Murder: ರೆಸಾರ್ಟ್​ನಲ್ಲಿ ಯುವತಿಯ ಕತ್ತು ಸೀಳಿ, ಶವದೊಂದಿಗೆ ವಿಡಿಯೋ ಮಾಡಿದ ಕೊಲೆಗಾರ!

ಈ ಘಟನೆ ನಡೆದು 1 ವಾರ ಕಳೆದಿದ್ದರೂ ಶಿಲ್ಪಾ ಝರಿಯಾ ಎಂಬ 25 ವರ್ಷದ ಯುವತಿಯ ಕತ್ತು ಸೀಳಿ ಕೊಲೆ ಮಾಡಿರುವುದಾಗಿ ವಿಡಿಯೋ ಅಪ್​ಲೋಡ್ ಮಾಡಿರುವ ಅಭಿಜಿತ್ ಪಾಟಿದಾರ್‌ಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಲೇ ಇದ್ದಾರೆ.

Murder: ರೆಸಾರ್ಟ್​ನಲ್ಲಿ ಯುವತಿಯ ಕತ್ತು ಸೀಳಿ, ಶವದೊಂದಿಗೆ ವಿಡಿಯೋ ಮಾಡಿದ ಕೊಲೆಗಾರ!
ಅಭಿಜಿತ್ ಪಾಟಿದಾರ್‌
Updated By: ಸುಷ್ಮಾ ಚಕ್ರೆ

Updated on: Nov 16, 2022 | 9:05 AM

ಜಬಲ್‌ಪುರ: ದೆಹಲಿಯಲ್ಲಿ (Delhi Murder Case) ತನ್ನ ಲಿವ್-ಇನ್ ಪಾರ್ಟನರ್​ ಯುವತಿಯನ್ನು ಆಕೆಯ ಪ್ರಿಯಕರನೇ ಕೊಂದು, ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ತುಂಬ ಬಿಸಾಡಿದ್ದ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಅದರ ಬೆನ್ನಲ್ಲೇ ಇನ್ನೊಂದು ಆಘಾತಕಾರಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದಲ್ಲಿ (Madhya Pradesh) ವ್ಯಕ್ತಿಯೊಬ್ಬ ಯುವತಿಯ ಕುತ್ತಿಗೆ ಸೀಳಿ ಕೊಂದು, ಆಕೆಯ ಮೃತದೇಹದ ಜೊತೆಗೆ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಆ ವಿಡಿಯೋವನ್ನು ತಾನೇ ಸೋಷಿಯಲ್ ಮೀಡಿಯಾದಲ್ಲಿ (Social Media) ಅಪ್​ಲೋಡ್ ಮಾಡಿದ್ದಾನೆ.

ಈ ಘಟನೆ ನಡೆದು 1 ವಾರ ಕಳೆದಿದ್ದರೂ ಶಿಲ್ಪಾ ಝರಿಯಾ ಎಂಬ 25 ವರ್ಷದ ಯುವತಿಯನ್ನು ಕತ್ತು ಸೀಳಿ ಕೊಲೆ ಮಾಡಿರುವುದಾಗಿ ವಿಡಿಯೋ ಅಪ್​ಲೋಡ್ ಮಾಡಿರುವ ಅಭಿಜಿತ್ ಪಾಟಿದಾರ್‌ಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಲೇ ಇದ್ದಾರೆ. ಜಬಲ್‌ಪುರದ ಮೇಖ್ಲಾ ರೆಸಾರ್ಟ್‌ನಲ್ಲಿರುವ ಕೊಠಡಿಯಿಂದ ಆ ಯುವತಿಯ ಶವವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Shraddha Murder: ದೆಹಲಿಯನ್ನು ಬೆಚ್ಚಿ ಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ; ಆ ನಿಗೂಢ ರಾತ್ರಿ ನಡೆದಿದ್ದೇನು?

ಯಾರೂ ನಂಬಿಕೆಗೆ ದ್ರೋಹ ಮಾಡಬೇಡಿ ಎಂದು ಆ ವ್ಯಕ್ತಿ ಆಕ್ರೋಶದಿಂದ ಆ ಹೆಣದೊಂದಿಗೆ ವಿಡಿಯೋ ಶೂಟ್ ಮಾಡಿದ್ದಾನೆ. ನಿಮ್ಮ ಮೇಲಿಟ್ಟ ನಂಬಿಕೆಗೆ ಮೋಸ ಮಾಡಬೇಡಿ ಎಂದು ಹೇಳುವ ಆ ಯುವಕ ಹಾಸಿಗೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯ ಶವವನ್ನು ತೋರಿಸುತ್ತಾನೆ. ಆಕೆಯ ಕುತ್ತಿಗೆ ಸೀಳಿ ಕೊಂದಿರುವುದು ಆ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಮೂಗಳ ಪ್ರಕಾರ, ಪಾಟ್ನಾದ ವ್ಯಾಪಾರಿಯಾಗಿರುವ ಅಭಿಜಿತ್​ನ ಗೆಳೆಯ ಜಿತೇಂದ್ರ ಆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಜಿತೇಂದ್ರ ಅವರಿಂದ ಸುಮಾರು 12 ಲಕ್ಷ ರೂ. ಸಾಲ ಪಡೆದು ಜಬಲ್‌ಪುರಕ್ಕೆ ಪರಾರಿಯಾಗಿದ್ದಳು. ಹೀಗಾಗಿ, ಜಿತೇಂದ್ರನ ಸೂಚನೆ ಮೇರೆಗೆ ಆ ಯುವತಿಯನ್ನು ಅಭಿಜಿತ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸ್ ಸೈಬರ್ ಸೆಲ್ ಜೊತೆಗೆ 4 ವಿಶೇಷ ತಂಡಗಳು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ