Gujarat: ಸುಮ್ಮನಿರು ಎಂದಿದ್ದಕ್ಕೆ ಜೈಲಿನೊಳಗೆ ಬಟ್ಟೆ ಬಿಚ್ಚಿ ನಿಂತ ವಿಕೃತ ಕೈದಿ; ಮಹಿಳಾ ಪೊಲೀಸ್​​ ಬಗ್ಗೆ ಅಶ್ಲೀಲ ಮಾತು

| Updated By: Lakshmi Hegde

Updated on: Sep 12, 2021 | 12:22 PM

ಆರೋಪಿ ಜೈಲಿನಲ್ಲಿ ಇದ್ದರೂ ಸಿಕ್ಕಾಪಟೆ ಗಲಾಟೆ ಮಾಡುತ್ತಿದ್ದ. ಅದನ್ನು ನೋಡಿದ ಮಹಿಳಾ ಪೊಲೀಸ್​ ಸಿಬ್ಬಂದಿಯೊಬ್ಬರು ಸುಮ್ಮನೆ ಇರುವಂತೆ ಹೇಳಿದರು.

Gujarat: ಸುಮ್ಮನಿರು ಎಂದಿದ್ದಕ್ಕೆ ಜೈಲಿನೊಳಗೆ ಬಟ್ಟೆ ಬಿಚ್ಚಿ ನಿಂತ ವಿಕೃತ ಕೈದಿ; ಮಹಿಳಾ ಪೊಲೀಸ್​​ ಬಗ್ಗೆ ಅಶ್ಲೀಲ ಮಾತು
ಲಾಕಪ್ ಚಿಲಕ ತೆಗೆದು ಆರೋಪಿ ಪರಾರಿ! ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಘಟನೆ
Follow us on

ಸೂರತ್​: ಜೈಲಿನೊಳಗಿದ್ದ ಕೈದಿಯೊಬ್ಬ ಏಕಾಏಕಿ ತನ್ನ ಬಟ್ಟೆಯನ್ನೆಲ್ಲ ಕಳಚಿ ನಿಂತು, ಮಹಿಳಾ ಪೊಲೀಸ್ ಸಿಬ್ಬಂದಿಯ ಜತೆ ಅಶ್ಲೀಲವಾಗಿ ವರ್ತಿಸಿದ ಘಟನೆ ಗುಜರಾತ್​​ನ ಸೂರತ್​ನಲ್ಲಿ ನಡೆದಿದೆ. ಈ ವ್ಯಕ್ತಿಯ ಹೆಸರು ಸುರೇಶ್​ ನಂದ್​ವಾನಿ (55). ತಲೋದರಾ ಗ್ರಾಮದ ನಿವಾಸಿಯಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ್ದಲ್ಲೆ, ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಈತನನ್ನು ಶುಕ್ರವಾರ ಬಂಧಿಸಿ, ಸಲಾಬತ್ಪುರ ಪೊಲೀಸ್​ ಸ್ಟೇಶನ್​​ನಲ್ಲಿ ಜೈಲಿಗೆ ಹಾಕಲಾಗಿತ್ತು.  

ಆರೋಪಿ ಜೈಲಿನಲ್ಲಿ ಇದ್ದರೂ ಸಿಕ್ಕಾಪಟೆ ಗಲಾಟೆ ಮಾಡುತ್ತಿದ್ದ. ಅದನ್ನು ನೋಡಿದ ಮಹಿಳಾ ಪೊಲೀಸ್​ ಸಿಬ್ಬಂದಿಯೊಬ್ಬರು ಸುಮ್ಮನೆ ಇರುವಂತೆ ಹೇಳಿದರು. ಆದರೆ ಸುಮ್ಮನೆ ಇರುವುದನ್ನು ಬಿಟ್ಟು, ತನ್ನ ಬಟ್ಟೆಯನ್ನೆಲ್ಲ ಕಳಚಿ ಹಾಕಿದ. ಆ ಮಹಿಳಾ ಪೊಲೀಸ್​ ಸಿಬ್ಬಂದಿಯೆಡೆಗೆ ಅಶ್ಲೀಲವಾಗಿ ಕಾಮೆಂಟ್​ ಕೊಡಲು ಪ್ರಾರಂಭಿಸಿದೆ. ಅದನ್ನು ನೋಡಿದ ಸ್ಟೇಶನ್​ ಸಿಬ್ಬಂದಿ ಬಟ್ಟೆ ಹಾಕಿಕೊಳ್ಳುವಂತೆ ಅವನಿಗೆ ಹೇಳಿದರೂ ಕೇಳದೆ ತನ್ನ ಅನುಚಿತ ವರ್ತನೆ ಮುಂದುವರಿಸಿದ್ದಾನೆ. ಆಗ ಠಾಣಾಧಿಕಾರಿ ಎಂ.ವಿ.ಕಿಕಾನಿ ಮತ್ತು ಸಿಬ್ಬಂದಿ ಲಾಕ್​ಅಪ್​ ಒಳಗೇ ಹೋಗಿ ಆರೋಪಿಯನ್ನು ಹೆದರಿಸಿದ್ದಾರೆ. ನಂತರ ಅವನು ಬಟ್ಟೆಯನ್ನು ಹಾಕಿಕೊಂಡಿದ್ದಾನೆ. ಬಳಿಕ ಸುರೇಶ್​ ನಂದ್​ವಾನಿ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್​​ ಕೂಡ ದಾಖಲಿಸಲಾಗಿದೆ.

ಉತ್ತರಪ್ರದೇಶದಲ್ಲೂ ಇಂಥದ್ದೇ ಘಟನೆ
ಮಹಿಳಾ ಪೊಲೀಸ್​ ಸಿಬ್ಬಂದಿಗೆ ಯುವಕನೊಬ್ಬ ಅಶ್ಲೀಲ ಮಾತುಗಳಿಂದ ನಿಂದಿಸಿದ ಘಟನೆ ಉತ್ತರ ಪ್ರದೇಶದ ಲಖನೌನ ಅಲಿಗಂಜ್​​ನಲ್ಲಿ ಕೂಡ ನಡೆದಿದೆ. ಆತ ಅಶ್ಲೀಲ ಕಾಮೆಂಟ್​ ಮಾಡಿದ್ದಲ್ಲದೆ ಅವರಿಗೆ ಕಬ್ಬಿಣದ ರಾಡ್​ನಿಂದ ಹಲ್ಲೆಯನ್ನೂ ಮಾಡಿದ್ದಾರೆ. ಆ ಯುವಕನನ್ನೂ ಬಂಧಿಸಲಾಗಿದೆ.  ಈ ಪ್ರದೇಶದಲ್ಲಿ ಮಹಿಳಾ ಪೊಲೀಸ್​ ಕಾನ್​ಸ್ಟೆಬಲ್​ವೊಬ್ಬರು ಯೂನಿಫಾರ್ಮ್​ನಲ್ಲಿ ಗಸ್ತು ತಿರುಗುತ್ತಿದ್ದರು. ಅವರನ್ನು ನೋಡಿದ ಯುವಕ ಮೊದಲು ಅಶ್ಲೀಲವಾಗಿ, ಕೆಟ್ಟ ಭಾಷೆಯಲ್ಲಿ ನಿಂದಿಸಿದ. ಆ ಪೊಲೀಸ್​ ಸಿಬ್ಬಂದಿ ಅದನ್ನು ವಿರೋಧಿಸಿ ಹೆದರಿಸಲು ಪ್ರಯತ್ನಿಸಿದರು. ಆದರೆ ಆತ ಕಬ್ಬಿಣದ ರಾಡ್​ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.  ತೀವ್ರವಾಗಿ ಗಾಯಗೊಂಡ ಮಹಿಳಾ ಕಾನ್​ಸ್ಟೆಬಲ್​​ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಡೆಯುತ್ತಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ರಾಷ್ಟ್ರೀಯ ಮಟ್ಟದ ಖೋ ಖೋ ಕ್ರೀಡಾಪಟುವಿನ ಶವ ರೈಲ್ವೆ ಹಳಿ ಬಳಿ ಪತ್ತೆ; ಇದು ಅತ್ಯಾಚಾರ ಎಂದ ಕುಟುಂಬ

Tamil Nadu: ಬಿರ್ಯಾನಿ ತಿಂದ ಕೆಲಹೊತ್ತಲ್ಲೇ 10 ವರ್ಷದ ಬಾಲಕಿ ಸಾವು; 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ