ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ನ (Mann Ki Baat) 100ನೇ ಆವೃತ್ತಿಗಾಗಿ ವಿಶೇಷ ವಿನ್ಯಾಸದ ಲೊಗೊ ಹಾಗೂ ಜಿಂಗಲ್ಗಳನ್ನು ಆಕಾಶವಾಣಿ (All India Radio – AIR) ಸಾರ್ವಜನಿಕರಿಂದ ಆಹ್ವಾನಿಸಿದೆ. ಮನ್ ಕಿ ಬಾತ್ನ 97ನೇ ಆವೃತ್ತಿ ಜ 29ರಂದು ನಡೆಯಲಿದೆ. 100ನೇ ಆವೃತ್ತಿಯು ಏಪ್ರಿಲ್ ತಿಂಗಳ ಕೊನೆಯ ಭಾನುವಾರ (ಏ 30) ನಡೆಯಲಿದೆ. ಮನ್ ಕಿ ಬಾತ್ ಮೂಲಕ ಮೋದಿ ಅವರು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದು, ಕಾರ್ಯಕ್ರಮವೂ ಸಂಚಿಕೆಯಿಂದ ಸಂಚಿಕೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.
ಲೋಗೊ ಕಳಿಸಿ: ಬಹುಮಾನ ಗೆಲ್ಲಿ
ಭಾರತ ಸರ್ಕಾರದ mygov.in ಜಾಲತಾಣದಲ್ಲಿ ಲೋಗೊ ಮತ್ತು ಜಿಂಗಲ್ಗೆ ಸಂಬಂಧಿಸಿದ ತಾಂತ್ರಿಕ ವಿವರಗಳನ್ನು ನೀಡಲಾಗಿದೆ. ಲೊಗೊಗಳನ್ನು JPEG/ JPG/ PNG/ SVG ಫಾರ್ಮಾಟ್ಗಳಲ್ಲಿ ಅಪ್ಲೋಡ್ ಮಾಡಬಹುದು. ವರ್ಣಗಳಲ್ಲಿ ವಿನ್ಯಾಸ ಮಾಡಬೇಕು. 5X5 ಸೆಂಮೀಯಿಂದ, 60X60 ಸೆಂಮೀ ಅಳತೆಯಲ್ಲಿ, ಪೋರ್ಟೇಟ್ (ಉದ್ದ) ಅಥವಾ ಲ್ಯಾಂಡ್ಸ್ಕೇಪ್ (ಅಡ್ಡ) ಆಕಾರದಲ್ಲಿ ಲೋಗೊಗಳನ್ನು ವಿನ್ಯಾಸ ಮಾಡಬಹುದಾಗಿದೆ. ಇವು ವೆಬ್ಸೈಟ್, ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವಂತಿರಬೇಕು. ಪತ್ರಿಕಾ ಹೇಳಿಕೆಗಳು, ಲೇಖನ ಸಾಮಗ್ರಿಗಳು, ಸ್ಮರಣಿಕೆಗಳು ಸೇರಿದಂತೆ ಇತರ ಪ್ರಚಾರ ಸಾಮಗ್ರಿಗಳಲ್ಲಿ ಸುಲಭವಾಗಿ ಬಳಸುವ ರೀತಿಯಲ್ಲಿರಬೇಕು. ಲೊಗೊಗಳು ಕನಿಷ್ಠ 300 ಡಿಪಿಐ ರೆಸಲ್ಯೂಶನ್ ಹೊಂದಿರಬೇಕು ಎಂದು ಭಾರತ ಸರ್ಕಾರವು ವಿವರಗಳನ್ನು ನೀಡಿದೆ.
ವಿನ್ಯಾಸ ಸಿದ್ಧವಾದ ಲೊಗೊಗಳನ್ನು ಸಲ್ಲಿಸಲು ಫೆ 1 ಕೊನೆಯ ದಿನವಾಗಿದ್ದು, ವಿಜೇತರಿಗೆ ₹ 1 ಲಕ್ಷ ಬಹುಮಾನ ಸಿಗಲಿದೆ. ಹೆಚ್ಚಿನ ಮಾಹಿತಿ ಮತ್ತು ನಿಯಮಗಳ ದಾಖಲೆಗಾಗಿ ಇಲ್ಲಿ ಕ್ಲಿಕ್ ಮಾಡಿ.
To mark the 100th episode of PM @narendramodi‘s #MannKiBaat, All India Radio is seeking a logo design.
The logo should have an attractive design depicting the ‘100th episode of Mann Ki Baat’.
Details: https://t.co/lHJgX7AH30@ianuragthakur @MIB_India @prasarbharati pic.twitter.com/1YX4842jkG
— ALL INDIA RADIO आकाशवाणी (@AkashvaniAIR) January 28, 2023
ಸಂಗೀತ ಪ್ರಿಯರೇ; ಜಿಂಗಲ್ ಬಗ್ಗೆ ಯೋಚಿಸಿ
ಮನ್ ಕಿ ಬಾತ್ನ ಪ್ರಾಮುಖ್ಯತೆ ಬಿಂಬಿಸುವ ಜಿಂಗಲ್ಗಳನ್ನು ಭಾರತ ಸರ್ಕಾರ ಆಹ್ವಾನಿಸಿದೆ. ಸದಾ ನೆನಪಿನಲ್ಲಿ ಉಳಿಯುವ, ಮಾಧುರ್ಯಭರಿತ, ಕೇಳಿದವರ ಹೃದಯಗೆಲ್ಲುವ ಜಿಂಗಲ್ಗಳನ್ನು ನೀಡಬೇಕು ಎಂದು mygov.in ವೆಬ್ಸೈಟ್ ಮೂಲಕ ಮನವಿ ಮಾಡಲಾಗಿದೆ.
ಜಿಂಗಲ್ಗಳಿಗೆ 25ರಿಂದ 30 ಪದಗಳ ಸ್ಕ್ರಿಪ್ಟ್ ಇರಲೇಬೇಕು. ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವ ಪದಗಳನ್ನು ಬಳಸಬೇಕು. ಸೌಂಡ್ಕ್ಲೌಡ್, ಯುಟ್ಯೂಬ್, ಗೂಗಲ್ ಡ್ರೈವ್, ಡ್ರಾಪ್ಬಾಕ್ಸ್ನಂಥ ಯಾವುದೇ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಆಡಿಯೊ ಫೈಲ್ ಅಪ್ಲೋಡ್ ಮಾಡಿ ಅದರ ಲಿಂಕ್ ಶೇರ್ ಮಾಡಬೇಕು. ಅತ್ಯುತ್ತಮ ಜಿಂಗಲ್ಗೆ ₹ 11,000 ಬಹುಮಾನ ಸಿಗಲಿದೆ. ಜಿಂಗಲ್ ಕಳಿಸಲು ಕೊನೆಯ ದಿನ ಫೆ 28. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.‘
ಇದನ್ನೂ ಓದಿ: ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿದ ದೊಡ್ಡ ಅವಕಾಶ: ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ
ಮನ್ ಕಿ ಬಾತ್ ಕುರಿತು ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Sat, 28 January 23