ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 3.05ಲಕ್ಷ; ಚೇತರಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ

ಹೊಸದಾಗಿ ಪತ್ತೆಯಾದ ಪ್ರಕರಣಕ್ಕಿಂತ, ಗುಣಮುಖರಾದವರ ಪ್ರಮಾಣವೇ ಹೆಚ್ಚಾಗಿದ್ದು ತುಸು ಸಮಾಧಾನ ತಂದಿದೆ.

ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 3.05ಲಕ್ಷ; ಚೇತರಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ
ಪ್ರಾತಿನಿಧಿಕ ಚಿತ್ರ
Lakshmi Hegde

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 20, 2020 | 6:11 PM

ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧೆಡೆ 26,624 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಒಂದು ಕೋಟಿ ದಾಟಿದೆ (1,00,31,223). 29,690 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಹೊಸದಾಗಿ ಪತ್ತೆಯಾದ ಪ್ರಕರಣಕ್ಕಿಂತ, ಗುಣಮುಖರಾದವರ ಪ್ರಮಾಣವೇ ಹೆಚ್ಚಾಗಿದ್ದು ತುಸು ಸಮಾಧಾನ ತಂದಿದೆ.

ನಿನ್ನೆ (ಡಿ.19) ಒಟ್ಟು 25,152 ಹೊಸ ಕೇಸ್​​ಗಳು ಪತ್ತೆಯಾಗಿದ್ದವು. ಈ ಪ್ರಮಾಣಕ್ಕೆ ಹೋಲಿಸಿದರೆ ಇಂದು ಶೇ.5.8ರಷ್ಟು ಏರಿಕೆಯಾಗಿದೆ. ಆದರೆ ಕಳೆದ ಒಂದೂವರೆ ತಿಂಗಳಿಂದಲೂ ಪ್ರತಿದಿನ 40 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ಪತ್ತೆಯಾಗುತ್ತಿವೆ. ಸದ್ಯ ದೇಶದಲ್ಲಿ ಒಟ್ಟು ಕೊರೊನಾ ಸಕ್ರಿಯ ಪ್ರಕರಣ ಕೇವಲ 3,05,344 (3.05ಲಕ್ಷ) ಆಗಿದ್ದು, ಇದುವರೆಗೆ ಒಟ್ಟಾರೆ ಕೊವಿಡ್​-19 ಸೋಂಕಿನಿಂದ ಗುಣಮುಖರಾದವರು 95,80,402 ಮಂದಿ.

ಚೇತರಿಕೆ ಪ್ರಮಾಣ ಶೇ.95.51ಕ್ಕೆ ಏರಿಕೆಯಾಗಿದ್ದು ಒಂದು ಖುಷಿಯಾದರೆ ಇನ್ನೊಂದು ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ ದಾಟಿದ್ದರೂ ಸಕ್ರಿಯ ಪ್ರಕರಣಗಳು ತೀವ್ರ ಇಳಿಮುಖವಾಗಿದ್ದು ಸಂತಸದ ಸಂಗತಿ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನು 24ಗಂಟೆಯಲ್ಲಿ 341 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,45,477ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಪತ್ತೆಯಾಗಿರುವ ಸೋಂಕಿನ ಪ್ರಕರಣದ ಪ್ರಮಾಣದಲ್ಲಿ ಶೇ.76.62ರಷ್ಟು 10ರಾಜ್ಯಗಳಿಗೆ ಸಂಬಂಧಪಟ್ಟಿದ್ದು, ಅವು ಹೀಗಿವೆ..

(ಚಿತ್ರಕೃಪೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ)

ಹಾಗೇ ಹೊಸದಾಗಿ ದಾಖಲಾದ ಮರಣದ ಪ್ರಮಾಣದಲ್ಲಿ ಶೇ.81.23ರಷ್ಟು ಈ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಿಂದ ವರದಿಯಾಗಿವೆ..

ಇಂದಿನ ಚೇತರಿಕೆ ಪ್ರಮಾಣದಲ್ಲಿ ಶೇ.74.68ರಷ್ಟು ಈ 10 ರಾಜ್ಯಗಳ ಪಾಲು..  

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada