ವ್ಯಕ್ತಿಯೊಬ್ಬನನ್ನು ಥಳಿಸಿ ಬಲವಂತವಾಗಿ ಮೂತ್ರ ಕುಡಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಬಾರ್ಮರ್ನಲ್ಲಿ ಈ ಘಟನೆ ನಡೆದಿದೆ, ವಿಡಿಯೋ ವೈರಲ್ ಆಗಿದ್ದು, ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಿ ಬಲವಂತವಾಗಿ ಮೂತ್ರ ಕುಡಿಸಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವ್ಯಕ್ತಿಯನ್ನು ಬಟ್ಟೆಬಿಚ್ಚಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ, ನಂತರ ಬಾಟಲಿಯಿಂದ ಮೂತ್ರವನ್ನು ಕುಡಿಯಲು ಒತ್ತಾಯಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಬಾರ್ಮರ್ ಜಿಲ್ಲೆಯ ಚೋಹ್ತಾನ್ ಪ್ರದೇಶದ ಧನೌ ಪೊಲೀಸ್ ಠಾಣೆ ವ್ಯಾಪ್ತಿಯ ಬಮ್ನೋರ್ ಗ್ರಾಮದಲ್ಲಿ ನಡೆದಿದೆ.
ಈ ವ್ಯಕ್ತಿ ರಾತ್ರಿ ವೇಳೆ ಯಾರದೋ ಮನೆಗೆ ನುಗ್ಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಧನೌ ಪ್ರದೇಶದ ಮನೆಯಲ್ಲಿದ್ದವರು ಆತನನ್ನು ಹಿಡಿದು ಜಮೀನಿಗೆ ಕರೆದೊಯ್ದು ಅಲ್ಲಿ ಥಳಿಸಿದ್ದಾರೆ ಎಂದು ಅವರು ಹೇಳಿದರು.
ಪೊಲೀಸರು ಆರೋಪಿಗಳ ವಿರುದ್ಧ ಶೀಘ್ರ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ತನಿಖೆ ಪ್ರಗತಿಯಲ್ಲಿದ್ದಾಗ ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಮತ್ತಷ್ಟು ಓದಿ:ಕಳ್ಳತನದ ಆರೋಪ, ಇಬ್ಬರು ಬಾಲಕರಿಗೆ ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿ ಚಿತ್ರಹಿಂಸೆ
ಜುಂಜರಾಮ್ ನೀಡಿದ ದೂರಿನ ಮೇರೆಗೆ ಧನೌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಾಟಲಿಯಲ್ಲಿ ಮೂತ್ರವಿದೆಯೇ ಎಂಬುದು ದೃಢಪಟ್ಟಿಲ್ಲ ಎಂದು ಹೆಚ್ಚುವರಿ ಎಸ್ಪಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ