ನೀವು ಹೇಳ್ತಿರೋದೆಲ್ಲ ಸುಳ್ಳು: ಪ್ರಧಾನಿ ಮೋದಿ, ಕೃಷಿ ಸಚಿವರಿಗೆ ಪತ್ರ ಬರೆದ AIKSCC

ಮೂರು ಕೃಷಿಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರತಿಪಕ್ಷಗಳಿಂದ ಪ್ರಚೋದಿತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಊಹಿಸಿದ್ದು ತಪ್ಪು. ಇನ್ನಾದರೂ ಕೇಂದ್ರ ನಾಯಕರು ಅನಿಸಿಕೆ, ಆಶಯ ಬದಲಿಸಿಕೊಂಡು ರೈತರ ಕುಂದುಕೊರತೆ ಬಗಹರಿಸಲು ಮುಂದಾಗಬೇಕು ಎಂದು AIKSCC ಆಗ್ರಹಿಸಿದೆ.

ನೀವು ಹೇಳ್ತಿರೋದೆಲ್ಲ ಸುಳ್ಳು: ಪ್ರಧಾನಿ ಮೋದಿ, ಕೃಷಿ ಸಚಿವರಿಗೆ ಪತ್ರ ಬರೆದ AIKSCC
ಪ್ರಧಾನಿ ನರೇಂದ್ರ ಮೋದಿ (ಎಡ), ಕೃಷಿ ಸಚಿವ ತೋಮರ್​ (ಬಲ).
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 20, 2020 | 4:19 PM

ದೆಹಲಿ: ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (AIKSCC) ಕೇಂದ್ರ ಸರ್ಕಾರಕ್ಕೆ ಬಹಿರಂಗ ಪತ್ರ ಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಧಾನಿ ಹಾಗೂ ಕೃಷಿ ಸಚಿವರ ಹೇಳಿಕೆಗಳಲ್ಲಿ ಸ್ವಲ್ಪವೂ ಸತ್ಯವಿಲ್ಲ. ಅವರಿಗೆ ರೈತರ ಬಗ್ಗೆ ಸಹಾನುಭೂತಿಯೇ ಇಲ್ಲ ಎಂದಿದೆ.

ಹೊಸ ಕೃಷಿ ಕಾಯ್ದೆಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಒಂದು ನಿರ್ದಿಷ್ಟ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಈ ಮಧ್ಯೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ರೈತರಿಗೆ 8 ಪುಟಗಳ ಪತ್ರ ಬರೆದು, ಯಾವುದೇ ಸುಳ್ಳುಗಳನ್ನು ನಂಬಬೇಡಿ. ನಾವು ಕನಿಷ್ಠ ಬೆಂಬಲ ಬೆಲೆಯನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿಯವರೂ ಸಹ ಪದೇಪದೆ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದಾರೆ. ನೂತನ ಕಾಯ್ದೆಗಳಿಂದ ಅನುಕೂಲವೇ ಆಗುತ್ತಿದೆ. ನಿಮ್ಮ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಲು ನಾವು ಸಿದ್ಧರಿದ್ದೇವೆ. ದಯವಿಟ್ಟು ಚರ್ಚೆಗೆ ಬನ್ನಿ ಎಂದು ರೈತರಿಗೆ ಕೈಮುಗಿದಿದ್ದರು. ಇಷ್ಟೆಲ್ಲ ಆದರೂ ರೈತರು ಮಾತ್ರ ಪಟ್ಟು ಬಿಡುತ್ತಿಲ್ಲ.

ಇದೀಗ ಪ್ರಧಾನಿ ಮತ್ತು ಕೃಷಿಸಚಿವರನ್ನು ಉಲ್ಲೇಖಿಸಿ ಪತ್ರ ಬರೆದಿರುವ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ, ನೀವೆಲ್ಲ ಕೃಷಿ ಕಾಯ್ದೆಗಳ ಬಗ್ಗೆ ಏನೆನೆಲ್ಲ ಹೇಳುತ್ತಿದ್ದೀರೋ, ಅದೆಲ್ಲವೂ ಸುಳ್ಳು. ಅಲ್ಲದೆ, ರೈತರ ಸಮಸ್ಯೆಗಳನ್ನು ಪರಿಹರಿಸಬೇಕಾದ ನೀವು ಕಳೆದ ಎರಡು ದಿನಗಳಿಂದಲೂ ರೈತರ ಪ್ರತಿಭಟನೆ, ಬೇಡಿಕೆಗಳ ಬಗ್ಗೆ ವಾಗ್ದಾಳಿ ನಡೆಸುತ್ತಿದ್ದೀರಿ. ನಿಮಗೆ ರೈತರ ಬಗ್ಗೆ ಸಹಾನುಭೂತಿ ಇಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಮೂರು ಕೃಷಿಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರತಿಪಕ್ಷಗಳಿಂದ ಪ್ರಚೋದಿತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಊಹಿಸಿದ್ದು ತಪ್ಪು. ಇನ್ನಾದರೂ ಕೇಂದ್ರ ನಾಯಕರು ಅನಿಸಿಕೆ, ಆಶಯ ಬದಲಿಸಿಕೊಂಡು ರೈತರ ಕುಂದುಕೊರತೆ ಬಗಹರಿಸಲು ಮುಂದಾಗಬೇಕು. ಮೂರೂ ಕಾಯ್ದೆಗಳನ್ನು ಕೇಂದ್ರ ವಾಪಸ್​ ಪಡೆಯುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ನೂತನ ಕೃಷಿ ಕಾಯ್ದೆ ವಿರೋಧಿಸಿ ಸಂಸದೀಯ ಸಮಿತಿಗಳಿಗೆ ರಾಜೀನಾಮೆ ಸಲ್ಲಿಸಿದ ಹನುಮಾನ್ ಬೇನಿವಾಲ್

Published On - 4:18 pm, Sun, 20 December 20