ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೇವೆ ಅಂತ ಈಶ್ವರಪ್ಪ ಹೇಳಿಲ್ಲ ಎಂದರು ಬಿಜೆಪಿ ನಾಯಕ ಸಿಟಿ ರವಿ
ಕಾಂಗ್ರೆಸ್ ನಾಯಕರಿಗೆ ಈಗ ರಾಷ್ಟ್ರಧ್ವಜದ ಮೇಲೆ ಹುಟ್ಟಿರುವ ಪ್ರೀತಿ ನೋಡಿದರೆ ಆಶ್ಚರ್ಯವಾಗುತ್ತದೆ, ಯಾಕೆಂದರೆ, 1993ರಲ್ಲಿ ಇದೇ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋದವರ ಮೇಲೆ ಗೋಲಿಬಾರ್ ಮಾಡಿಸಿ 11 ಜನರನ್ನು ಕೊಂದು ಹಾಕಿತ್ತು ಎಂದು ರವಿ ಹೇಳಿದರು.
ರಾಷ್ಟ್ರಧ್ವಜ (Tricolour) ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ ಜಾರಿಯಲ್ಲಿದೆ. ಕೆ ಎಸ್ ಈಶ್ವರಪ್ಪ (KS Eshwarappa) ಕೆಂಪುಕೋಟೆಯ (Red Fort) ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಅಂತ ಹೇಳಿರುವುದು ರಾಷ್ಟ್ರದ್ರೋಹ ಅವರನ್ನು ಸಚಿವ ಸ್ಥಾನದಿಂದ ಕಿತ್ತಿಹಾಕಬೇಕು, ಬಂಧಿಸಿ ಜೈಲಿಗಟ್ಟಬೇಕು ಅಂತ ಕಾಂಗ್ರೆಸ್ ಹೋರಾಟ ಮಾಡುತ್ತಿದ್ದು ಅವರ ಹೋರಾಟವೇ ಹಾಸ್ಯಾಸ್ಪದ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಹೇಳಿದರು. ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮವರೊಂದಿಗೆ ಮಾತಾಡುತ್ತಾ ರವಿ, ಈಶ್ವರಪ್ಪನವರನ್ನು ಸಮರ್ಥಿಸಿಕೊಳ್ಳುತ್ತಾ ಅವರು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಇಳಿಸಿ ಕೇಸರಿ ಹಾರಿಸುತ್ತೇವೆ ಅಂತ ಹೇಳಿಲ್ಲವೆಂದರು. ಒಂದು ವೇಳೆ ಅವರು ಹಾಗೆ ಹೇಳಿದ್ದರೆ ಅದು ಫ್ಲ್ಯಾಗ್ ಌಕ್ಟ್ ಪ್ರಕಾರ ಅಪರಾಧವೆನಿಸುತಿತ್ತು ಎಂದು ರವಿ ಹೇಳಿದರು.
ಕಾಂಗ್ರೆಸ್ ನಾಯಕರಿಗೆ ಈಗ ರಾಷ್ಟ್ರಧ್ವಜದ ಮೇಲೆ ಹುಟ್ಟಿರುವ ಪ್ರೀತಿ ನೋಡಿದರೆ ಆಶ್ಚರ್ಯವಾಗುತ್ತದೆ, ಯಾಕೆಂದರೆ, 1993ರಲ್ಲಿ ಇದೇ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋದವರ ಮೇಲೆ ಗೋಲಿಬಾರ್ ಮಾಡಿಸಿ 11 ಜನರನ್ನು ಕೊಂದು ಹಾಕಿತ್ತು ಎಂದು ರವಿ ಹೇಳಿದರು.
ಇದು ರಾಷ್ಟ್ರಧ್ವಜದ ಬಗ್ಗೆ ಅವರಿಗಿರುವ ಅಭಿಮಾನವೇ? ರಾಷ್ಟ್ರಧ್ವಜದ ಮೇಲೆ ಅವರಿಗೆ ನಿಜವಾಗಲೂ ಅಭಿಮಾನವಿದ್ದರೆ, ಶ್ರೀನಗರದ ಲಾಲ್ ಚೌಕ್ನಲ್ಲಿ ಅದನ್ನು ಯಾಕೆ ಹಾರಿಸಲಿಲ್ಲ? ಎಂದು ರವಿ ಕೇಳಿದರು.
ಕಾಶ್ಮೀರದ ಭಯೋತ್ಪಾದಕರು ಶ್ರೀನಗರನಲ್ಲಿ ಪಾಕಿಸ್ತಾನದ ಧ್ವಜ ಹಾರಿಸುತ್ತೇವೆ ಅಂತ ಸವಾಲೊಡ್ಡಿದಾಗ ಆಗ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮುರಳಿ ಮನೋಹರ ಜೋಷಿ ಅವರು ದೇಶದಾದ್ಯಂತ ಏಕತಾ ಯಾತ್ರೆ ಮಾಡಿ ಶ್ರೀನಗರದ ಲಾಲ್ಚೌಕ್ನಲ್ಲಿ ತಿರಂಗವನ್ನು ಹಾರಿಸಿದ್ದರು.
ರಾಷ್ಟ್ರಧ್ವಜ ಹಾರಿಸಲು ಹೋದವರನ್ನು ಗುಂಡಿಕ್ಕಿ ಕೊಲ್ಲುವ ಕಾಂಗ್ರೆಸ್ ನಾಯಕರಿಂದ ನಾವು ರಾಷ್ಟ್ರಪ್ರೇಮದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯಲ್ಲ ಎಂದು ಸಿಟಿ ರವಿ ಹೇಳಿದರು.
ಇದನ್ನೂ ಓದಿ: ಈಶ್ವರಪ್ಪ ಕೆಂಪುಕೋಟೆಯ ಮೇಲೆ ಕೇಸರಿ ಧ್ಜಜ ಹಾರಿಸುತ್ತೇನೆಂದು ಹೇಳುವುದು ದೇಶದ್ರೋಹ ಎಂದರು ಸಿದ್ದರಾಮಯ್ಯ!