Viral: ಈ ದೇವಾಲಯದಲ್ಲಿ 1 ನಿಂಬೆ ಹಣ್ಣನ್ನು ಹರಾಜಿನ ಮೂಲಕ ಲಕ್ಷ ಲಕ್ಷ ಕೊಟ್ಟು ಖರೀದಿಸುತ್ತಾರೆ; ಯಾಕಿಷ್ಟು ದುಬಾರಿ?

ಮುರುಗನ್ ದೇವಸ್ಥಾನದಲ್ಲಿ ಪತ್ರೀ ವರ್ಷ ಅದ್ಧೂರಿಯಾಗಿ 9 ದಿನಗಳ ಕಾಲ ಉತಿರಂ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ನಡೆದ ಹಬ್ಬದ ಸಮಯದಲ್ಲಿ ಭಕ್ತರೊಬ್ಬರು ಒಂದು ನಿಂಬೆ ಹಣ್ಣನ್ನು ಹರಾಜಿನಲ್ಲಿ 50,500 ರೂ.ಗೆ ಖರೀದಿಸಿದ್ದಾರೆ.ಈ ದೇವಾಲಯದ ನಿಂಬೆಹಣ್ಣು ಯಾಕಿಷ್ಟು ದುಬಾರಿ ಎಂದು ನೀವು ಯೋಚಿಸುತ್ತಿರಬಹುದು. ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.

Viral: ಈ ದೇವಾಲಯದಲ್ಲಿ 1 ನಿಂಬೆ ಹಣ್ಣನ್ನು ಹರಾಜಿನ ಮೂಲಕ ಲಕ್ಷ ಲಕ್ಷ ಕೊಟ್ಟು ಖರೀದಿಸುತ್ತಾರೆ; ಯಾಕಿಷ್ಟು ದುಬಾರಿ?
Lemons sold for Rs 2.3 lakh
Follow us
ಅಕ್ಷತಾ ವರ್ಕಾಡಿ
|

Updated on: Mar 29, 2024 | 10:22 AM

ತಮಿಳುನಾಡು:  ವಿಲ್ಲುಪುರಂ ಜಿಲ್ಲೆಯ ಮುರುಗನ್ ದೇವಸ್ಥಾನದ ಉತಿರಂ ಹಬ್ಬದ ಸಂದರ್ಭದಲ್ಲಿ ಒಟ್ಟು ಒಂಬತ್ತು ನಿಂಬೆ ಹಣ್ಣು ಬರೋಬ್ಬರಿ 2.36 ಲಕ್ಷಕ್ಕೆ ರೂಪಾಯಿಗೆ ಹರಾಜಿನಲ್ಲಿ ಮಾರಾಟವಾಗಿದೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ 10 ರೂಪಾಯಿಗೆ ಎರಡು ಮೂರು ನಿಂಬೆ ಹಣ್ಣು ಖರೀದಿಸಬಹುದು. ಆದರೆ ಈ ದೇವಾಲಯದ ನಿಂಬೆಹಣ್ಣು ಯಾಕಿಷ್ಟು ದುಬಾರಿ ಎಂದು ನೀವು ಯೋಚಿಸುತ್ತಿರಬಹುದು. ಹಾಗಿದ್ದರೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಮುರುಗನ್ ದೇವಸ್ಥಾನದಲ್ಲಿ ಪತ್ರೀ ವರ್ಷ ಅದ್ಧೂರಿಯಾಗಿ 9 ದಿನಗಳ ಕಾಲ ಉತಿರಂ ಹಬ್ಬವನ್ನು ಆಚರಿಸಲಾಗುತ್ತದೆ. 9 ದಿನಗಳ ದೇವರ ಪೂಜಾ ಸಮಯದಲ್ಲಿ ಒಂದೊಂದು ದಿನ ದೇವರ ತ್ರಿಶೂಲದ ಮೇಲೆ ಲಿಂಬೆ ಹಣ್ಣುಗಳನ್ನು ಇಟ್ಟು ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಈ ಲಿಂಬೆಹಣ್ಣಿನಲ್ಲಿ ವಿಶೇಷ ಶಕ್ತಿಯಿದೆ ಎಂದು ಸಾಕಷ್ಟು ವರ್ಷಗಳಿಂದ ಭಕ್ತರು ನಂಬಿಕೊಂಡು ಬಂದಿದ್ದಾರೆ. ಸಂತಾನದೋಷದಿಂದ ಬಳಲುತ್ತಿರುವ ದಂಪತಿಗಳಿಗೆ ಈ ಲಿಂಬೆಹಣ್ಣು ಸಿಕ್ಕಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಇದರ ಹೊರತಾಗಿ ಯಾರು ಈ ಲಿಂಬೆಯನ್ನು ಪಡೆಯುವವರು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಶ್ರೀ ರಾಮನ ಅಸ್ತಿತ್ವ ಪ್ರಶ್ನಿಸಿದ್ದ ಮಾಜಿ ಸಿಎಂನ ಊರಿನಲ್ಲಿ ಪತ್ತೆಯಾಯಿತು ಶ್ರೀರಾಮನ ವಿಗ್ರಹ

ಇಷ್ಟೆಲ್ಲಾ ನಂಬಿಕೆಗಳಿಂದಲೇ ಆ ವಿಶೇಷ ಲಿಂಬೆ ಹಣ್ಣು ಪಡೆಯಲು ದಂಪತಿಗಳು, ಸೇರಿದಂತೆ ಸಾಕಷ್ಟು ಉದ್ಯಮಿಗಳು ಪೈಪೋಟಿ ನಡೆಸುತ್ತಾರೆ. ಈ ವರ್ಷ ನಡೆದ ಹಬ್ಬದ ಸಮಯದಲ್ಲಿ ಮೊದಲ ದಿನ 50,500ರೂ. ಗೆ ಮಾರಾಟವಾದ ಲಿಂಬೆ, 2ನೇ ದಿನ ಮತ್ತು 3ನೇ ದಿನ 26,500ರೂ ಮತ್ತು 42,100ರೂ ಗೆ ಮಾರಾಟವಾಗಿದೆ. 4ನೇ ದಿನ 1900ರೂ, 5ನೇ ದಿನ 11,00ರೂ, 6ನೇ ದಿನ 34,000ರೂ, 7ನೇ ದಿನ 24,500ರೂ, 8ನೇ ದಿನ 13,500, ಮತ್ತು 9ನೇ ದಿನ 15,00ರೂಗಳಿಗೆ ಮಾರಾಟವಾಗಿ ಒಟ್ಟು 9 ದಿನಗಳಲ್ಲಿ 9 ನಿಂಬೆ ಹಣ್ಣು 2,36,000ಕ್ಕೆ ಮಾರಾಟವಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ