Viral Photo: ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು, ಕೆಳಗೆ ಮಾರ್ಬಲ್​ ಕಲ್ಲು; ವಿಪರೀತ ಟ್ರೋಲ್​ ಆದ ಮಧ್ಯಪ್ರದೇಶ ಸಿಎಂ

ಗಿಡ ನೆಡಲು ಅಷ್ಟು ದುಬಾರಿ ಬೆಲೆಯ ಮಾರ್ಬಲ್​ ಕಲ್ಲು ಹಾಕಿ ನಿಲ್ಲಬೇಕಾ? ಅಂಥ ಮಳೆ ಬರುತ್ತಿದ್ದಾಗಲೂ ಸಸಿಗೆ ನೀರು ಹಾಕಬೇಕಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ.

Viral Photo: ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು, ಕೆಳಗೆ ಮಾರ್ಬಲ್​ ಕಲ್ಲು; ವಿಪರೀತ ಟ್ರೋಲ್​ ಆದ ಮಧ್ಯಪ್ರದೇಶ ಸಿಎಂ
ಛತ್ರಿ ಕಳಗೆ ನಿಂತು ಗಿಡಕ್ಕೆ ನೀರು ಹಾಕುತ್ತಿರುವ ಮಧ್ಯಪ್ರದೇಶ ಸಿಎಂ
Follow us
TV9 Web
| Updated By: Lakshmi Hegde

Updated on: Sep 12, 2021 | 1:01 PM

ಭೋಪಾಲ್​:  ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಇದೀಗ ಭರ್ಜರಿ ಟ್ರೋಲ್​ ಆಗುತ್ತಿದ್ದಾರೆ. ನೆಟ್ಟಿಗರಂತೂ ಅವರಿಗೆ ಇನ್ನಿಲ್ಲದಂತೆ ಛೇಡಿಸುತ್ತಿದ್ದಾರೆ.  ಅದಕ್ಕೆ ಕಾರಣ ವೈರಲ್​ ಆದ ಒಂದು ಫೋಟೋ. ಶಿವರಾಜ್ ಸಿಂಗ್​ ಚೌಹಾಣ್​ ಅವರು ಗಿಡವೊಂದನ್ನು ನೆಟ್ಟು, ಅದಕ್ಕೆ ನೀರು ಹಾಕುತ್ತಿರುವ ಫೋಟೋ ವೈರಲ್​ ಆದ ಬೆನ್ನಲ್ಲೇ ಈ ಪರಿ ಟ್ರೋಲ್​ ಆಗಲು ಶುರುವಾಗಿದ್ದು. 

ಶಿವರಾಜ್​ ಸಿಂಗ್​ ಚೌಹಾಣ್​​ ಎರಡು ದೊಡ್ಡ ಮಾರ್ಬಲ್​ ಕಲ್ಲಿನ ಮೇಲೆ ನಿಂತಿದ್ದಾರೆ. ಹಾಗೇ ಬಗ್ಗಿ ಒಂದು ಗಿಡಕ್ಕೆ ನೀರು ಹಾಕುತ್ತಿದ್ದಾರೆ. ಅವರ ಪಕ್ಕದಲ್ಲಿ ನಿಂತ ವ್ಯಕ್ತಿ ಅವರಿಗೆ ಛತ್ರಿ ಹಿಡಿದಿದ್ದಾರೆ. ಈ ಛತ್ರಿ ಹಿಡಿದಿದ್ದು ಬಿಸಿಲು ಬರುತ್ತಿದೆ ಎಂದಲ್ಲ..ಬದಲಿಗೆ ಅಲ್ಲಿ ಮಳೆ ಸುರಿಯುತ್ತಿತ್ತು. ಅಂಥ ಮಳೆಯಲ್ಲಿ, ಕೊಡೆ ಹಿಡಿದು ಗಿಡಕ್ಕೆ ನೀರು ಹಾಕಿದ್ದೇ ಈ ಟ್ರೋಲ್​ಗೆ ಕಾರಣ. ಸಾಮಾನ್ಯ ಜನರಷ್ಟೇ ಅಲ್ಲದೆ ಕಾಂಗ್ರೆಸ್​ ಕೂಡ ಶಿವರಾಜ್​ ಸಿಂಗ್​ ಚೌಹಾಣ್​ ವಿರುದ್ಧ ಅಪಹಾಸ್ಯ ಮಾಡಿದೆ.  ಕಳೆದ ಶುಕ್ರವಾರ ನೆಟ್ಟಿಗರೊಬ್ಬರು ಈ ಫೋಟೋ ಶೇರ್​ ಮಾಡಿಕೊಂಡು..ನಮ್ಮದೇ ಸ್ಟೈಲು..ನಮ್ಮದೇ ರೀತಿ ಎಂದು ಫನ್ನಿಯಾಗಿ ಕ್ಯಾಪ್ಷನ್​ ಬರೆದಿದ್ದಾರೆ. ಕೆಲವೇ ಹೊತ್ತಲ್ಲಿ ಫೋಟೋ ಸಿಕ್ಕಾಪಟೆ ವೈರಲ್ ಆಗಿದೆ.

ಗಿಡ ನೆಡಲು ಅಷ್ಟು ದುಬಾರಿ ಬೆಲೆಯ ಮಾರ್ಬಲ್​ ಕಲ್ಲು ಹಾಕಿ ನಿಲ್ಲಬೇಕಾ? ಅಂಥ ಮಳೆ ಬರುತ್ತಿದ್ದಾಗಲೂ ಸಸಿಗೆ ನೀರು ಹಾಕಬೇಕಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ. ಕಾಂಗ್ರೆಸ್​ ಕೂಡ ಶಿವರಾಜ್​ ಸಿಂಗ್​ ಚೌಹಾಣ್​ರನ್ನು ತುಂಬ ಟೀಕಿಸಿದೆ. ಮಣ್ಣಿನ ಮಗ, ರೈತನ ಮಗ ಎಂದು ಅಪಹಾಸ್ಯ ಮಾಡಿದೆ. ಮಧ್ಯಪ್ರದೇಶ ಕಾಂಗ್ರೆಸ್​ ಮಾಧ್ಯಮ ಕೋ ಆರ್ಡಿನೇಟರ್​ ನರೇಂದ್ರ ಸಲುಜಾ ಈ ಫೋಟೋವನ್ನು ಟ್ವೀಟ್​ ಮಾಡಿದ್ದು, ಇಲ್ಲಿ ಕೆಂಪು ಮಣ್ಣಿನ ವಿಹಂಗಮ ನೋಟವಿದೆ. ಹಾಗೇ, ಆ ಒದ್ದೆ ಮಣ್ಣಿನ ಮೇಲೆ ರೈತನ ಮಗ ಶಿವರಾಜ್​ ಜೀ ಅವರು ದುಬಾರಿ ಕಲ್ಲುಗಳನ್ನು ಹಾಕಿದ್ದಾರೆ. ಮಳೆ ಬರುತ್ತಿದೆ..ಕೊಡೆ ಹಿಡಿದು ಸಸಿಗೆ ನೀರು ಹಾಕುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ಗೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಅಬ್ಬಾ, ಅದೆಂತಾ ಪೋಸ್ ಎಂದಿದ್ದಾರೆ. ಛತ್ರಿ, ಮಳೆ, ಕ್ಯಾಮರಾ ಮತ್ತು ಆ್ಯಕ್ಷನ್​ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಬರೆದಿದ್ದಾರೆ.

ಇದನ್ನೂ ಓದಿ: ‘ಚಿತ್ರರಂಗ ಪ್ರವೇಶಿಸಿ ಕುಟುಂಬದ ಗೌರವ ಹಾಳು ಮಾಡುತ್ತಿ’ ಎಂದ ತಂದೆಗೆ ಮಗಳ ಉತ್ತರವೇನು?; ಇದು ಮಲ್ಲಿಕಾ ಯಶಸ್ಸಿನ ಕತೆ

ಮೈಸೂರಿನಲ್ಲಿ 101 ಗಣಪತಿ ದೇವಸ್ಥಾನ ತೆರವಿಗೆ ತೀವ್ರ ವಿರೋಧ! ಜಿಲ್ಲಾಡಳಿತ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ