ಪಾಟ್ನಾ: ಹೆಂಡತಿಯ ತಾಯಿಯನ್ನೇ ಪ್ರೀತಿಸಿ ಮದುವೆಯಾಗಿರುವ ಪ್ರಸಂಗ ಬಿಹಾರದಲ್ಲಿ ನಡೆದಿದೆ. ಆದ್ರೆ ಕಾಲಾಂತರದಲ್ಲಿ ಅವರಿಬ್ಬರೂ ಅಂದ್ರೆ ಅಮ್ಮ-ಮಗಳು ಅವನಿಗೆ ವಿಚ್ಛೇದನ ನೀಡಿ, ದೂರವಾಗಿದ್ದಾರೆ.
ಸೂರಜ್ ಮೆಹ್ತಾ ಕೆಲ ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಮದುವೆ ಆಗಿದ್ದ. ಮದುವೆ ನಂತರ ಇಬ್ಬರೂ ಚೆನ್ನಾಗಿಯೇ ಇದ್ದರು. ಆದರೆ, ಬರುಬರುತ್ತಾ ಈತ ಹೆಂಡತಿಯ ತಾಯಿ ಆಶಾ ದೇವಿ ಜೊತೆ ಸಂಪರ್ಕಕ್ಕೆ ಬಂದಿದ್ದ. ನಂತರ ಇಬ್ಬರೂ ಆಪ್ತರಾಗಿದ್ದರು. ಕೊನೆ ಕೊನೆಗೆ ಹೆಂಡತಿಯನ್ನು ನಿರ್ಲಕ್ಷ್ಯ ಮಾಡಿ ಅತ್ತೆಯ ಜೊತೆಯೇ ಉಳಿದುಕೊಳ್ಳಲು ಆರಂಭಿಸಿದ್ದ. ಕೊನೆಗೆ ಸೂರಜ್ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಅತ್ತೆಯನ್ನು ಮದುವೆಯಾಗಿದ್ದ.
ಇಬ್ಬರೂ ಮದುವೆಯಾಗಿ ಕೆಲ ತಿಂಗಳು ಹಾಯಾಗಿದ್ದರು. ಆಶಾ ದೇವಿ ಮಗಳ ಸಂಪರ್ಕವನ್ನು ಕಳೆದುಕೊಂಡಿದ್ದರು. ಆದರೆ, ದಿನಗಳೆದಂತೆ ಸಂಬಂಧ ಹದಗೆಡಲು ಆರಂಭವಾಗಿತ್ತು. ಇಬ್ಬರ ನಡುವೆ ನಿರಂತರವಾಗಿ ಜಗಳ ಆರಂಭವಾಗಲು ಶುರುವಾಗಿತ್ತು. ಇದರಿಂದ ಸಿಟ್ಟಾದ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ವೇಳೆ ಮಾತನಾಡಿರುವ ಆಶಾ ದೇವಿ, ನಾನು ಅಳಿಯನನ್ನೇ ಮದುವೆಯಾಗಿ ತಪ್ಪು ಮಾಡಿದ್ದೇನೆ. ತಡವಾಗಿಯಾದರೂ ನನ್ನ ತಪ್ಪು ಅರಿವಿಗೆ ಬಂದಿದೆ ಎಂದು ವಿಷಾದಿಸಿದ್ದಾರೆ.
ಫಸ್ಟ್ ನೈಟ್ನಲ್ಲೇ ಮದ್ಯ ಸಮಾರಾಧನೆ..ಒಂದೇ ತಿಂಗಳಿಗೆ ಮುರಿದು ಬಿತ್ತು ಮದುವೆ..ಯಾವೂರಲ್ಲಿ?