ತಾಯಿಯ ಮೇಲೆ ಅತ್ಯಾಚಾರವೆಸಗಿ ತನ್ನ ಹೆಂಡತಿಯಾಗಿರ್ತೀಯಾ ಎಂದು ಕೇಳಿದ್ದ ನೀಚ ಮಗ

|

Updated on: Sep 25, 2024 | 8:36 AM

ತನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದ ನೀಚ ಮಗ ನನಗೆ ನೀನು ಹೆಂಡತಿಯಾಗಿರ್ತೀಯಾ ಎಂದು ಕೇಳಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿ ನಡೆದಿದೆ. ತಾಯಿಯ ಮೇಲೆ ಅತ್ಯಾಚಾರವೆಸಗಿದ್ದ 36 ವರ್ಷ ಮಗನಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು, ಜತೆಗೆ 51, 000 ರೂ. ದಂಡವನ್ನು ಕೂಡ ವಿಧಿಸಿತ್ತು.

ತಾಯಿಯ ಮೇಲೆ ಅತ್ಯಾಚಾರವೆಸಗಿ ತನ್ನ ಹೆಂಡತಿಯಾಗಿರ್ತೀಯಾ ಎಂದು ಕೇಳಿದ್ದ ನೀಚ ಮಗ
ಅಪರಾಧ
Image Credit source: India Today
Follow us on

ಪತಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ತನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದ ನೀಚ ಮಗ ನನಗೆ ನೀನು ಹೆಂಡತಿಯಾಗಿರ್ತೀಯಾ ಎಂದು ಕೇಳಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿ ನಡೆದಿದೆ. ತಾಯಿಯ ಮೇಲೆ ಅತ್ಯಾಚಾರವೆಸಗಿದ್ದ 36 ವರ್ಷ ಮಗನಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು, ಜತೆಗೆ 51, 000 ರೂ. ದಂಡವನ್ನು ಕೂಡ ವಿಧಿಸಿತ್ತು.

ಕಳೆದ ವರ್ಷ ಜನವರಿ 16 ರಂದು ಈ ಘಟನೆ ಸಂಭವಿಸಿದೆ, 60 ವರ್ಷದ ಮಹಿಳೆ ಮತ್ತು ಆರೋಪಿ ತಮ್ಮ ಮನೆಯ ಸಮೀಪವಿರುವ ಜಮೀನಿಗೆ ಪ್ರಾಣಿಗಳಿಂದ ಮೇವು ತರಲು ಹೋಗಿದ್ದರು. ಆಕೆ ಮೇವು ಕಡಿಯುತ್ತಿದ್ದಾಗ ಮಗ ಆಕೆಯ ಮೇಲೆ ದಾಳಿ ಮಾಡಿ ಬಾಯಿಗೆ ಬಟ್ಟೆ ತುಂಬಿಸಿ, ಅತ್ಯಾಚಾರವೆಸಗಿದ್ದ.

ಘಟನೆಯ ನಂತರ ಅಬಿದ್ ತನ್ನ ತಾಯಿಗೆ ತನ್ನ ಹೆಂಡತಿಯಂತೆ ಬದುಕಬೇಕೆಂದು ಬಯಸಿದ್ದಾಗಿ ಹೇಳಿದ್ದಾನೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದಾರೆ. ಅಲ್ಲದೇ ಘಟನೆಯನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ತನ್ನ ಮಗನ ಬೆದರಿಕೆಯ ಹೊರತಾಗಿಯೂ, ಮಹಿಳೆ ತನ್ನ ನೆರೆಹೊರೆಯವರೊಂದಿಗೆ ಘಟನೆಯನ್ನು ವಿವರಿಸಿದಳು, ನಂತರ ಘಟನೆಯ ಬಗ್ಗೆ ಸಂತ್ರಸ್ತೆ ಕಿರಿಯ ಮಗನಿಗೆ ತಿಳಿಸಿದಳು. ಜನವರಿ 22, 2023 ರಂದು, ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದೂರು ದಾಖಲಿಸಲಾಯಿತು ಮತ್ತು ಆಬಿದ್‌ನನ್ನು ಬುಲಂದ್‌ಶಹರ್ ಪೊಲೀಸರು ಬಂಧಿಸಿದರು.

ಮತ್ತಷ್ಟು ಓದಿ: ಲಕ್ನೋ: ಶಾಲೆಯಿಂದ ಹಿಂದಿರುಗುವಾಗ ಅಪ್ರಾಪ್ತ ಬಾಲಕಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ

ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ವಿಚಾರಣೆಯ ನಂತರ ನ್ಯಾಯಾಲಯ ಆಬಿದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. 51,000 ದಂಡವನ್ನೂ ವಿಧಿಸಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ