Mann Ki Baat: ಜೇನುಕೃಷಿಯನ್ನು ಆದಾಯದ ಮಾರ್ಗವಾಗಿ ರೈತರು ಸದುಪಯೋಗಪಡಿಸಿಕೊಳ್ಳಬೇಕು; ಮನ್ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಕರೆ

|

Updated on: Mar 28, 2021 | 11:52 AM

ಕೆಲ ದಿನಗಳಲ್ಲೇ ಆಚರಿಸಿಲ್ಪಡುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಶುಭಕೋರಿದರು. ಅಲ್ಲದೇ ಅಂಬೇಡ್ಕರ್​​ ಜೀವನಾದರ್ಶಗಳನ್ನು ಅಳವಡಿಸಿಕೊಂಡು ಅವರ ಜನ್ಮದಿನ ಆಚರಿಸೋಣ ಎಂದು ಕರೆ ನೀಡಿದರು.

Mann Ki Baat: ಜೇನುಕೃಷಿಯನ್ನು ಆದಾಯದ ಮಾರ್ಗವಾಗಿ ರೈತರು ಸದುಪಯೋಗಪಡಿಸಿಕೊಳ್ಳಬೇಕು; ಮನ್ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಕರೆ
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ:  ಭಾರತದ ಜೇನು ಇಡೀ ವಿಶ್ವಕ್ಕೆ ಸಿಹಿ ಉಣಿಸುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ಉತ್ಪಾದನೆಯಾಗುವ ಜೇನಿಗೆ ವಿದೇಶಗಳಲ್ಲಿ ಉತ್ತಮ ಹೆಸರು  ಮತ್ತು ಬೆಲೆಯಿದೆ. ಜೇನುಕೃಷಿಯ ಮೂಲಕ ಆತ್ಮನಿರ್ಭರ ಭಾರತವನ್ನು ಯಶಸ್ವಿಗೊಳಿಸಬಹುದು. ಈ ಅವಕಾಶವನ್ನು ದೇಶದ ಕೃಷಿ ಸಮುದಾಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 75 ನೇ ಮನ್ ಕಿ ಬಾತ್​ನಲ್ಲಿ ಕರೆ ನೀಡಿದರು.

ಆಧುನಿಕತೆ ಎಂಬುದು ಎಲ್ಲ ಕ್ಷೇತ್ರಗಳಲ್ಲೂ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಈ ಕಾಲದಲ್ಲಿ ಕೆಲಸ ನಿರ್ವಹಿಸುವ ಕಷ್ಟಕರವಾಗಿ ಪರಿಣಮಿಸಲಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಯಾವುದೇ ಕೆಲಸವನ್ನಾದರೂ ಸುಲಭವಾಗಿ ನಿರ್ವಹಿಸಬಹುದು ಎಂದರು. ದೇಶದ ಎಲ್ಲ ವಲಯಗಳ ಶ್ರಮಿಕರು ತಂತ್ರಜ್ಞಾನದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ತಿಳಿಸಿದರು.  ಇತ್ತೀಚಿಗೆ ಸಾಧನೆ ಮಾಡಿದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಮತ್ತು ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರುಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.   BWF ಸ್ವಿಸ್ ಓಪನ್ ಸೂಪರ್ 30 ಸರಣಿಯಲ್ಲಿ ಬೆಳ್ಳಿಪದಕ ಗೆದ್ದ ಪಿ.ವಿ.ಸಿಂಧು , ಕ್ರಿಕೆಟರ್ ಮಿಥಾಲಿ ರಾಜ್ ಅವರ ಸಾಧನೆಯನ್ನು  ಜ್ಞಾಪಿಸಿಕೊಂಡು ಭಾರತೀಯ ನಾರಿಶಕ್ತಿ ಅಗಾಧವಾದುದುದು ಎಂದು ಶ್ಲಾಘಿಸಿದರು. ಭಾರತೀಯ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನೆಲೆಗೆ ಬರಬೇಕು. ಜಗತ್ತಿನ ಮುಂದೆ ಭಾರತವನ್ನು ತಲೆ ಎತ್ತಿ ನಿಲ್ಲುವಂತೆ ಮಾಡುವ ಶಕ್ತಿ ಭಾರತದ ಮಹಿಳೆಯರಿಗೆ ಇಂದು ಅವರು ವಿವರಿಸಿದರು.

2020ರ ಮಾರ್ಚ್​ನಲ್ಲಿ ಜನತಾ ಕರ್ಫ್ಯೂ ಎಂಬ ಪದವನ್ನು ಮೊದಲ ಬಾರಿಗೆ ನಾವು ಕೇಳಿದೆವು. ಅದು ಇಡೀ ಜಗತ್ತಿನ ಮುಂದೆ ಶಿಸ್ತಿನ ಅತ್ಯುತ್ತಮ ಮಾದರಿಯಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 75 ನೇ ಮನ್ ಕಿ ಬಾತ್​ನಲ್ಲಿ  ಜನತಾ ಕರ್ಫ್ಯೂವಿನ ಕುರಿತು ವಿವರಿಸಿದರು.

ಹಕ್ಕಿಗಳ ಮಹತ್ವದ ಕುರಿತು ವಿವರಸಿದ ಅವರು, ಮೊದಲು ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದವು. ಆದರೆ, ಇತ್ತೀಚಿಗೆ ಹಕ್ಕಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಹಕ್ಕಿಗಳು ನಮ್ಮ ಪರಿಸರದ ಪಾವಿತ್ರತೆಯ ಸಂಕೇತ. ಅವುಗಳನ್ನು ಸಂರಕ್ಷಿಸಬೇಕು ಎಂದರು.

ಹೋಳಿ ಮತ್ತು ಈಸ್ಟರ್ ಹಬ್ಬದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ, ಕೆಲ ದಿನಗಳಲ್ಲೇ ಆಚರಿಸಿಲ್ಪಡುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಶುಭಕೋರಿದರು. ಅಲ್ಲದೇ ಅಂಬೇಡ್ಕರ್​​ ಜೀವನಾದರ್ಶಗಳನ್ನು ಅಳವಡಿಸಿಕೊಂಡು ಅವರ ಜನ್ಮದಿನ ಆಚರಿಸೋಣ ಎಂದು ಕರೆ ನೀಡಿದರು.

ಇದನ್ನೂ ಓದಿ: 100 ವರ್ಷಗಳ ಹಿಂದೆ ಕಳುವಾಗಿದ್ದ ಅನ್ನಪೂರ್ಣಾ ವಿಗ್ರಹ ಮರಳಿ ಭಾರತಕ್ಕೆ: ಮನ್​ ಕಿ ಬಾತ್​ನಲ್ಲಿ ಮೋದಿ ಖುಷಿ

Mann Ki Baat: ಜಲ ಸಂರಕ್ಷಣೆಯ ಮಂತ್ರ ಜಪಿಸಿದ ಪ್ರಧಾನಿ; ಸದ್ಯದಲ್ಲೇ Catch the Rain ಅಭಿಯಾನ ಆರಂಭ