ಟಿಎಂಸಿ ಮುಳುಗುತ್ತಿರುವ ಹಡಗು, ಮಮತಾ ಬ್ಯಾನರ್ಜಿ ಯುಗ ಶೀಘ್ರವೇ ಅಂತ್ಯ: ಅಮಿತ್ ಶಾ

ಲಕ್ಷಾಂತರ ಕಾರ್ಯಕರ್ತರ ಪ್ರಯತ್ನದ ಫಲವಾಗಿ ಹಳ್ಳಿ ಹಳ್ಳಿಗೆ ನಮ್ಮ ಪಕ್ಷ ತಲುಪಿದೆ. ಇದೇ ಕಾರಣದಿಂದ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಬೇರೆ ಪಕ್ಷದವರಿಂದ ದಾಳಿಗಳು ನಡೆಯುತ್ತಿವೆ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ.

TV9kannada Web Team

| Edited By: ganapathi bhat

Apr 06, 2022 | 11:31 PM

ಕೋಲ್ಕತ್ತಾ: ತೆಲಂಗಾಣ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಪಕ್ಷ ಸಂಘಟನೆಯತ್ತ ಮುಖ ಮಾಡಿರುವ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಇಂದು ಬಿರ್​ಭೂಮ್​ನ ಬೋಲ್‌ಪುರದಲ್ಲಿ ರೋಡ್ ಶೋ ನಡೆಸಿದರು. ಹನುಮಾನ್ ಮಂದಿರದಿಂದ ಡಾಕ್ ಬಂಗಾಳದವರೆಗೆ ನಡೆದ ರೋಡ್ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

ಈ ವೇಳೆ, ತೃಣಮೂಲ ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಟಿಎಂಸಿ ಪಕ್ಷ ಮುಳುಗುತ್ತಿರುವ ಹಡುಗು. ಮಮತಾ ಬ್ಯಾನರ್ಜಿ ಯುಗ ಶೀಘ್ರವೇ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪಶ್ಚಿಮ ಬಂಗಾಳದ ಜನತೆ ಭ್ರಷ್ಟಾಚಾರದ ವಿರುದ್ಧ ಇದ್ದಾರೆ ಎಂದು ಅಮಿತ್ ಶಾ ಜನತೆಯ ಪರವಾಗಿ ಮಾತನಾಡಿದ್ದಾರೆ.

ಟಿವಿ9 ಭಾರತ್​ವರ್ಷ್​ಗೆ ಕೊಲ್ಕತ್ತಾದಲ್ಲಿ ಅಮಿತ್ ಶಾ ವಿಶೇಷ ಸಂದರ್ಶನ ನೀಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಕಳೆದ ಆರು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದೆ. ನಾನೂ ನಿರಂತರವಾಗಿ ಇಲ್ಲಿನ ಪಕ್ಷವನ್ನು ಬಲಪಡಿಸಲು ಕೆಲಸ ಮಾಡಿದ್ದೇನೆ. ಲಕ್ಷಾಂತರ ಕಾರ್ಯಕರ್ತರ ಪ್ರಯತ್ನದ ಫಲವಾಗಿ ಹಳ್ಳಿ ಹಳ್ಳಿಗೆ ನಮ್ಮ ಪಕ್ಷ ತಲುಪಿದೆ. ಇದೇ ಕಾರಣದಿಂದ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಬೇರೆ ಪಕ್ಷದವರಿಂದ ದಾಳಿಗಳು ನಡೆಯುತ್ತಿವೆ ಎಂದು ಶಾ ಹೇಳಿಕೆ ನೀಡಿದ್ದಾರೆ.

ನಾನು ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಎಲ್ಲಾ ಬೆಳವಣಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ತೃಣಮೂಲ ಕಾಂಗ್ರೆಸ್​ನ ಹಿರಿಯ ನಾಯಕ ಸುವೇಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ತುಂಬಾ ಲಾಭವಾಗಲಿದೆ. ಪಶ್ಚಿಮ ಬಂಗಾಳದಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ದೀದಿ-ಶಾ ಗುದ್ದಾಟ, ಪಶ್ಚಿಮ ಬಂಗಾಳದಲ್ಲಿ ಎರಡನೇ ದಿನ ಅಮಿತ್ ಶಾ ಪ್ರವಾಸ

Follow us on

Click on your DTH Provider to Add TV9 Kannada