ಮಂಚಿರ್ಯಾಲ ಜಿಲ್ಲೆ ಬೆಲ್ಲಂಪಲ್ಲಿ ಶಾಸಕ ದುರ್ಗಂ ಚಿನ್ನಯ್ಯ ಅವರನ್ನು (Bellampalli MLA Durgam Chinnaiah) ಹಣಕ್ಕಾಗಿ ಬೆದರಿಸಿರುವ ಘಟನೆ ನಡೆದಿದೆ. ವಿವರಗಳಿಗೆ ಹೋಗುವುದಾದರೆ ಕಾಮರೆಡ್ಡಿ ಜಿಲ್ಲೆ ಎಲ್ಲಾರೆಡ್ಡಿ ಮಂಡಲ ಅಜಮಾಬಾದ್‌ಗೆ ಸೇರಿದ ಎಂಡಿ ಇಶಕ್ ಎಂಬ ವ್ಯಕ್ತಿ ಈ ತಿಂಗಳ 23 ರಂದು ಬೆಲ್ಲಂಪಲ್ಲಿ ಶಾಸಕಗೆ ಸಾಮಾನ್ಯವಾದ ವಾಟ್ಸಪ್ ಸಂದೇಶಗಳನ್ನು ಕಳುಹಿಸಿದ್ದಾರೆ. ಆದರೆ ಒಬ್ಬ ಯುವತಿಯಂತೆ ಚಾಟಿಂಗ್ (chat) ಮಾಡಿದ್ದಾನೆ. ಇದೇ ವೇಳೆ ತನಗೆ 90 ಸಾವಿರ ರೂಪಾಯಿ ಕೊಡುವಂತೆ ಬೆದರಿಸಿದ್ದಾನೆ (Telangana News).
ದುರ್ಗಂ ಚಿನ್ನಯ್ಯ ವಿರುದ್ಧ ಲೈಂಗಿಕ ಕಿರುಕುಳ ಹೋರಾಟ:
ಇತ್ತೀಚೆಗೆ ಶಾಸಕ ದುರ್ಗಂ ಚಿನ್ನಯ್ಯ ಅವರ ವಿರುದ್ಧ ಆರಿಜಿನ್ ಡಯರಿ (Origin dairy firm) ನಿರ್ದೇಶಕಿರೊಬ್ಬರು ಲೈಂಗಿಕ ಕಿರುಕುಳದ ಬಗ್ಗೆ ಹೋರಾಟ ನಡೆಸಿದ್ದರು. ಸರಿಯಾಗಿ ಅದೇ ಪ್ರಕರಣವನ್ನು ಬಳಸಿಕೊಂಡ ಆರೋಪಿ ಇಶಕ್ ಆ ವೇಳೆ ತೆಗೆದಿದ್ದ ಫೋಟೋಗಳು, ವಿಡಿಯೋಗಳು ತನ್ನ ಬಳಿ ಇವೆ ಎಂದು ಬೆದರಿಸಿದ್ದಾನೆ.
ಕೊನೆಗೆ ಶಾಸಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಶಾಸಕರ ಜೊತೆ ಯುವತಿ ರೂಪದಲ್ಲಿ ಚಾಟ್ ಮಾಡಿದ್ದ ವ್ಯಕ್ತಿಯನ್ನು ಇಶಕ್ ಎಂದು ಗುರುತಿಸಿದ್ದಾರೆ. ತಕ್ಷಣ ಆತನನ್ನು ವಶಕ್ಕೆ ತೆಗೆದುಕೊಂಡು ರಿಮಾಂಡ್‌ಗೆ ಕಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಅಕ್ರಮವಾಗಿ ನಕಲಿ ಐಪಿಎಲ್ ಟಿಕೆಟ್‌ಗಳನ್ನು ಪ್ರಿಂಟ್ ಮಾಡಿ ಮಾರಾಟ ಮಾಡುತ್ತಿರುವುದು ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ರಾಚಕೊಂಡ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಉಪ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಗೋವರ್ಧನ್ ರೆಡ್ಡಿ ಎಂಬ ವ್ಯಕ್ತಿಯನ್ನು ಐಪಿಲ್ ಪಂದ್ಯದ ಮಾಲೀಕರ ಜೊತೆ ಕೆಲಸಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಗೋವರ್ಧನ್ ರೆಡ್ಡಿ ಐಪಿಎಲ್ ಪಂದ್ಯಗಳಿಗಾಗಿ ಅಖಿಲ್, ವಂಶೀ, ಶ್ರವಣ್, ಅಜೀಜ್ ಗಳನ್ನು ವಾಲಿಡೇಟರ್ಗಳಾಗಿ ನೇಮಿಸಿಕೊಂಡು ಕ್ರೀಡಾಂಗಣಕ್ಕೆ ಬರಲು ಅವರಿಗೆ ಅಕ್ರೆಡಿಟೇಶನ್ ಕಾರ್ಡ್‌ಗಳನ್ನು ನೀಡಿದ್ದರು.
ಇದನ್ನೂ ಓದಿ:
ಆದರೆ ಅಖಿಲ್ ಮತ್ತು ವಂಶೀ ಅಕ್ರೆಡಿಟೇಶನ್ ಕಾರ್ಡ್ ಮೇಲೆ ಇರುವ ಬಾರ್‌ಕೋಡ್ ಅನ್ನು ಫೋಟೋ ತೆಗೆದುಕೊಂಡಿದ್ದಾರೆ. ಆ ನಂತರ ಚಿಕ್ಕಡಪಲ್ಲಿಯಲ್ಲಿರುವ ಫೋಟೋ ಶಾಪ್ ನಡೆಸುತ್ತಿರುವ ಫಾಹೀಮ್ ಎಂಬ ವ್ಯಕ್ತಿಗೆ ಅದನ್ನು ಮೇಲ್ ಮಾಡಿದ್ದಾರೆ. ಐಪಿಲ್ ಪಂದ್ಯದ ಟಿಕೆಟ್‌ಗಾಗಿ ಮತ್ತೊಬ್ಬ ಆರೋಪಿ ಶ್ರವಣ್ ಒಂದು ಖಾಲಿ ಟೆಂಪ್ಲೇಟ್ ಅನ್ನು ಒದಗಿಸಿದ್ದಾನೆ. ಕೊನೆಗೆ ಎಲ್ಲರೂ ಸೇರಿ ಅಕ್ರಮವಾಗಿ ಸುಮಾರು 200 ನಕಲಿ ಟಿಕೆಟ್‌ಗಳನ್ನು ಮುದ್ರಿಸಿಟ್ಟುಕೊಂಡಿದ್ದಾರೆ. ಆ ನಂತರ ಅವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿದ್ದಾರೆ. ಈ ಅಕ್ರಮದ ಬಗ್ಗೆ ತಿಳಿದುಕೊಂಡ ಪೊಲೀಸರು ಇಡೀ ಗ್ಯಾಂಗ್ ಅನ್ನು ಬಂಧಿಸಿ, ರಿಮಾಂಡ್‌ಗೆ ಕಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:46 am, Fri, 28 April 23