ಮಣಿಪುರ: ಮಣಿಪುರ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP) ತೋನೌಜಮ್ ಬೃಂದಾ ಶುಕ್ರವಾರ ಮುಖ್ಯಮಂತ್ರಿಯವರ ಶೌರ್ಯ ಪದಕವನ್ನು ಹಿಂತಿರುಗಿಸಿದ್ದಾರೆ.
ಬಿಜೆಪಿಯ ಪ್ರಮುಖ ನಾಯಕ ಲುಖೋಸಿ ಝೂ ಮತ್ತು ಇತರರು ಭಾಗಿಯಾಗಿದ್ದ ಡ್ರಗ್ಸ್ ಪ್ರಕರಣವೊಂದರ ತನಿಖೆ ನಡೆಸಿದ್ದ ಬೃಂದಾ ಅವರಿಗೆ ಅಗಸ್ಟ್ 13, 2018ರಲ್ಲಿ ಮುಖ್ಯಮಂತ್ರಿಯ ಶೌರ್ಯ ಪದಕವನ್ನು ನೀಡಲಾಗಿತ್ತು. ಆದರೆ, ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಆರೋಪಿಗಳನ್ನು ಲಾಂಫೆಲ್ನ ಎನ್ಡಿ ಮತ್ತು ಪಿಎಸ್ ನ್ಯಾಯಾಲಯ ಆರೋಪ ಮುಕ್ತಗೊಳಿಸಿ ತೀರ್ಪು ನೀಡಿತ್ತು.
ಈ ಬಗ್ಗೆ ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರಿಗೆ ಪತ್ರ ಬರೆದ ಬೃಂದಾ, ಆರೋಪಿಗಳನ್ನು ಬಿಡುಗಡೆ ಮಾಡಿರುವುದು ನನಗೆ ಅತೃಪ್ತಿಯನ್ನುಂಟು ಮಾಡಿದೆ. ನಾನು ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಲಿಲ್ಲ ಎಂದು ಅನಿಸುತ್ತಿದೆ. ನಿಮ್ಮಿಂದ ನನಗೆ ದೊರೆತ ಗೌರವಕ್ಕೆ ನಾನು ಅರ್ಹಳಲ್ಲ ಎಂದು ಭಾವಿಸಿ ಹೆಚ್ಚು ನಿಷ್ಠಾವಂತ ಪೊಲೀಸ್ ಅಧಿಕಾರಿಗೆ ಈ ಗೌರವವನ್ನು ನೀಡಲು ಪದಕವನ್ನು ಹಿಂತಿರುಗಿಸುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.
Published On - 6:50 pm, Sun, 20 December 20