

ಲೆಹರ್ ಸಿಂಗ್ ಹೆಗಲ ಮೇಲೆ ಹೈಕಮಾಂಡ್ ಬಂದೂಕು: ಒಕ್ಕಲಿಗ ಸಚಿವರನ್ನು ಫೀಲ್ಡ್​ಗಿಳಿಸಿದ ಆರ್​ಎಸ್​ಎಸ್
bjp mp lahar singh siroya
TV9 Web
| Edited By: |

Updated on: Dec 04, 2022 | 4:48 PM

Share

ಬೆಂಗಳೂರು: ನವೆಂಬರ್ 11 ರಂದು ನಾಡ ಪ್ರಭು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi)  ಬೆಂಗಳೂರಿಗೆ ಆಗಮಿಸುವ ಕೆಲವೇ ಗಂಟೆಗಳ ಮುಂದೆ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ (Lehar Singh Siroya) ಟ್ವಿಟರ್ ಖಾತೆಯಿಂದ ಸಂಚಲನ ಸೃಷ್ಟಿಸುವ ಟ್ವೀಟ್ ಒಂದು ಹೊರಬಿದ್ದಿತ್ತು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕರು ಟಿಕೆಟ್ ಪಡೆಯಲು ನಿರಾಕರಿಸಿದ್ದು ಕರ್ನಾಟಕದ ವಿಧಾನಸಭಾ ಚುನಾವಣೆಗೆ ಮೇಲ್ಪಂಕ್ತಿಯಾಗಬೇಕು ಎಂಬುದಷ್ಟೇ ಆ ಟ್ವೀಟ್​‌ನ ಸಾರಾಂಶ.

ಲೆಹರ್ ಸಿಂಗ್ ಆ ಟ್ವೀಟ್ ಮಾಡಿದ ಕ್ಷಣಕ್ಕೆ ಅದು ಲೆಹರ್ ಸಿಂಗ್ ಅವರದ್ದೇ ಟ್ವೀಟ್ ಎಂದೆನಿಸಿದರೂ ದಿನ ಕಳೆದಂತೆ ಅದು ಲೆಹರ್ ಸಿಂಗ್ ಹೆಗಲ ಮೇಲೆ ಬಂದೂಕು ಇರಿಸಿ ಬಿಜೆಪಿ ಹೈಕಮಾಂಡ್ ಹೊಡೆದಿದ್ದ ಗುಂಡು ಎಂಬುದು ಬಹಳಷ್ಟು ರಾಜ್ಯ ಬಿಜೆಪಿಯ ನಾಯಕರಿಗೆ ತಡವಾಗಿ ಅರ್ಥವಾಗಿತ್ತು. ಆ ಕ್ಷಣಕ್ಕೆ ಅದೊಂದು ಜಸ್ಟ್ ಟ್ವೀಟ್ ಅನ್ನಿಸಿದರೂ ಅದರ ತೀವ್ರತೆ ಬಿಜೆಪಿ ನಾಯಕರಿಗೆ ಅರ್ಥವಾಗುವ ವೇಳೆ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿತ್ತು.

ಇದನ್ನೂ ಓದಿ: ಕಾಂಗ್ರೆಸ್ ಆರಿಸಿ ಬಂದರೆ ಮಾತ್ರ…ಕೂಸು ಹುಟ್ಟುವ ಮೊದಲೇ ಮಹಿಳಾ ಮಂತ್ರಿಗಿರಿಯ ಕುಲಾವಿ..!

ಈ ಹಿಂದೆಯೂ ಕೆಲವು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ವೇಳೆಯೂ ಲೆಹರ್ ಸಿಂಗ್ ಸ್ವಪಕ್ಷೀಯರಿಗೆ ಗುದ್ದು ನೀಡುವ ರೀತಿಯಲ್ಲಿ ಹೇಳಿಕೆಗಳನ್ನು ಕೊಟ್ಟಿದ್ದರು. ಆಗ ಅದಷ್ಟು ಮಹತ್ವ ಪಡೆದುಕೊಂಡಿರಲಿಲ್ಲವಾದರೂ ಈಗ ರಾಜ್ಯಸಭಾ ಸದಸ್ಯರಾಗಿ ಮಾಡಿರುವ ಟಿಕೆಟ್ ತ್ಯಾಗದ ಕುರಿತಾದ ಟ್ವೀಟ್ ಗೆ ಅಷ್ಟು ತೂಕ ಇದೆ ಎಂಬುದು ಅರ್ಥವಾಗಿದ್ದು ತ್ಯಾಗದ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪುನರುಚ್ಚರಿಸಿದಾಗಲೇ.

ಕಳೆದ ನವೆಂಬರ್ ತಿಂಗಳಾಂತ್ಯದಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಮೂರು ದಿನಗಳ ಪ್ರಶಿಕ್ಷಣ ಶಿಬಿರದಲ್ಲಿ ಸೆಷನ್ ತೆಗೆದುಕೊಂಡಿದ್ದ ಬಿ.ಎಲ್. ಸಂತೋಷ್, ಗುಜರಾತ್ ಚುನಾವಣಾ ಟಿಕೆಟ್ ಹಂಚಿಕೆ ಸೂತ್ರವನ್ನು ಪ್ರಸ್ತಾಪಿಸಿದ್ದರು. ಆ ಸಂದರ್ಭಕ್ಕೆ ಅಲ್ಲಿ ಲೆಹರ್ ಸಿಂಗ್ ಟ್ವೀಟ್ ನ ನೆರಳು ಕಾಣಿಸಿತ್ತು. ಆದರೆ ಲೆಹರ್ ಸಿಂಗ್ ಟ್ವೀಟ್ ಹಿಂದಿನ ಹೈಕಮಾಂಡ್ ಬ್ರೈನ್ ಗ್ರಹಿಸಿದ ರಾಜ್ಯ ಬಿಜೆಪಿಯ ಕೆಲವು ನಾಯಕರು ಅದಕ್ಕೆ ಅಷ್ಟು ಮಹತ್ವ ಕೊಡದೇ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದ ಅವಶ್ಯಕತೆ, ಅಧಿಕಾರಕ್ಕೆ ಬರಲು ಸೃಷ್ಟಿಸಬೇಕಾದ ಸನ್ನಿವೇಶ ಎಲ್ಲದರ ಬಗ್ಗೆಯೂ ಮಾತನಾಡುತ್ತಾ ಹೋದರು. ಆ ಮೂಲಕ ಗುಜರಾತ್ ಮಾದರಿಯ ಅಳವಡಿಕೆಯ ಅಪಾಯವನ್ನು ಗ್ರಹಿಸಿಕೊಂಡಿದ್ದರು.

ಇದನ್ನೋ ಓದಿ: ಗುಜರಾತ್​ನಲ್ಲಿ ನಡೆದಿರುವುದು ಕರ್ನಾಟಕಕ್ಕೂ ಮಾದರಿಯಾಗಬೇಕು: ಸಂಚಲನ ಮೂಡಿಸಿದ ಲೆಹರ್ ಸಿಂಗ್ ಟ್ವೀಟ್

ಒಕ್ಕಲಿಗ ಸಚಿವರನ್ನು ಫೀಲ್ಡ್ ಗಿಳಿಸಿದ ಆರ್​ಎಸ್​ಎಸ್​

ಇದೆಲ್ಲದರ ಮಧ್ಯೆ ಟಾರ್ಗೆಟ್ ಓಲ್ಡ್ ಮೈಸೂರು ಅನ್ನು ಸ್ಪೀಡ್ ಅಪ್ ಮಾಡಿರುವ ಸಂಘ ಪರಿವಾರ, ಒಕ್ಕಲಿಗ ವೋಟ್ ಬ್ಯಾಂಕ್ ಕ್ರೋಢೀಕರಣಕ್ಕೆ ಬಸವರಾಜ ಬೊಮ್ಮಾಯಿ ಸಂಪುಟದ ಮೂವರು ಒಕ್ಕಲಿಗ ಸಚಿವರನ್ನು ಫೀಲ್ಡ್ ಗೆ ಇಳಿಸಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್ ಎಸ್ ಎಸ್ ಕಚೇರಿ ಕೇಶವ ಶಿಲ್ಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರಾದ ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ ಮತ್ತು ಡಾ. ಸುಧಾಕರ್ ಅವರನ್ನು ಕರೆಸಿಕೊಂಡಿದ್ದ ಆರ್ ಎಸ್ ಎಸ್ ನಾಯಕರು, ಮೊದಲು ನಿಮ್ಮ ನಿಮ್ಮ ನಡುವೆ ಇರುವ ವ್ಯತ್ಯಾಸಗಳನ್ನು ಬಿಟ್ಟು ಒಟ್ಟಾಗಿ ಹೋಗಿ ಎಂದು ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿಯೇ ಸಚಿವರಿಗೆ ಕಿವಿ ಮಾತು ಹೇಳಿದ್ದಾರೆ.

ಇದರ ಜೊತೆಗೆ ಸಚಿವ ಸ್ಥಾನಾಕಾಂಕ್ಷಿಗಳಿಗೆ ನಿರಾಸೆ ಮೂಡಿಸಬಹುದಾದ ಹೇಳಿಕೆಯೊಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮೂಲಕ ವ್ಯಕ್ತವಾಗಿದೆ. ಇನ್ನುಳಿದಿರುವ ನಾಲ್ಕು ಸ್ಥಾನಗಳಿಗೆ ಯಾಕೆ ಸಚಿವ ಸ್ಥಾನ ಯಾಕೆ, ಹೊಸದಾಗಿ ಗೆದ್ದು ಬಂದು ಮಂತ್ರಿಗಳಾಗಿ ಎನ್ನುವ ಮೂಲಕ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲವೇನೋ ಎಂದು ಆಕಾಂಕ್ಷಿಗಳು ಯೋಚಿಸುವಂತೆ ಮಾಡಿದ್ದಾರೆ. ಅದಕ್ಕೆ ಸರಿ ಹೊಂದುವಂತೆ ಮುಖ್ಯಮಂತ್ರಿಗಳ ದೆಹಲಿ ಭೇಟಿಯ ವೇಳೆಯಲ್ಲೂ ಇಂದಲ್ಲ ನಾಳೆ ಎಂಬ ಎಪಿಸೋಡ್ ಮುಂದುವರಿಯುತ್ತಲೇ ಇದೆ.

ವರದಿ: ಕಿರಣ್ ಹನಿಯಡ್ಕ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ