Manipur: ಮಣಿಪುರದಲ್ಲಿ ಹಿಂಸಾಚಾರ, 6 ಮಂದಿ ನಾಪತ್ತೆ, ಇಬ್ಬರ ಶವ ಪತ್ತೆ

|

Updated on: Nov 13, 2024 | 8:49 AM

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ, ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಬೆಳಗ್ಗೆ ಇಬ್ಬರು ವೃದ್ಧರ ಮೃತದೇಹಗಳು ಪತ್ತೆಯಾಗಿದ್ದು, ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.ನಿನ್ನೆ ನಡೆದ ಗುಂಡಿನ ದಾಳಿಯ ನಂತರ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Manipur: ಮಣಿಪುರದಲ್ಲಿ ಹಿಂಸಾಚಾರ, 6 ಮಂದಿ ನಾಪತ್ತೆ, ಇಬ್ಬರ ಶವ ಪತ್ತೆ
ಮಣಿಪುರ
Image Credit source: India Today
Follow us on

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ, ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಬೆಳಗ್ಗೆ ಇಬ್ಬರು ವೃದ್ಧರ ಮೃತದೇಹಗಳು ಪತ್ತೆಯಾಗಿದ್ದು, ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.ನಿನ್ನೆ ನಡೆದ ಗುಂಡಿನ ದಾಳಿಯ ನಂತರ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ದಿನದ ಹಿಂದೆ, ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿತ್ತು, ಇದರಲ್ಲಿ 11 ಉಗ್ರರು ಹತರಾಗಿದ್ದರು.ನಾಪತ್ತೆಯಾದವರಿಗಾಗಿ ಆರಂಭಿಸಲಾದ ಶೋಧ ಕಾರ್ಯಾಚರಣೆಯಲ್ಲಿ ಜಕುರಧೋರ್ ಕರೋಂಗ್ ಪ್ರದೇಶದಲ್ಲಿ ಅವಶೇಷಗಳಡಿಯಲ್ಲಿ ಲೈಶ್ರಾಮ್ ಬಾಲೆನ್ ಮತ್ತು ಮೈಬಮ್ ಕೇಶೋ ಅವರ ಶವಗಳು ಪತ್ತೆಯಾಗಿವೆ.

ಸೋಮವಾರ ಈ ಸ್ಥಳದಲ್ಲಿ ಶಂಕಿತ ಉಗ್ರರು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಜುಕುರಾದೋರ್ ಕರೋಂಗ್ ಪ್ರದೇಶದಲ್ಲಿ ಉಗ್ರರು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ ನಂತರ ಇಬ್ಬರು ವೃದ್ಧರು ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ಮಣಿಪುರದಲ್ಲಿ ಗುಂಡಿನ ಚಕಮಕಿ, 11 ಶಂಕಿತ ಕುಕಿ ಬಂಡುಕೋರರ ಹತ್ಯೆ

ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿರಿಬಾಮ್ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯೊಂದಿಗಿನ ಎನ್‌ಕೌಂಟರ್‌ನಲ್ಲಿ ಶಂಕಿತ ಉಗ್ರರನ್ನು ಕೊಂದಿರುವುದನ್ನು ವಿರೋಧಿಸಿ ಕುಕಿ-ಜೋ ಪ್ರಾಬಲ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ 5 ಗಂಟೆಯಿಂದ ಬಂದ್​ಕೆ ಕರೆ ನೀಡಲಾಗಿದೆ.

ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 11 ಶಂಕಿತ ಉಗ್ರರು ಹತರಾಗಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾದ ಉಗ್ರರು ಪೊಲೀಸ್ ಠಾಣೆ ಮತ್ತು ಜಿರಿಬಾಮ್ ಜಿಲ್ಲೆಯ ಹತ್ತಿರದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶಿಬಿರದ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ನಂತರ ಎನ್‌ಕೌಂಟರ್ ನಡೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ