ದೆಹಲಿಯಿಂದ ವಾರಾಣಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಅವಾಂತರ ಸೃಷ್ಟಿಸಿದ ಪ್ರಯಾಣಿಕ; ಸಹಪ್ರಯಾಣಿಕರು, ಸಿಬ್ಬಂದಿ ಕಂಗಾಲು
ಆ ಪ್ರಯಾಣಿಕನಿಗೆ ಮಾನಸಿಕವಾಗಿ ಏನೋ ಸಮಸ್ಯೆ ಇದ್ದಂತೆ ತೋರುತ್ತಿತ್ತು. ಆತ ಮೊದಲು ಮಾಡುವುದು ನೋಡಿ, ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದುಕೊಳ್ಳಲಾಗಿತ್ತು.
ದೆಹಲಿ: ವಿಮಾನದಲ್ಲಿ ಹಲವು ವಿಚಿತ್ರ ಘಟನೆಗಳು ನಡೆಯುತ್ತವೆ. ಕೆಲವು ಪ್ರಯಾಣಿಕರಂತೂ ತಮ್ಮ ವಿಲಕ್ಷಣ ವರ್ತನೆಗಳಿಂದ ಈಗಾಗಲೇ ಸುದ್ದಿ ಮಾಡಿದ್ದಾರೆ. ಹಾಗೇ ಈಗೊಬ್ಬ ಪ್ರಯಾಣಿಕರ ಆಕಾಶದೆತ್ತರ ವಿಮಾನ ಹಾರಾಡುತ್ತಿದ್ದಾಗ ಅವಘಡವೊಂದನ್ನು ಸೃಷ್ಟಿಸಿ ಸುದ್ದಿಯಾಗಿದ್ದಾರೆ. ಶನಿವಾರ ದೆಹಲಿಯಿಂದ ವಾರಾಣಸಿಗೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನದಲ್ಲಿ ಘಟನೆ ನಡೆದಿದ್ದು, ಪುಣ್ಯಕ್ಕೆ ಯಾವುದೇ ದೊಡ್ಡ ಅನಾಹುತ ಆಗಿಲ್ಲ.
ದೆಹಲಿಯಿಂದ ವಿಮಾನ (SG-2003) ಹೊರಟ ಕೆಲವು ಹೊತ್ತುಗಳ ಬಳಿಕ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಇನ್ನಿಲ್ಲದಂತೆ ಪ್ರಯತ್ನಿಸಿದ್ದಾನೆ. ಎಷ್ಟೇ ಹೇಳಿದರೂ ಹಿಂದೆ ಸರಿಯದೆ ಸಿಕ್ಕಾಪಟೆ ಆಕ್ರಮಣಕಾರಿ ಮನೋಭಾವದಲ್ಲಿ ಒಂದೇ ಸಮ ಬಾಗಿಲನ್ನು ಎಳೆದಿದ್ದಾನೆ. ನಂತರ ವಿಮಾನ ಸಿಬ್ಬಂದಿ ಆತನನ್ನು ಗಟ್ಟಿಯಾಗಿ ಹಿಡಿದುಕೊಂಡು, ತಡೆದಿದ್ದಾರೆ. ಇದರಿಂದಾಗಿ ಇಡೀ ವಿಮಾನದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಫ್ಲೈಟ್ ವಾರಾಣಸಿಗೆ ಹೋಗುವವರೆಗೂ ವಿಮಾನ ಸಿಬ್ಬಂದಿ ಆತನನ್ನು ಬಿಡಲಿಲ್ಲ. ಸಹ ಪ್ರಯಾಣಿಕರೂ ಕೂಡ ಆತನನ್ನು ನಿಯಂತ್ರಿಸಲು ಸಹಾಯ ಮಾಡಿದರು ಎಂದು ಸ್ಪೈಸ್ ಜೆಟ್ ತಿಳಿಸಿದೆ.
ಆ ಪ್ರಯಾಣಿಕನಿಗೆ ಮಾನಸಿಕವಾಗಿ ಏನೋ ಸಮಸ್ಯೆ ಇದ್ದಂತೆ ತೋರುತ್ತಿತ್ತು. ಆತ ಮೊದಲು ಮಾಡುವುದು ನೋಡಿ, ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದುಕೊಳ್ಳಲಾಗಿತ್ತು. ಆದರೆ ಅವನನ್ನು ನಿಯಂತ್ರಣಕ್ಕೆ ತರುವ ಮೂಲಕ ವಾರಾಣಸಿಯಲ್ಲಿ ವಿಮಾನ ಲ್ಯಾಂಡ್ ಮಾಡಲಾಯಿತು. ಏರ್ಪೋರ್ಟ್ನಲ್ಲಿ ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದೂ ತಿಳಿಸಿದೆ.
ಇದನ್ನೂ ಓದಿ: Filmfare Awards: 66ನೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದು ಮಿಂಚುತ್ತಿರುವವರು ಯಾರೆಲ್ಲ? ಇಲ್ಲಿದೆ ಪೂರ್ಣ ಪಟ್ಟಿ
UPSC Recruitment 2021: ಯುಪಿಎಸ್ಸಿಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ