ಮಣಿಪುರ: ಮನೆಯಿಂದಲೇ ಯೋಧನ ಅಪಹರಣ, ಹತ್ಯೆ

|

Updated on: Sep 18, 2023 | 9:06 AM

ಮಣಿಪುರದ ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ಭಾರತೀಯ ಯೋಧರೊಬ್ಬರ ಶವ ಪತ್ತೆಯಾಗಿದೆ. ಕೆಲವು ಶಸ್ತ್ರಸಜ್ಜಿತರು ಯೋಧರನ್ನು ಮನೆಯಿಂದಲೇ ಅಪಹರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ ಇದೀಗ ಗುಂಡೇಟು ತಗುಲಿದ ಸ್ಥಿತಿಯಲ್ಲಿ ಯೋಧನ ಶವ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.ಯೋಧ ಸೆರ್ಟೊ ತಂಗ್‌ತಾಂಗ್ ಕೋಮ್ ರಜೆಯ ಮೇಲೆ ಮನೆಗೆ ಬಂದಿದ್ದರು, ಮೂವರು ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಹಿಡಿದು ಬೆದರಿಸಿ ಅಪಹರಿಸಿದ್ದರು.

ಮಣಿಪುರ: ಮನೆಯಿಂದಲೇ ಯೋಧನ ಅಪಹರಣ, ಹತ್ಯೆ
ಯೋಧ
Follow us on

ಮಣಿಪುರ(Manipur)ದ ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ಭಾರತೀಯ ಯೋಧರೊಬ್ಬರ ಶವ ಪತ್ತೆಯಾಗಿದೆ. ಕೆಲವು ಶಸ್ತ್ರಸಜ್ಜಿತರು ಯೋಧರನ್ನು ಮನೆಯಿಂದಲೇ ಅಪಹರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ ಇದೀಗ ಗುಂಡೇಟು ತಗುಲಿದ ಸ್ಥಿತಿಯಲ್ಲಿ ಯೋಧನ ಶವ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.ಯೋಧ ಸೆರ್ಟೊ ತಂಗ್‌ತಾಂಗ್ ಕೋಮ್ ರಜೆಯ ಮೇಲೆ ಮನೆಗೆ ಬಂದಿದ್ದರು, ಮೂವರು ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಹಿಡಿದು ಬೆದರಿಸಿ ಅಪಹರಿಸಿದ್ದರು.

ಭಾನುವಾರ ಇಂಫಾಲ್ ಪೂರ್ವ ಜಿಲ್ಲೆಯ ಖುನಿಂಗ್‌ಥೆಕ್ ಗ್ರಾಮದಲ್ಲಿ ಅವರ ಶವ ಪತ್ತೆಯಾಗಿತ್ತು, ದೇಹದ ತುಂಬೆಲ್ಲಾ ಗುಂಡೇಟುಗಳಿದ್ದವು. ಯೋಧ ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದವರ ಅಪೇಕ್ಷೆಯಂತೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ. ಮೃತ ಯೋಧನ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡಲು ಸೇನಾ ತಂಡ ಅವರ ಮನೆಗೆ ತಲುಪಿದೆ.

ಈ ಕಷ್ಟದ ಸಮಯದಲ್ಲಿ ಸೇನೆಯು ಅವರ ಕುಟುಂಬದೊಂದಿಗೆ ನಿಲ್ಲುತ್ತದೆ ಎಂದು ಹೇಳಿದೆ. 8ನೇ ಅಸ್ಸಾಂ ರೆಜಿಮೆಂಟ್‌ನಿಂದ ಸ್ವಯಂ ನಿವೃತ್ತಿ ಪಡೆದ ನಂತರ ಮೃತ ಜವಾನ್ ತಂಗ್‌ಥಾಂಗ್ ಅವರನ್ನು ಕೆಲವು ವರ್ಷಗಳ ಹಿಂದೆ ಡಿಎಸ್‌ಸಿಗೆ ಮರು ನೇಮಕ ಮಾಡಲಾಗಿತ್ತು. ರಜೆಯ ಮೇಲೆ ಊರಿಗೆ ಹೋಗಿದ್ದ ಅವರು ಸೋಮವಾರ ಕರ್ತವ್ಯಕ್ಕೆ ಮರಳಬೇಕಿತ್ತು.

ಮತ್ತಷ್ಟು ಓದಿ: ಛತ್ತೀಸ್​​ಗಢದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಂಡ್ಯ ಮೂಲದ ಯೋಧ ಜನಾರ್ದನ್‌ ಗೌಡ ಸಾವು

ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಲಾಗಿದೆಯೋ ಅಥವಾ ಇನ್ಯಾವುದೇ ಕಾರಣಗಳಿವೆಯಾ, ಹತ್ಯೆ ಮಾಡಿದ್ದು ಯಾರು ಅಪಹರಣ ಮಾಡಿದ್ದೇಕೆ?ಇವೆಲ್ಲಾ ವಿಚಾರಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:03 am, Mon, 18 September 23