AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manipur Violence: ಮಣಿಪುರದ ಮುಖ್ಯಮಂತ್ರಿ ರಾಜೀನಾಮೆ ನೀಡಲ್ಲ, ಊಹಾಪೋಹಕ್ಕೆ ತೆರೆ ಎಳೆದ ಸರ್ಕಾರ

ಮಣಿಪುರದಲ್ಲಿ ನಡೆದ ಎಲ್ಲ ಘಟನೆಗೆ ಮುಖ್ಯಮಂತ್ರಿ ಎನ್ ಬಿರೆನ್ ಹೊಣೆ ಎಂದು ಕಾಂಗ್ರೆಸ್​ ಮತ್ತು ಇತರ ಪ್ರತಿಪಕ್ಷಗಳು ದೋಷಿಸಿದೆ. ಹಾಗಾಗಿ ಅವರು ಈ ಬಗ್ಗೆ ವೈಯಕ್ತಿಕ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿದೆ.

Manipur Violence: ಮಣಿಪುರದ ಮುಖ್ಯಮಂತ್ರಿ ರಾಜೀನಾಮೆ ನೀಡಲ್ಲ, ಊಹಾಪೋಹಕ್ಕೆ ತೆರೆ ಎಳೆದ ಸರ್ಕಾರ
ಎನ್. ಬಿರೇನ್ ಸಿಂಗ್
ಅಕ್ಷಯ್​ ಪಲ್ಲಮಜಲು​​
|

Updated on:Jul 21, 2023 | 3:32 PM

Share

ಇಂಫಾಲ್: ಮಣಿಪುರದಲ್ಲಿ (Manipur) ಎರಡು ಸಮುದಾಯದ ನಡುವೆ ನಡೆದ ಘರ್ಷಣೆಯಿಂದ ಹಿಂಸಾಚಾರ ಉಂಟಾಗಿದೆ. ಅನೇಕ ಕಡೆ ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಇನ್ನೂ ಈ ಹಿಂಸಾಚಾರದಿಂದ 180ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ, ಅನೇಕರು ಮಣಿಪುರದಿಂದ ವಲಸೆ ಹೋಗಿದ್ದಾರೆ. ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಮಧ್ಯೆ ಇಡಿ ಮನುಕುಲವೆ ನಾಚಿಕೆಪಡುವ ಕೃತ್ಯವೊಂದು ನಡೆದಿದೆ. ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ರಾಜ್ಯದಲ್ಲಿ ನಡೆದ ಎಲ್ಲ ಘಟನೆಗೆ ಮುಖ್ಯಮಂತ್ರಿ ಎನ್ ಬಿರೆನ್ ಹೊಣೆ ಎಂದು ಕಾಂಗ್ರೆಸ್​ ಮತ್ತು ಇತರ ಪ್ರತಿಪಕ್ಷಗಳು ದೋಷಿಸಿದೆ. ಹಾಗಾಗಿ ಅವರು ಈ ಬಗ್ಗೆ ವೈಯಕ್ತಿಕ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ಅಭಿಯಾನವನ್ನು ಕೂಡ ಆರಂಭಿಸಿದ್ದಾರೆ.

ಇದು ಆಡಳಿತ ವೈಫಲ್ಯವಲ್ಲ, ರಾಜೀನಾಮೆ ನೀಡುವ ಚರ್ಚೆ ಇಲ್ಲ, ಬದಲಾಗಿ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸಬೇಕಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ. ಮಣಿಪುರದಲ್ಲಿ ಎಲ್ಲ ಸರಿ ಇದೆ. ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಗೃಹ ಸಚಿವರು ಕೂಡ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಕೇಂದ್ರ ಗೃಹಸಚಿವ ಅಮಿತ್​ ಶಾ ಕುಕಿ ಸಮುದಾಯದ ನಾಯಕರ ಜತೆಗೆ ಮಾತನಾಡಿದ್ದು, ರಾಜ್ಯ ಸರ್ಕಾರದ ಜತೆಗೆ ಕೇಂದ್ರ ಸರ್ಕಾರ ಸಂಪರ್ಕದಲ್ಲಿದ್ದು ಎಲ್ಲ ರೀತಿ ಮಾಹಿತಿಯನ್ನು ಪಡೆಯುತ್ತಿದೆ. ಮೇ 4ರಂದು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿತ್ತು, ಗುರುವಾರ (ಜು.21) ಈ ವಿಡಿಯೋ ಎಲ್ಲ ಕಡೆ ವೈರಲ್​ ಆಗಿತ್ತು, 71 ದಿನಗಳ ಹಿಂದೆ ನಡೆದ ಈ ಘಟನೆಯ ಬಗ್ಗೆ ದೂರು ನೀಡಲಾಗಿದೆ, ಆದರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ, ಇದೀಗ ವಿಡಿಯೋ ವೈರಲ್​ ಆಗಿರುವ ಕಾರಣ ನಾಲ್ವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ:  ದ್ವೇಷದ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದೆ ಮಣಿಪುರ, ಹಿಂಸಾಚಾರಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ​ ಬಳಿಕ, ರಾಜ್ಯ ಸರ್ಕಾರವನ್ನು ಸೋಶಿಯಲ್​​ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಕೂಡ ನಡೆದಿದೆ. ಇನ್ನೂ ಸುಪ್ರೀಂ ಕೋರ್ಟ್​ ಕೂಡ ನೀವು ಕ್ರಮ ತೆಗೆದುಕೊಳ್ಳಿ, ಸಾಧ್ಯವಾಗದಿದ್ದಾರೆ ನಾವು ಮಾಡುತ್ತೇವೆ ಎಂದು ಖಡಕ್​​ ಎಚ್ಚರಿಕೆ ನೀಡಿದೆ. ಪ್ರಧಾನಿ ಮೋದಿ ಕೂಡ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ಇನ್ನೂ ಸಂಸತ್​ನಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲು ಅವಕಾಶವನ್ನು ನೀಡಲಾಗಿದೆ. ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದೆ, ಜತೆಗೆ ಸದನದಲ್ಲಿ ಪ್ರತಿಭಟನೆ ಕೂಡ ಪ್ರಾರಂಭವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Fri, 21 July 23

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ