ಪ್ರಧಾನಿ ನರೇಂದ್ರ ಮೋದಿ(Narendra Modi) ಯವರು ನಡೆಸಿಕೊಡುವ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್(Mann Ki Baat)ನ 100ನೇ ಸಂಚಿಕೆ ಪ್ರಸಾರಕ್ಕೂ ಮುನ್ನ ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 100ನೇ ಸಂಚಿಕೆ ಭಾನುವಾರ (ಏಪ್ರಿಲ್ 30) ಪ್ರಸಾರವಾಗಲಿದೆ. ಈ ಸಂದರ್ಭವನ್ನು ಐತಿಹಾಸಿಕವಾಗಿಸಲು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ.
100 ಸಂಚಿಕೆಗಳನ್ನು ತಲುಪುವ ಪಯಣ ಅತ್ಯಂತ ವಿಶೇಷ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮವನ್ನು ಆಲಿಸುವಂತೆ ಪ್ರಧಾನಿ ಟ್ವೀಟ್ ಮಾಡುವ ಮೂಲಕ ಜನತೆಗೆ ಮನವಿ ಮಾಡಿದ್ದಾರೆ. ಬಿಜೆಪಿಯ ಇತರ ನಾಯಕರು ಕೂಡ ಕಾರ್ಯಕ್ರಮದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ.
ಮತ್ತಷ್ಟು ಓದಿ: Mann Ki Baat Conclave: ಮನ್ ಕೀ ಬಾತ್ ಸಮಾವೇಶದಲ್ಲಿ ವಿಶೇಷ ಅತಿಥಿಯಾಗಿ ಬಂದಿದ್ದ ಮಹಿಳೆಗೆ ವೇದಿಕೆಯಲ್ಲೇ ಕಾಣಿಸಿಕೊಂಡಿತ್ತು ಹೆರಿಗೆ ನೋವು
ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಕೂಡ ಟ್ವೀಟ್ ಮಾಡಿದ್ದು, ಈ ಕಾರ್ಯಕ್ರಮವು ಸಮೂಹ ಸಂವಹನ ಜಗತ್ತಿನಲ್ಲಿ ಒಂದು ಮೈಲಿಗಲ್ಲಾಗಿದೆ. ಈ ಕಾರ್ಯಕ್ರಮದ ಮೂಲಕ ದೇಶವಾಸಿಗಳೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸುವ ಮೂಲಕ ಮೋದಿ ಅವರಿಗೆ ಹಲವು ವಿಷಯಗಳ ಬಗ್ಗೆ ಅರಿವು ಮೂಡಿಸಿದ್ದಲ್ಲದೆ, ಅವರಿಗೆ ಸ್ಫೂರ್ತಿಯನ್ನೂ ನೀಡಿದ್ದಾರೆ.
Do tune in at 11 AM for #MannKiBaat100. This has been a truly special journey, in which we have celebrated the collective spirit of the people of India and highlighted inspiring life journeys. pic.twitter.com/FL0vCy9P15
— Narendra Modi (@narendramodi) April 30, 2023
ಸ್ವಚ್ಛತೆ, ಕೋವಿಡ್ ಯೋಧರನ್ನು ಉತ್ತೇಜಿಸುವುದು, ಬೇಟಿ ಬಚಾವೋ-ಬೇಟಿ ಪಢಾವೋ, ಮೇಕ್ ಇನ್ ಇಂಡಿಯಾ, ಅಥವಾ ಜಲ ಸಂರಕ್ಷಣೆಯ ವಿಷಯವಾಗಿರಲಿ, ಮೋದಿಯವರು ಸಾಮಾನ್ಯರ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಿದವರು. ಅವರು ತಮ್ಮ ಅಭಿಪ್ರಾಯವನ್ನು ಬಹುತೇಕ ಎಲ್ಲಾ ಅಂಶಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಮಂಡಿಸಿದ್ದಾರೆ.
ನಾನು ಬಿಜೆಪಿ ರಾಷ್ಟ್ರೀಯ ಕಚೇರಿಯಲ್ಲಿ ಮನ್ ಕೀ ಬಾತ್ ಕಾರ್ಯಕ್ರಮದ ನೂರನೇ ಸಂಚಿಕೆಯನ್ನು ಕೇಳಲು ಹಾಜರಾಗುತ್ತೇನೆ. ನರೇಂದ್ರ ಮೋದಿಯವರ ಈ ಕಾರ್ಯಕ್ರಮವು ಯಶಸ್ಸಿನ ಹೊಸ ದಾಖಲೆಗಳನ್ನು ಸ್ಥಾಪಿಸಲಿ, ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ಬರೆದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ