ಫೇಸ್ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳು ಈಗಂತೂ ಅಗತ್ಯವಸ್ತುಗಳಾಗಿವೆ. ಯಾವುದೇ ಕಚೇರಿ ಇರಲಿ, ಮನೆ, ರೆಸ್ಟೋರೆಂಟ್, ಹೋಟೆಲ್ಗಳ ಪ್ರವೇಶದ್ವಾರದ ಬಳಿಯೇ ಸ್ಯಾನಿಟೈಸರ್ ಇರುತ್ತದೆ. ಬ್ಯಾಂಕ್, ಎಟಿಎಂ ಕೇಂದ್ರಗಳಲ್ಲೂ ಇದು ಸಾಮಾನ್ಯ. ಆದರೆ ಕಳ್ಳರು ಇದನ್ನೂ ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ವಿಡಿಯೋವೊಂದು ಸಿಕ್ಕಾಪಟೆ ವೈರಲ್ ಆಗುತ್ತಿದೆ. ಇದು ವ್ಯಕ್ತಿಯೊಬ್ಬ ಎಟಿಎಂ ಕೇಂದ್ರದೊಳಗೆ ಇಡಲಾಗಿದ್ದ ಸ್ಯಾನಿಟೈಸರ್ನ್ನು ಕದಿಯುವ ವಿಡಿಯೋ.
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಎಂಬುವರು ಈ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 33 ಸೆಕೆಂಡ್ಗಳ ಫೂಟೇಜ್ ಇದಾಗಿದೆ. ಬೆನ್ನಿಗೆ ದೊಡ್ಡ ಬ್ಯಾಗ್ ಹಾಕಿಕೊಂಡು ಎಟಿಎಂ ಕೇಂದ್ರ ಪ್ರವೇಶಿಸುವ ಈತ ಎಟಿಎಂ ಮಶಿನ್ನಿಂದ ಮೊದಲು ಹಣ ತೆಗೆಯುತ್ತಾನೆ. ನಂತರ ಕಾರ್ಡ್ನ್ನು ಜೇಬಿನಲ್ಲಿ ಹಾಕುತ್ತಾನೆ. ಅಲ್ಲಿಂದ ಸುಮ್ಮನೆ ಹೊರಬರುವುದನ್ನು ಬಿಟ್ಟು, ಪಕ್ಕದಲ್ಲೇ ಇಡಲಾಗಿದ್ದ ಸ್ಯಾನಿಟೈಸರ್ ಬಾಟಲನ್ನು ತೆಗೆದು ತನ್ನ ಬ್ಯಾಗ್ಗೆ ಹಾಕಿಕೊಳ್ಳುವುದು ಈ ಸಿಸಿಟಿವ ಫೂಟೇಜ್ನಲ್ಲಿ ಕಾಣಿಸುತ್ತದೆ.
ಈ ಘಟನೆ ನಡೆದಿದ್ದು ಏಪ್ರಿಲ್ 24ರಂದು. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ನೆಟ್ಟಿಗರೂ ಸಹ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಇಟ್ಟ ಸ್ಯಾನಿಟೈಸರ್ ಬಾಟಲನ್ನು ಹೀಗೆ ಹೊತ್ತೊಯ್ಯುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
These are kleptomaniac. ?
देश मे लाखों ATM हैं. इन मूर्खों से सैनिटाइजर बचाने के लिए हर ATM में 200-300रु का पिंजड़ा लगाना पड़े तो सैकड़ों करोड़ रु इसी में लगेंगे.आपके मर्यादित आचरण से ये पैसे बचते और आपकी भलाई में ही लगते…
खैर… #HumNahiSudhrenge. pic.twitter.com/6zB94qV9FC— Dipanshu Kabra (@ipskabra) April 30, 2021
ಇದನ್ನೂ ಓದಿ: ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಖಿ ಸಾವಂತ್ಗೆ ಮಂಗಳಾರತಿ; ಅವರು ಮಾಡಿದ ತಪ್ಪೇನು?
ಭಾರತೀಯ ನೌಕಾಪಡೆಯಿಂದ ಆಕ್ಸಿಜನ್‌ಗಾಗಿ ಆಪರೇಷನ್ ಸಮುದ್ರ ಸೇತು ಕಾರ್ಯಾಚರಣೆ
Published On - 4:44 pm, Sat, 1 May 21