ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿದ ದೊಡ್ಡ ಅವಕಾಶ: ಮನ್ ಕಿ ಬಾತ್​​ನಲ್ಲಿ ಪ್ರಧಾನಿ ಮೋದಿ

Mann Ki Baat ದೇಶದಾದ್ಯಂತದ ಜನರು ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿರುವುದಕ್ಕೆ ಎಷ್ಟು ಹೆಮ್ಮೆ ಇದೆ ಎಂದು ನನಗೆ ಪತ್ರ ಬರೆದಿದ್ದಾರೆ. ಅಮೃತ್ ಕಾಲದಲ್ಲಿ ಭಾರತವು ಈ ಜವಾಬ್ದಾರಿಯನ್ನು ಪಡೆದುಕೊಂಡಿದೆ ಎಂದಿದ್ದಾರೆ ಮೋದಿ

ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿದ ದೊಡ್ಡ ಅವಕಾಶ: ಮನ್ ಕಿ ಬಾತ್​​ನಲ್ಲಿ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 27, 2022 | 1:46 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್‘  (Mann Ki Baat) 95 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಮೃತ್ ಕಾಲದಲ್ಲಿ ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು (G20 presidency) ಪಡೆದುಕೊಂಡಿದೆ. ಇದು ನಮಗೆ ಒಂದು ಅವಕಾಶವಾಗಿದೆ. ದೇಶದಾದ್ಯಂತದ ಜನರು ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿರುವುದಕ್ಕೆ ಎಷ್ಟು ಹೆಮ್ಮೆ ಇದೆ ಎಂದು ನನಗೆ ಪತ್ರ ಬರೆದಿದ್ದಾರೆ. ಅಮೃತ್ ಕಾಲದಲ್ಲಿ ಭಾರತವು ಈ ಜವಾಬ್ದಾರಿಯನ್ನು ಪಡೆದುಕೊಂಡಿದೆ ಎಂದಿದ್ದಾರೆ ಮೋದಿ. ಜಿ 20 ಅಧ್ಯಕ್ಷ ಸ್ಥಾನ ನಮಗೆ ಒಂದು ಅವಕಾಶ. ನಾವು ಜಾಗತಿಕ ಒಳಿತಿನತ್ತ ಗಮನಹರಿಸಬೇಕು, ಅದು ಶಾಂತಿ, ಏಕತೆ ಅಥವಾ ಸುಸ್ಥಿರ ಅಭಿವೃದ್ಧಿಯೇ ಆಗಿರಲಿ ಈ ವಿಷಯಗಳಿಗೆ ಸಂಬಂಧಿಸಿದ ಸವಾಲುಗಳಿಗೆ ಭಾರತ ಪರಿಹಾರವನ್ನು ಹೊಂದಿದೆ. ನಾವು ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಥೀಮ್ ಅನ್ನು ನೀಡಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

ಇಸ್ರೋದ ಸಾಧನೆಗಳನ್ನು ಶ್ಲಾಘಿಸಿದ ಮೋದಿ, ರಾಕೆಟ್ ‘ವಿಕ್ರಮ್ ಎಸ್’ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದಾಗ ರಾಷ್ಟ್ರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದೆ ಎಂದು ಹೇಳಿದರು. ಇದನ್ನು ಖಾಸಗಿ ವಲಯವು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಇದುಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು.

ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಯಶಸ್ಸನ್ನು ತನ್ನ ನೆರೆಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುತ್ತಿದೆ. ನಿನ್ನೆಯಷ್ಟೇ ಭಾರತ ಉಪಗ್ರಹವನ್ನು ಉಡಾವಣೆ ಮಾಡಿತು, ಇದನ್ನು ಭಾರತ ಮತ್ತು ಭೂತಾನ್ ಜಂಟಿಯಾಗಿ ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು. ದೊಡ್ಡ ವಿಷಯಗಳನ್ನು ಯೋಚಿಸುವುದು ಮತ್ತು ಅದನ್ನು ಸಾಧಿಸುವುದಕ್ಕೆ ಭಾರತದ ಯುವಕರು ಮತ್ತು ದೇಶದ ಯುವಜನರಿಗೆ ಹೆಚ್ಚಿನ ಅವಕಾಶವಿದೆ, ಅದಕ್ಕೆ ಮಿತಿಯಿಲ್ಲ ಎಂದಿದ್ದಾರೆ ಮೋದಿ.

ವಿಕ್ರಮ್-ಎಸ್, ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್. ಇದನ್ನು ನವೆಂಬರ್ 18, 2022 ರಂದು ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಲಾಂಚ್‌ಪ್ಯಾಡ್‌ನಿಂದ ಉಡಾವಣೆ ಮಾಡಲಾಗಿದೆ.

ವೈಷ್ಣವ ಜನತೋ ಹಾಡು ಟ್ವೀಟ್ ಮಾಡಿದ ಮೋದಿ

‘ಮನ್ ಕಿ ಬಾತ್’ ಭಾಷಣದಲ್ಲಿ ಮೋದಿ, ಮಹಾತ್ಮ ಗಾಂಧಿಯವರ ನೆಚ್ಚಿನ ಭಜನೆಯಾದ ‘ವೈಷ್ಣವ ಜನತೋ’ ಹಾಡನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಹಂಚಿಕೊಂಡು ಆವೃತ್ತಿಯನ್ನು ಗ್ರೀಕ್ ಗಾಯಕ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಹಾಡಿದ್ದು, ಗ್ರೀಕ್ ಜಾನಪದ ವಾದ್ಯಗಳಾದ ಕ್ಲಾರಿನೋ ಮತ್ತು ಕ್ರೆಟನ್ ಲೈರಾ ಬಳಸಿದ್ದಾರೆ.

ನೀವೆಲ್ಲರೂ ಈ ಹಾಡನ್ನು ಎಂದಾದರೂ ಕೇಳಿರಬೇಕು. ಅಂದಹಾಗೆ ಇದು ಬಾಪು ಅವರ ನೆಚ್ಚಿನ ಹಾಡು.ಇದನ್ನು ಹಾಡಿರುವ ಗಾಯಕರು ಗ್ರೀಸ್‌ನವರು ಎಂದು ನಾನು ನಿಮಗೆ ಹೇಳಿದರೆ, ನೀವು ಖಂಡಿತವಾಗಿಯೂ ಆಶ್ಚರ್ಯಚಕಿತರಾಗುತ್ತೀರಿ! ನಿಮಗೂ ಹೆಮ್ಮೆಯಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಹರಿಜನರಿಗಾಗಿ ಇರುವ ಈ ಹಾಡನ್ನು ಗಾಂಧಿ ತಮ್ಮ ಎಲ್ಲಾ ಪ್ರಾರ್ಥನಾ ಸಭೆಗಳಲ್ಲಿ ನುಡಿಸಿದರು. ‘ವೈಷ್ಣವ ಜನತೋ ಹಾಡನ್ನು ಗಾಂಧಿ ಹುಟ್ಟುವ ಸುಮಾರು 400 ವರ್ಷಗಳ ಹಿಂದೆ ಗುಜರಾತಿ ಕವಿ ನರಸಿಂಹ ಮೆಹ್ತಾ ಅವರು ಬರೆದಿದ್ದಾರೆ.

ತೆಲಂಗಾಣ ನೇಕಾರರ ಉಡುಗೊರೆಯನ್ನು ಶ್ಲಾಘಿಸಿದ ಮೋದಿ

ಮುಂದಿನ ವರ್ಷ ಭಾರತ ಆಯೋಜಿಸಲಿರುವ ಜಿ 20 ಶೃಂಗಸಭೆಗಾಗಿ ತಾವೇ ನೆಯ್ದ ಲೋಗೋವನ್ನು ಉಡುಗೊರೆಯಾಗಿ ನೀಡಿದ ತೆಲಂಗಾಣದ ನೇಕಾರರನ್ನು ಮೋದಿ ಶ್ಲಾಘಿಸಿದರು. ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯವರಾದ ವೆಲ್ದಿ ಹರಿಪ್ರಸಾದ್ ಗಾರು ಅವರ ಹೆಸರು ಉಲ್ಲೇಖಿಸಿದ ಪ್ರಧಾನಿ, ಅವರಿಗೆ ಕೌಶಲ್ಯದ ಪಾಂಡಿತ್ಯವಿದೆ. ಈ ಅದ್ಭುತ ಉಡುಗೊರೆಯನ್ನು ನೋಡಿ ಆಶ್ಚರ್ಯವಾಯಿತು ಎಂದಿದ್ದಾರೆ ಮೋದಿ.

ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ನೇಕಾರ ವೆಲ್ದಿ ಹರಿಪ್ರಸಾದ್ ಅವರು ನನಗೆ ಜಿ20ಗಾಗಿ ಸ್ವತಃ ನೇಯ್ದ ಲೋಗೋವನ್ನು ಕಳುಹಿಸಿದ್ದಾರೆ. ಈ ಅದ್ಭುತ ಉಡುಗೊರೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅವರು ಎಲ್ಲರನ್ನು ಆಕರ್ಷಿಸುವಷ್ಟು ಪಾಂಡಿತ್ಯವನ್ನು ಹೊಂದಿದ್ದಾರೆ. ಅವರು ನನಗೆ ಪತ್ರವನ್ನೂ ಕಳುಹಿಸಿದ್ದಾರೆ. ಮುಂದಿನ ವರ್ಷ G20 ಶೃಂಗಸಭೆಯನ್ನು ಆಯೋಜಿಸುವುದು ಭಾರತಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಯನ್ನು ಆಚರಿಸಲು, ಅವರು ಈ ಲೋಗೋವನ್ನು ಮಾಡಿದರು. ಅವರು ಈ ಪ್ರತಿಭೆಯನ್ನು ಅವರು ಅವರ ಅಪ್ಪನಿಂದ ಪಡೆದಿದ್ದಾರೆ ಎಂದಿದ್ದಾರೆ ಮೋದಿ.

Published On - 12:52 pm, Sun, 27 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ