ಮನ್ ಕೀ ಬಾತ್ ಕೇವಲ ಕಾರ್ಯಕ್ರಮವಲ್ಲ ಜನರೇ ದೇವರು, ಇದು ವ್ರತ ಇದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಪ್ರಧಾನಿ ಮೋದಿಯವರ ಪ್ರಕಾರ, ಇಷ್ಟು ತಿಂಗಳುಗಳು ಮತ್ತು ಇಷ್ಟು ವರ್ಷಗಳು ಹೇಗೆ ಕಳೆದವು ಎಂದು ಕೆಲವೊಮ್ಮೆ ನಂಬಲು ಸಾಧ್ಯವಿಲ್ಲ. ಪ್ರತಿ ಬಾರಿ ಮನ್ ಕೀ ಬಾತ್ ಸಂಚಿಕೆ ಇರುತ್ತಿತ್ತು. ದೇಶದ ಮೂಲೆ ಮೂಲೆಯಿಂದ ಜನ ಸೇರುತ್ತಲೇ ಇದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವವೇ ಇರಲಿ ಅಥವಾ ಭೇಟಿ ಬಚಾವೋ ಭೇಟಿ ಪಢಾವೊ, ಎಲ್ಲವನ್ನೂ ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಮನ್ ಕಿ ಬಾತ್ ಕಾರ್ಯಕ್ರಮ ಕೇವಲ ತನಗೆ ಒಂದು ಕಾರ್ಯಕ್ರಮವಲ್ಲ, ಪೂಜೆ, ನಂಬಿಕೆ ಮತ್ತು ವ್ರತವಿದ್ದಂತೆ ಎಂದು ಪ್ರಧಾನಿ ಮೋದಿ ಹೇಳಿದರು. ಹರ್ಯಾಣದ ಸುನಿಲ್ ಜಾಗರಣ್ ಅವರ ಬಗ್ಗೆ ಮಾತನಾಡಿ, ಅವರು ಆರಂಭಿಸಿರುವ ಸೆಲ್ಫಿ ವಿತ್ ಡಾಟರ್ ಅಭಿಯಾನವೂ ದೇಶಾದ್ಯಂತ ಮನ್ನಣೆ ಪಡೆದಿದೆ. ಇದು ಕೇವಲ ಟೆಕ್ನಾಲಜಿ ಅಥವಾ ಅಭಿಯಾನ ಮಾತ್ರವಲ್ಲ ಹೆಣ್ಣು ಕುಟುಂಬಕ್ಕೆ ಎಷ್ಟು ಮುಖ್ಯ ಎಂದು ಸಾರುವ ಕಾರ್ಯಕ್ರಮ ಎಂದರು.
ನಾನು ಹರಿಯಾಣದಿಂದಲೇ ಬೇಟಿ ಬಚಾವೋ ಬೇಟಿ ಬಢಾವೋ ಆಂದೋಲನವನ್ನು ಸಹ ಪ್ರಾರಂಭಿಸಿದೆ. ಹರಿಯಾಣದ ಲಿಂಗ ಅನುಪಾತದಲ್ಲಿ ಸುಧಾರಣೆಯಾಗಿದೆ ಎಂದರು.
ಜಮ್ಮು-ಕಾಶ್ಮೀರದಲ್ಲಿ ಪೆನ್ಸಿಲ್, ಸ್ಲೇಟ್ ವ್ಯಾಪಾರ ಮಾಡುತ್ತಿದ್ದ ಮಂಜೂರ್ ಅಹಮದ್ ಹೇಳಿದ್ದೇನು?
ಜಮ್ಮು ಮತ್ತು ಕಾಶ್ಮೀರದಲ್ಲಿ ಪೆನ್ಸಿಲ್ ಮತ್ತು ಸ್ಲೇಟ್ ವ್ಯಾಪಾರ ಮಾಡುವ ಮಂಜೂರ್ ಅಹ್ಮದ್ ಅವರೊಂದಿಗೆ ಪ್ರಧಾನಿ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರದ ಪೆನ್ಸಿಲ್ ಸ್ಲೇಟ್ ಉದ್ಯಮವು ಉತ್ತಮವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ನೀವು ಅದನ್ನು ಪ್ರಸ್ತಾಪಿಸಿದಾಗಿನಿಂದ, ಪೆನ್ಸಿಲ್ ವ್ಯಾಪಾರವು ಚೆನ್ನಾಗಿ ನಡೆಯುತ್ತಿದೆ. ಸದ್ಯ ಇಲ್ಲಿ 200 ಮಂದಿ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಇನ್ನೂ 200 ಜನರಿಗೆ ಉದ್ಯೋಗ ನೀಡಲಾಗುವುದು ಎಂದರು.
ಮಣಿಪುರದ ಕಮಲದ ನಾರುಗಳಿಂದ ಬಟ್ಟೆ ತಯಾರಿಸಿದ ಶಾಂತಿ ದೇವಿ ಹೇಳಿದ್ದೇನು?
ಇದೇ ವೇಳೆ ತಮಿಳುನಾಡು ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಹಿಳೆಯರು ಇಲ್ಲಿನ ನದಿಗೆ ಮರುಜೀವ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಕಮಲದ ನಾರುಗಳಿಂದ ಬಟ್ಟೆ ತಯಾರಿಸುವ ಮಣಿಪುರದ ವಿಜಯಶಾಂತಿ ದೇವಿ ಮಾತನಾಡಿದರು. ಪ್ರಧಾನಿ ಮೋದಿ ಅವರು ಮಣಿಪುರದಲ್ಲಿ ಅವರ ಬಗ್ಗೆ ಪ್ರಸ್ತಾಪಿಸಿದ್ದರು. ಇವರೊಂದಿಗೆ 30 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದು ವಿಜಯಶಾಂತಿ ದೇವಿ ಹೇಳಿದ್ದಾರೆ. ಶೀಘ್ರವೇ 100 ಮಂದಿ ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು ಎಂದಿದ್ದಾರೆ.
ಹಿಮಾಲಯವನ್ನು ಕಸ ಮುಕ್ತ ಮಾಡುವಲ್ಲಿ ನಿರತರಾಗಿರುವ ಪ್ರದೀಪ್ ಸಾಂಗ್ವಾನ್ ಹೇಳಿದ್ದೇನು?
ಹಿಲ್ಲಿಂಗ್ ಹಿಮಾಲಯ ಅಭಿಯಾನವನ್ನು ನಡೆಸುತ್ತಿರುವ ಪ್ರದೀಪ್ ಸಾಂಗ್ವಾನ್, ಅವರ ಅಭಿಯಾನವು ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು. ಮೊದಲಿಗೆ ಅವರು ತುಂಬಾ ಹೆದರುತ್ತಿದ್ದರು ಆದರೆ ನಂತರ ಅವರಿಗೆ ಬೆಂಬಲ ಸಿಕ್ಕಿತು, 2020 ರಲ್ಲಿ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸುವ ಮೊದಲು ಸಾಕಷ್ಟು ಸಮಸ್ಯೆ ಇತ್ತು. ಆದರೆ ಇದಾದ ನಂತರ ಜನರ ಬೆಂಬಲ ಸಿಕ್ಕಿತು ಮತ್ತು ಜನ ಸೇರುತ್ತಲೇ ಇದ್ದಾರೆ. ಒಂದು ವರ್ಷದಲ್ಲಿ ಮಾಡಿದ ಕೆಲಸ ಈಗ ಒಂದು ದಿನದಲ್ಲಿ ಆಗುತ್ತಿದೆ. ಪ್ರದೀಪ್ ಸಾಂಗ್ವಾನ್ ಪರ್ವತಗಳನ್ನು ಕಸ ಮುಕ್ತ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಪ್ರವಾಸೋದ್ಯಮ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಇಂದು ದೇಶದಲ್ಲಿ ಪ್ರವಾಸೋದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನಮ್ಮ ಪ್ರಾಕೃತಿಕ ಸಂಪತ್ತೇ ಇರಲಿ, ನದಿಗಳಿರಲಿ, ಪರ್ವತಗಳಿರಲಿ, ಕೊಳಗಳಿರಲಿ ಅಥವಾ ಯಾತ್ರಾಸ್ಥಳಗಳಿರಲಿ, ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರಧಾನಿ ಮೋದಿಯವರ ಪ್ರಕಾರ, ಪ್ರವಾಸೋದ್ಯಮದಲ್ಲಿ ಸ್ವಚ್ಛತೆಯ ಜೊತೆಗೆ, ನಾವು ಅನೇಕ ಬಾರಿ ಇನ್ಕ್ರೆಡಿಬಲ್ ಇಂಡಿಯಾ ಮೂವ್ಮೆಂಟ್ ಬಗ್ಗೆ ಚರ್ಚಿಸಿದ್ದೇವೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನ ಕೆಲವು ಕ್ಷಣಗಳನ್ನು ನೆನೆದ ಪ್ರಧಾನಿ ಮೋದಿ
ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಜನತೆಯೊಂದಿಗೆ ಮಾತನಾಡಲು, ಅವರ ಸಮಸ್ಯೆಗಳನ್ನು ಆಲಿಸಲು ಸಾಧ್ಯವಾಗುತ್ತಿತ್ತು, ಏಕಾಏಕಿ ಪ್ರಧಾನಿಯಾಗಿ ದೆಹಲಿಗೆ ಬಂದ ಬಳಿಕ ಏನೋ ಖಾಲಿ ಖಾಲಿ ರೀತಿ ಭಾಸವಾಗುತ್ತಿತ್ತು, ಪ್ರೋಟೋಕಾಲ್ನಿಂದಾಗಿ ಜನರ ಮಧ್ಯೆ ತೆರಳಿ ಕಷ್ಟಗಳನ್ನು ಆಲಿಸುವುದು ಸಾಧ್ಯವಿಲ್ಲ, ಆಗ ಈ ಮನ್ ಕೀ ಬಾತ್ ಶುರು ಮಾಡುವ ಬಗ್ಗೆ ಆಲೋಚನೆ ಬಂದಿತ್ತು, ಈಗ ದೇಶಾದ್ಯಂತ ಇರುವ ಜನರನ್ನು ತಲುಪಲು ಸಾಧ್ಯವಾಗಿದೆ ಈ ಕುರಿತು ಹೆಮ್ಮೆ ಇದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:53 am, Sun, 30 April 23