ಛತ್ತೀಸ್​​ಗಢದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಂಡ್ಯ ಮೂಲದ ಯೋಧ ಜನಾರ್ದನ್‌ ಗೌಡ ಸಾವು

ಛತ್ತೀಸ್​​ಗಢದಲ್ಲಿ ಭೂಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಾರ್ದನ್‌ ಕಳೆದ 1 ವಾರದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು.

ಛತ್ತೀಸ್​​ಗಢದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಂಡ್ಯ ಮೂಲದ ಯೋಧ ಜನಾರ್ದನ್‌ ಗೌಡ ಸಾವು
ಜನಾರ್ದನ್‌ ಗೌಡ
Follow us
Ganapathi Sharma
|

Updated on: Jun 23, 2023 | 9:54 PM

ಮಂಡ್ಯ: ಛತ್ತೀಸ್​​ಗಢದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಂಡ್ಯ (Mandya) ಮೂಲದ ಯೋಧ ಜನಾರ್ದನ್‌ ಗೌಡ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಮೃತಪಟ್ಟಿದ್ದಾರೆ. ಇವರು ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದವರಾಗಿದ್ದಾರೆ. ಛತ್ತೀಸ್​​ಗಢದಲ್ಲಿ (Chhattisgarh) ಭೂಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಾರ್ದನ್‌ ಕಳೆದ 1 ವಾರದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಛತ್ತೀಸ್​​ಗಢದ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಯೋಧನ ಪಾರ್ಥಿವಶರೀರ ಶನಿವಾರ ಮಧ್ಯಾಹ್ನ ಸ್ವಗ್ರಾಮಕ್ಕೆ ತಲುಪಲಿದೆ. ಸಂಜೆ ಕಿಕ್ಕೇರಿ ಗ್ರಾಮದಲ್ಲಿ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜನಾರ್ದನ ಗೌಡ ಅವರು 11 ವರ್ಷಗಳಿಂದ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 5 ವರ್ಷಗಳ ಹಿಂದೆ ಮದುವೆಯಾಗಿದ್ದ ಯೋಧ ಜನಾರ್ದನಗೌಡಗೆ 4 ವರ್ಷದ ಓರ್ವ ಪುತ್ರಿಯಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ