ಮಣಿಪುರ ಹಿಂಸಾಚಾರ: ನಮ್ಮ ನಾಯಕರನ್ನು ನಂಬುವುದಿಲ್ಲ, ಈ ಚುನಾವಣೆಗೆ ಅರ್ಥವಿಲ್ಲ: ಸಂತ್ರಸ್ತರು

|

Updated on: Mar 29, 2024 | 10:13 AM

Manipur violence: ಮಣಿಪುರದಲ್ಲಿ ಏಪ್ರಿಲ್ 19 ರಂದು ಚುನಾವಣೆ ನಡೆಯಲಿದ್ದು, ಇಲ್ಲಿ ಏಪ್ರಿಲ್ 19 ಮತ್ತು 26 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಹಿಂಸಾಚಾರದಿಂದ ಸ್ಥಳಾಂತರಗೊಂಡಿರುವ ಈ ಸಮುದಾಯಕ್ಕೆ ಮತದಾನ ಮಾಡುವ ಆಸಕ್ತಿ ಇಲ್ಲ. ಇದು ನಮ್ಮ ಅಲೋಚನೆಗೆ ಬಿಟ್ಟಿದ್ದು, ಈ ಬಾರಿ ನಾವು ಮತದಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಾವೆಲ್ಲರೂ ಇಲ್ಲಿ ನಿರಾಶ್ರಿತರು, ನಮ್ಮ ಮನಸ್ಸಿನಲ್ಲಿ ನಮ್ಮ ಭವಿಷ್ಯದ ಬಗ್ಗೆ ಚಿಂತೆಯಾಗುತ್ತಿದೆ ಎಂದು ನಗಂತೋಯಿಬಿ ಮುತುಮ್ ಸಮುದಾಯ ಹೇಳಿದೆ.

ಮಣಿಪುರ ಹಿಂಸಾಚಾರ: ನಮ್ಮ ನಾಯಕರನ್ನು ನಂಬುವುದಿಲ್ಲ, ಈ ಚುನಾವಣೆಗೆ ಅರ್ಥವಿಲ್ಲ: ಸಂತ್ರಸ್ತರು
Follow us on

ಮಣಿಪುರದಲ್ಲಿ ಕಳೆದ ವರ್ಷ ಹಿಂಸಾಚಾರದಿಂದ ನಗಂತೋಯಿಬಿ ಮುತುಮ್ ಸಮುದಾಯವು ಇಂಫಾಲ್‌ನಲ್ಲಿರುವ ಪರಿಹಾರ ಶಿಬಿರಕ್ಕೆ ಸ್ಥಳಾಂತರಗೊಂಡಿತ್ತು. ಇದೀಗ ಅವರು ಆ ಶಿಬಿರದಲ್ಲಿ ತಮ್ಮ ಜೀವನ ಕಳೆಯುತ್ತಿದ್ದಾರೆ. ಈ ಶಿಬಿರದಿಂದ ಯಾವಾಗ ನಾವು ನಮ್ಮ ಮನೆಗೆ ಮರುಳುತ್ತೇವೆ ಎಂಬ ಅನಿಶ್ಚಿತತೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನು ಇವರು ಕೂಡ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಬೇಕಿದೆ. ಇದಕ್ಕಾಗಿ ಸರ್ಕಾರ ಅಲ್ಲಿಂದ ಮತ ಚಲಾಯಿಸಲು ಅವರಿಗೆ ಅವಕಾಶ ನೀಡಿದೆ.

ಮಣಿಪುರದಲ್ಲಿ ಏಪ್ರಿಲ್ 19 ರಂದು ಚುನಾವಣೆ ನಡೆಯಲಿದ್ದು, ಇಲ್ಲಿ ಏಪ್ರಿಲ್ 19 ಮತ್ತು 26 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಹಿಂಸಾಚಾರದಿಂದ ಸ್ಥಳಾಂತರಗೊಂಡಿರುವ ಈ ಸಮುದಾಯಕ್ಕೆ ಮತದಾನ ಮಾಡುವ ಆಸಕ್ತಿ ಇಲ್ಲ. ಇದು ನಮ್ಮ ಅಲೋಚನೆಗೆ ಬಿಟ್ಟಿದ್ದು, ಈ ಬಾರಿ ನಾವು ಮತದಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಾವೆಲ್ಲರೂ ಇಲ್ಲಿ ನಿರಾಶ್ರಿತರು, ನಮ್ಮ ಮನಸ್ಸಿನಲ್ಲಿ ನಮ್ಮ ಭವಿಷ್ಯದ ಬಗ್ಗೆ ಚಿಂತೆಯಾಗುತ್ತಿದೆ. ನಾವು ಸಂಘರ್ಷದ ಮಧ್ಯದಲ್ಲಿ ಇದ್ದೇವೆ, ಆದ್ದರಿಂದ ನಾವು ಚುನಾವಣೆಯ ಬಗ್ಗೆ ಯೋಚಿಸುತ್ತಿಲ್ಲ. ನಾವು ಇನ್ನು ಮುಂದೆ ನಮ್ಮ ನಾಯಕರನ್ನು ನಂಬುವುದಿಲ್ಲ. ಅವರು ನಮಗಾಗಿ ಏನನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.

ಮತದಾನಕ್ಕೆ ಅನುಕೂಲವಾಗುವಂತೆ ಚುನಾವಣಾ ಆಯೋಗವು ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಆದರೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಆಸಕ್ತಿಯನ್ನು ನಗಂತೋಯಿಬಿ ಮುತುಮ್ ಸಮುದಾಯ ಹೊಂದಿಲ್ಲ. ಸರ್ಕಾರ ಇನ್ನೂ ನಮಗೆ ಸಂಪೂರ್ಣ ಹಕ್ಕುಗಳನ್ನು ನೀಡಿಲ್ಲ. ವಿಶೇಷ ಮತಗಟ್ಟೆಗಳಿದ್ದರೂ, ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮನಸ್ಸು ನಮ್ಮಲ್ಲಿ ಇಲ್ಲ. ಒಂದು ವೇಳೆ ನಾವು ಮಣಿಪುರ ಅಂದರೆ ನಮ್ಮ ಮನೆಯಲ್ಲಿ ಇದ್ದಿದ್ದರೆ ಚುನಾವಣೆ ಬಗ್ಗೆ ಯೋಚನೆ ಮಾಡುತ್ತಿದ್ದೇವು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದ ಗ್ಯಾಂಗ್‌ಸ್ಟರ್‌, ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು

ನಮ್ಮ ಮತಗಳಿಗೆ ಈಗ ಯಾವುದೇ ಅರ್ಥವಿಲ್ಲ. ನಾವು 10 ತಿಂಗಳಿಗಿಂತ ಹೆಚ್ಚು ಕಾಲ ಈ ಶಿಬಿರದಲ್ಲಿದ್ದೇವೆ. ನಮಗೆ ಯಾವುದೇ ಭರವಸೆ ಇಲ್ಲ ಎಂದು ಚುರಾಚಂದಪುರದಿಂದ ಸ್ಥಳಾಂತರಗೊಂಡ ಲುಲುನ್ ಹೇಳಿದರು. ನಾವು ಪರಿಹಾರ ಶಿಬಿರಗಳಲ್ಲಿ ಬಳಲುತ್ತಿದ್ದೇವೆ ಎಂದು ಹೇಳಿದ್ದಾರೆ. ಇದರ ಜತೆಗೆ ನಮ್ಮ ಮನೆ ಕಳೆದುಕೊಂಡಿದ್ದೇವೆ ಅಲ್ಲಿದ್ದ ಮತದಾರರ ಗುರುತಿನ ಚೀಟಿಯಂತಹ ಪ್ರಮುಖ ಗುರುತಿನ ದಾಖಲೆಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇದೀಗ ಚುನಾವಣಾ ಆಯೋಗಕ್ಕೆ ಮಣಿಪುರದಲ್ಲಿ ಮತದಾನ ಮಾಡುವುದು ದೊಡ್ಡ ಸವಾಲಾಗಿದೆ. ಚುನಾವಣಾ ಅಧಿಕಾರಿಗಳು ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಎರಡು ಹಂತಗಳಲ್ಲಿ ಚುನಾವಣೆಯ ನಡೆಸಲಾಗುವುದು ಹಾಗೂ ಉತ್ತಮ ಭದ್ರತೆಯನ್ನು ನೀಡಲಾಗಿದೆ. ಇನ್ನು ಮಣಿಪುರದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿದ್ದು, ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಈ ಹಿಂದೆ ಗೆದ್ದಿದೆ. ಆದರೆ ಈ ಬಾರಿ ಕಾಂಗ್ರೆಸ್​​ ಹಾಗೂ ಇತರ ಪಕ್ಷಗಳು ಮಣಿಪುರ ಹಿಂಸಚಾರವನ್ನು ಬಳಸಿಕೊಂಡು ರಾಜಕೀಯ ಕಾರ್ಯತಂತ್ರಗಳನ್ನು ನಡೆಸಿದೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.