Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಗಾಳದಲ್ಲಿ 3 ವರ್ಷದ ಬಾಲಕಿ ಮೇಲೆ ಬಿಜೆಪಿ ನಾಯಕನ ತಂದೆಯಿಂದ ಅತ್ಯಾಚಾರ; ಟಿಎಂಸಿ ಪ್ರತಿಭಟನೆ

ಪಶ್ಚಿಮ ಬಂಗಾಳದಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಬಿಜೆಪಿ ನಾಯಕನ ತಂದೆಯ ವಿರುದ್ಧ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬಂಗಾಳದಲ್ಲಿ 3 ವರ್ಷದ ಬಾಲಕಿ ಮೇಲೆ ಬಿಜೆಪಿ ನಾಯಕನ ತಂದೆಯಿಂದ ಅತ್ಯಾಚಾರ; ಟಿಎಂಸಿ ಪ್ರತಿಭಟನೆ
ಅತ್ಯಾಚಾರ
Follow us
ಸುಷ್ಮಾ ಚಕ್ರೆ
|

Updated on: Sep 24, 2024 | 9:45 PM

ಕೊಲ್ಕತ್ತಾ: ಆಘಾತಕಾರಿ ಘಟನೆಯೊಂದರಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಶಾಂತಿಪುರ್ ಹರಿಪುರ ಪ್ರದೇಶದಲ್ಲಿ ಬಿಜೆಪಿಯ ಪಂಚಾಯತ್ ಅಭ್ಯರ್ಥಿಯ ತಂದೆ ಮನೋರಂಜನ್ ಹಲ್ದರ್ ಎಂಬಾತ 3 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿ ಜಿಲ್ಲೆಯ ಬಿಜೆಪಿ ಬೂತ್ ಅಧ್ಯಕ್ಷರಾಗಿದ್ದಾರೆ. ಈ ಘಟನೆಯ ನಂತರ 3 ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸಂತ್ರಸ್ತೆಯ ತಂದೆಯೊಂದಿಗೆ ಮಾತನಾಡಿದ್ದಾರೆ. ಅವರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಆಗ ಅವರ ಪತ್ನಿ ಮಧ್ಯಾಹ್ನ ಕರೆ ಮಾಡಿ ಇಡೀ ಘಟನೆಯ ಬಗ್ಗೆ ಮಾಹಿತಿ ನೀಡಿದರು, ನಂತರ ಅವರು ಮನೆಗೆ ಧಾವಿಸಿದರು. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: Crime News: ಕಿಡ್ನಾಪ್ ಮಾಡಿ ಜೈಲಿಗೆ ಹೋಗಿದ್ದ ಆರೋಪಿಯಿಂದ ಮತ್ತೆ ಅದೇ ಬಾಲಕಿ ಮೇಲೆ ಅತ್ಯಾಚಾರ

ಅತ್ಯಾಚಾರ ನಡೆಸಿರುವ ಆರೋಪಿಯ ಮನೆಯಲ್ಲಿ ಮೂರು ವರ್ಷದ ಬಾಲಕಿ ಆಟವಾಡುತ್ತಿದ್ದಳು. ಆಗ ಆತ ಈ ಕೃತ್ಯ ಎಸಗಿದ್ದಾನೆ. ಮೂರು ವರ್ಷದ ಮಗು ಆರೋಪಿಯ ಮನೆಗೆ ಆಟವಾಡಲು ಹೋಗಿತ್ತು. ಆದರೆ, ಸ್ವಲ್ಪ ಸಮಯದ ನಂತರ ಅವಳು ಅಳುತ್ತಾ ಮನೆಗೆ ವಾಪಾಸ್ ಬಂದಳು. ತನ್ನ ಜನನಾಂಗದಲ್ಲಿ ನೋವಾಗುತ್ತಿದೆ ಎಂದು ಅಮ್ಮನ ಬಳಿ ಹೇಳಿದಳು. ನಂತರ ಆ ಹುಡುಗಿ ಘಟನೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದಳು. ತಕ್ಷಣ ಕುಟುಂಬಸ್ಥರು ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಮಗುವನ್ನು ಕೂಡ ವೈದ್ಯಕೀಯ ಚಿಕಿತ್ಸೆಗಾಗಿ ಶಾಂತಿಪುರ ಆಸ್ಪತ್ರೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಕೆಸರೆರೆಚಿದ್ದಕ್ಕೆ ವಿದ್ಯಾರ್ಥಿನಿಯಿಂದ ಅವಮಾನ, ಕೋಪಗೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ

ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಶಾಂತಿಪುರ ಶಾಸಕ ಬ್ರಜ್ ಕಿಶೋರ್ ಗೋಸ್ವಾಮಿ ಸೇರಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ನಿಯೋಗ ಬಾಲಕಿಯ ಮನೆಗೆ ಆಗಮಿಸಿ ಧರಣಿ ಸತ್ಯಾಗ್ರಹ ಆರಂಭಿಸಿತು. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ