Shocking News: ಬೆಳ್ಳಿ ಗಜ್ಜೆಗಾಗಿ ಅಜ್ಜಿಯ ಪಾದವನ್ನೇ ಕತ್ತರಿಸಿ ಕೊಲೆ ಮಾಡಿದ ಮೊಮ್ಮಗ; ಶವ ಹೂಳಲು ಸೋದರನ ಸಹಕಾರ

ಶುಕ್ರವಾರ ರಾಜೇಶ್​ ತನ್ನ ಅಜ್ಜಿಯ ಬಳಿ ಹೋಗಿ ಹಣ ಕೇಳಿದ್ದಾನೆ. ಆದರೆ ಅವರು ಹಣ ಕೊಡೋಕೆ ಒಪ್ಪಲಿಲ್ಲ. ನನ್ನ ಬಳಿ ದುಡ್ಡಿಲ್ಲ ಎಂದು ಹೇಳಿದ್ದಾರೆ. ಆದರೆ ಸುಮ್ಮನಾಗದ ರಾಜೇಶ್​, ಹಾಗಿದ್ದರೆ ಬೆಳ್ಳಿಯ ಗಜ್ಜೆ ಕೊಡುವಂತೆ ಕೇಳಿದ್ದಾನೆ.

Shocking News: ಬೆಳ್ಳಿ ಗಜ್ಜೆಗಾಗಿ ಅಜ್ಜಿಯ ಪಾದವನ್ನೇ ಕತ್ತರಿಸಿ ಕೊಲೆ ಮಾಡಿದ ಮೊಮ್ಮಗ; ಶವ ಹೂಳಲು ಸೋದರನ ಸಹಕಾರ
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Feb 17, 2022 | 6:34 PM

24 ವರ್ಷದ ಯುವಕನೊಬ್ಬ ತನ್ನ ಅಜ್ಜಿಯ ಪಾದ ಕತ್ತರಿಸಿ, ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಇಂಧೋರ್​ ಜಿಲ್ಲೆಯ(Indore District)ಖುಡೇಲ್​​ನಲ್ಲಿ ನಡೆದಿದೆ. ಆರೋಪಿಯ ಹೆಸರು ರಾಜೇಶ್​. ಈ ವ್ಯಕ್ತಿಗೆ ಸಹೋದರ ಸುರೇಶ್​ ಸಹಾಯ ಮಾಡಿದ್ದಾನೆ. ನಂತರ ಇಬ್ಬರೂ ಸೇರಿ ಅಜ್ಜಿಯ ಮೃತದೇಹವನ್ನು  ಗುಪ್ತವಾಗಿ ಮಣ್ಣು ಮಾಡಿದ್ದಾರೆ.

ಅಷ್ಟಕ್ಕೂ ಅಜ್ಜಿಯನ್ನು ಕೊಂದಿದ್ದು ಕೇವಲ ಒಂದು ಜತೆ ಗಜ್ಜೆಗಾಗಿ. ಮೃತರ ಹೆಸರು ಜಮ್ನಾಬಾಯಿ (75). ಇವರು ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಸೋಮವಾರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಅದಾದ ಬಳಿಕ ಮಂಗಳವಾರ ಅಜ್ಜಿಯ ಮೃತದೇಹ ಸಿಕ್ಕಿದೆ. ಮನೆಯ ಸಮೀಪವೇ ಇರುವ ಬಯೋಗ್ಯಾಸ್​ ಗುಂಡಿಯಲ್ಲಿ ಜಮ್ನಾಬಾಯಿ ಶವ ಇತ್ತು. ಪಾದ ಕತ್ತರಿಸಿದ ಸ್ಥಿತಿಯಲ್ಲಿದ್ದು ಗಜ್ಜೆ ಇರಲಿಲ್ಲ ಎಂದು ಪ್ರಕರಣ ದಾಖಲು ಮಾಡಿಕೊಂಡಿರುವ ಖುಡೇಲ್​ ಪೊಲೀಸರು ತಿಳಿಸಿದ್ದಾರೆ.

ಕೆಲವು ಪುರಾವೆಗಳು ರಾಜೇಶ್ ಅಪರಾಧಿ ಎಂದು ತೋರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ತಾನು ಕೊಲೆ ಮಾಡಿದ್ದನ್ನು ಅವನು ಒಪ್ಪಿಕೊಂಡಿದ್ದಾನೆ. ಶುಕ್ರವಾರ ರಾಜೇಶ್​ ತನ್ನ ಅಜ್ಜಿಯ ಬಳಿ ಹೋಗಿ ಹಣ ಕೇಳಿದ್ದಾನೆ. ಆದರೆ ಅವರು ಹಣ ಕೊಡೋಕೆ ಒಪ್ಪಲಿಲ್ಲ. ನನ್ನ ಬಳಿ ದುಡ್ಡಿಲ್ಲ ಎಂದು ಹೇಳಿದ್ದಾರೆ. ಆದರೆ ಸುಮ್ಮನಾಗದ ರಾಜೇಶ್​, ಹಾಗಿದ್ದರೆ ಬೆಳ್ಳಿಯ ಗಜ್ಜೆ ಕೊಡುವಂತೆ ಕೇಳಿದ್ದಾನೆ. ಅದು ಸುಮಾರು 750 ಗ್ರಾಂ ತೂಕವಿದ್ದು, ಮಾರಾಟ ಮಾಡಿದರೆ ದುಡ್ಡು ಬರುತ್ತದೆ ಎಂಬ ಖತರ್ನಾಕ್​ ಐಡಿಯಾ ಅವನದಾಗಿತ್ತು.  ಆದರೆ ಅಜ್ಜಿ ಒಪ್ಪಲಿಲ್ಲ.

ಇದೇ ಕಾರಣಕ್ಕೆ ರಾಜೇಶ್​ ಮತ್ತು ಅಜ್ಜಿ ಜಗಳವಾಡಿಕೊಂಡಿದ್ದಾರೆ. ಹೊಡೆದಾಟವೂ ನಡೆದಿದೆ. ಆಗ ರಾಜೇಶ್ ಅಜ್ಜಿಯನ್ನು ಹತ್ಯೆ ಮಾಡಿದ್ದಾನೆ. ನಂತರ ಪಾದವನ್ನೂ ಕಡಿದಿದ್ದಾನೆ. ಗೆಜ್ಜೆ ಮತ್ತು ಉಳಿದ ಆಭರಣಗಳನ್ನೂ ಕದ್ದೊಯ್ದಿದ್ದಾನೆ.  ಇದೆಲ್ಲವನ್ನೂ ಪೊಲೀಸರಿಗೆ ಆತನೇ ತಿಳಿಸಿದ್ದಾನೆ.

ಇದನ್ನೂ ಓದಿ: ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೇವೆ ಅಂತ ಈಶ್ವರಪ್ಪ ಹೇಳಿಲ್ಲ ಎಂದರು ಬಿಜೆಪಿ ನಾಯಕ ಸಿಟಿ ರವಿ