AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನೃತ್ಯ ಮಾಡುತ್ತ ತನ್ನನ್ನು ತಾನು ಇರಿದುಕೊಂಡು ಮೃತಪಟ್ಟ ವ್ಯಕ್ತಿ: ಇನ್ನೊಂದೆಡೆ ಗುಂಡು ಹಾರಿಸಿ ಸ್ನೇಹಿತನನ್ನೇ ಕೊಂದವ ಎಸ್ಕೇಪ್​

ಇವರೆಲ್ಲ ಸೇರಿ ನೃತ್ಯ ಮಾಡಿದ್ದು, ಬಳಿಕ ಗೋಪಾಲ್​ ತನಗೆ ತಾನೇ ಚಾಕುವಿನಿಂದ ಇರಿದುಕೊಂಡಿದ್ದರ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಸದ್ಯ ಗೋಪಾಲ್​ ಮೃತದೇಹವನ್ನು ಪೋಸ್ಟ್​ ಮಾರ್ಟಮ್​ಗೆ ಕಳಿಸಲಾಗಿದೆ.

Video: ನೃತ್ಯ ಮಾಡುತ್ತ ತನ್ನನ್ನು ತಾನು ಇರಿದುಕೊಂಡು ಮೃತಪಟ್ಟ ವ್ಯಕ್ತಿ: ಇನ್ನೊಂದೆಡೆ ಗುಂಡು ಹಾರಿಸಿ ಸ್ನೇಹಿತನನ್ನೇ ಕೊಂದವ ಎಸ್ಕೇಪ್​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Mar 19, 2022 | 1:05 PM

ಹೋಳಿ ಹುಣ್ಣಿಮೆ ದೇಶಾದ್ಯಂತ ಸಂಭ್ರಮದ ಹಬ್ಬ. ಬಣ್ಣ ಎರಚುವುದು, ಸಂಗೀತ, ನೃತ್ಯಗಳಂಥ ಆಚರಣೆ ಸಾಮಾನ್ಯ. ಈ ಸಂದರ್ಭದಲ್ಲಿ ಕೆಲವು ಅವಘಡಗಳು ಆಗುತ್ತಿರುತ್ತವೆ. ಹಾಗೇ ಮಧ್ಯಪ್ರದೇಶದ ಬಂಗಾಂಗ ಎಂಬಲ್ಲಿ ಹೋಳಿ ಸಂಭ್ರಮದ ನಡುವೆಯೊಂದು ದುರ್ಘಟನೆ ನಡೆದಿದ್ದು ವರದಿಯಾಗಿದೆ. ಇಲ್ಲಿ ಹೋಳಿ ಆಚರಣೆ ಭರ್ಜರಿಯಾಗಿಯೇ ಸಾಗಿತ್ತು. ಪರಸ್ಪರ ಬಣ್ಣಗಳನ್ನು ಎರಚಿಕೊಂಡು, ಮ್ಯೂಸಿಕ್​ ಹಾಕಿ ಡ್ಯಾನ್ಸ್​ ಮಾಡುತ್ತಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬ ಕೈಯಲ್ಲಿ ಚಾಕು ಹಿಡಿದುಕೊಂಡು ನೃತ್ಯ ಮಾಡುತ್ತಿದ್ದ, ಹೀಗೆ ಡ್ಯಾನ್ಸ್ ಮಾಡುತ್ತ, ಮಾಡುತ್ತ ತನಗೆ ತಾನೇ ಇರಿದುಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಅವನು ಬದುಕುಳಿಯಲಿಲ್ಲ. ಘಟನೆ ಬಗ್ಗೆ ಬಂಗಾಂಗ ಪೊಲೀಸ್ ಠಾಣೆ ಅಧಿಕಾರಿ ಯೋಗೇಶ್​ ಸಿಂಗ್​ ಮಾಹಿತಿ ನೀಡಿದ್ದಾರೆ.

ಮೃತ ವ್ಯಕ್ತಿಯನ್ನು ಗೋಪಾಲ್​ ಎಂದು ಗುರುತಿಸಲಾಗಿದೆ. ಇವರು ತನ್ನ ಸ್ನೇಹಿತರೊಂದಿಗೆ ಹೋಳಿ ಆಚರಣೆಯಲ್ಲಿ ತೊಡಗಿದ್ದರು.  ಇವರೆಲ್ಲ ಸೇರಿ ನೃತ್ಯ ಮಾಡಿದ್ದು, ಬಳಿಕ ಗೋಪಾಲ್​ ತನಗೆ ತಾನೇ ಚಾಕುವಿನಿಂದ ಇರಿದುಕೊಂಡಿದ್ದರ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಸದ್ಯ ಗೋಪಾಲ್​ ಮೃತದೇಹವನ್ನು ಪೋಸ್ಟ್​ ಮಾರ್ಟಮ್​ಗೆ ಕಳಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಚಾಕುವನ್ನು ಏಕೆ ಹಿಡಿದುಕೊಂಡಿದ್ದ, ತನಗೆ ತಾನೇ ಇರಿದುಕೊಂಡಿದ್ದೇಕೆ? ಆಕಸ್ಮಿಕವಾಗಿ ನಡೆದ ಘಟನೆಯೂ? ಆತ್ಮಹತ್ಯೆ ಮಾಡಿಕೊಂಡಿದ್ದೋ ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ಶುರುವಾಗಿದೆ.  ಅವರ ಸ್ನೇಹಿತರನ್ನೂ ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕೋಲ್ಕತ್ತದಲ್ಲಿ ಗುಂಡಿನ ದಾಳಿ

ಪಶ್ಚಿಮ ಬಂಗಾಳದ ಕೋಲ್ಕತ್ತದ ರೆಜೆಂಟ್​ ಪಾರ್ಕ್​​ನಲ್ಲಿ ಕೂಡ ಹೋಳಿ ಆಚರಣೆಯ ಮಧ್ಯೆ ದುರ್ಘಟನೆ ನಡೆದಿದೆ. ಹೋಳಿ ಆಚರಣೆಯಲ್ಲಿ ತೊಡಗಿದ್ದ ಸ್ನೇಹಿತರ ಮಧ್ಯೆ ಮನಸ್ತಾಪ ಬಂದು, ಅದೇ ದೊಡ್ಡ ಜಗಳಕ್ಕೆ ತಿರುಗಿ ಒಬ್ಬನ ಹತ್ಯೆಯಾಗಿದೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ.  ಸ್ನೇಹಿತರ ಗಲಾಟೆ ಮಧ್ಯೆ ಒಬ್ಬಾತ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಮೃತಪಟ್ಟವನ ಹೆಸರು ದಿಲೀಪ್​ ಚೌಹಾಣ್​ ಎಂದು ಗುರುತಿಸಲಾಗಿದೆ. ಆರೋಪಿ ಸುಜಿತ್​ ಮಲಿಕ್​ ಪರಾರಿಯಾಗಿದ್ದು, ಹುಡುಕಾಟ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಇದನ್ನೂ ಓದಿ: ನಾವು ಹೆಂಗ್ ಬದುಕ ಬೇಕಂದ್ರ ಭೂಮಿಗೂ ಆನಂದ ಆಗಬೇಕು; ಸಿದ್ಧೇಶ್ವರ ಸ್ವಾಮೀಜಿ

Published On - 9:12 am, Sat, 19 March 22

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ