Filmfare Awards: 66ನೇ ಫಿಲ್ಮ್​ ಫೇರ್​ ಪ್ರಶಸ್ತಿ ಪಡೆದು ಮಿಂಚುತ್ತಿರುವವರು ಯಾರೆಲ್ಲ? ಇಲ್ಲಿದೆ ಪೂರ್ಣ ಪಟ್ಟಿ

Taapsee Pannu: ಚಿತ್ರರಂಗದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ‘ಫಿಲ್ಮ್​ ಫೇರ್​ ಅವಾರ್ಡ್ಸ್​​’ ಕೂಡ ಮುಂಚೂಣೆಯಲ್ಲಿದೆ. ಶನಿವಾರ (ಮಾ.27) 66ನೇ ಫಿಲ್ಮ್​ ಫೇರ್​ ಪ್ರಶಸ್ತಿ ಪ್ರಕಟವಾಗಿದ್ದು, ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ.

Filmfare Awards: 66ನೇ ಫಿಲ್ಮ್​ ಫೇರ್​ ಪ್ರಶಸ್ತಿ ಪಡೆದು ಮಿಂಚುತ್ತಿರುವವರು ಯಾರೆಲ್ಲ? ಇಲ್ಲಿದೆ ಪೂರ್ಣ ಪಟ್ಟಿ
66ನೇ ಫಿಲ್ಮ್​ ಫೇರ್​ ಅವಾರ್ಡ್ಸ್​
Follow us
ಮದನ್​ ಕುಮಾರ್​
|

Updated on:Mar 28, 2021 | 12:06 PM

66ನೇ ಫಿಲ್ಮ್​ ಫೇರ್​ ಅವಾರ್ಡ್ಸ್​ನಲ್ಲಿ ತಾಪ್ಸೀ ಪನ್ನು ನಟನೆಯ ತಪ್ಪಡ್​ ಸಿನಿಮಾ ಮಿಂಚುತ್ತಿದೆ. ಅತ್ಯುತ್ತಮ ನಟಿ (ತಾಪ್ಸೀ ಪನ್ನು), ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಥೆ ಸೇರಿದಂತೆ 6 ಪ್ರಶಸ್ತಿಗಳು ಈ ಸಿನಿಮಾದ ಪಾಲಾಗಿವೆ. ಮರಣೋತ್ತರವಾಗಿ ಇರ್ಫಾನ್​ ಖಾನ್​ ಅವರಿಗೆ 2021ನೇ ಸಾಲಿನ ಜೀವಮಾನ ಸಾಧಕ ಪ್ರಶಸ್ತಿ ಸಿಕ್ಕಿದೆ. ಅಲ್ಲದೆ, ‘ಅಂಗ್ರೇಜಿ ಮೀಡಿಯಂ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೊರೊನಾ ವೈರಸ್​ ಎರಡನೇ ಅಲೆಯ ಭೀತಿ ಕಾರಣಕ್ಕಾಗಿ ಈ ಬಾರಿ ಫಿಲ್ಮ್​ ಫೇರ್​ ಸಮಾರಂಭವನ್ನು ಸರಳವಾಗಿ ನೆರವೇರಿಸಲಾಯಿತು. 66ನೇ ಫಿಲ್ಮ್​ ಫೇರ್​ ಪ್ರಶಸ್ತಿಯ ಪೂರ್ಣ ಪಟ್ಟಿ ಇಲ್ಲಿದೆ:

ಅತ್ಯುತ್ತಮ ನಟಿ: ತಾಪ್ಸೀ ಪನ್ನು (ತಪ್ಪಡ್) ಅತ್ಯುತ್ತಮ ನಟ: ಇರ್ಫಾನ್​ ಖಾನ್​ (ಅಂಗ್ರೇಜಿ ಮೀಡಿಯಂ) ಅತ್ಯುತ್ತಮ ಸಿನಿಮಾ: ತಪ್ಪಡ್​ (ನಿರ್ದೇಶಕ- ಅನುಭವ್​ ಸಿನ್ಹಾ) ಅತ್ಯುತ್ತಮ ಪೋಷಕ ನಟ: ಸೈಫ್​ ಅಲಿ ಖಾನ್​ (ತಾನಾಜಿ) ಅತ್ಯುತ್ತಮ ಪೋಷಕ ನಟಿ: ಫಾರೂಖ್​ ಜಾಫರ್​ (ಗುಲಾಬೋ ಸಿತಾಬೋ) ಅತ್ಯುತ್ತಮ ಕಥೆ: ತಪ್ಪಡ್​ (ಅನುಭವ್​ ಸಿನ್ಹಾ)

ಅತ್ಯುತ್ತಮ ಚಿತ್ರಕತೆ: ರೊಹೆನಾ ಗೆರಾ (ಸರ್​) ಅತ್ಯುತ್ತಮ ಸಂಭಾಷಣೆ: ಜೂಹಿ ಚತುರ್ವೇದಿ (ಗುಲಾಬೋ ಸಿತಾಬೋ) ಅತ್ಯುತ್ತಮ ಚೊಚ್ಚಲ ನಿರ್ದೇಶನ: ರಾಜೇಶ್​ ಕೃಷ್ಣನ್​ (ಲೂಟ್​ಕೇಸ್​) ಅತ್ಯುತ್ತಮ ಹೊಸ ನಟಿ: ಆಲಯಾ ಎಫ್​ (ಜವಾನಿ ಜಾನೇಮನ್​) ಅತ್ಯುತ್ತಮ ಸಂಗೀತ: ಪ್ರೀತಮ್ (ಲೂಡೋ) ಅತ್ಯುತ್ತಮ ಸಾಹಿತ್ಯ: ಗುಲ್ಜಾರ್​ (ಚಪಾಕ್​)

ಅತ್ಯುತ್ತಮ ನಿರ್ದೇಶಕ: ಓಂ ರಾವುತ್​ (ತಾನಾಜಿ: ದಿ ಅನ್​ಸಂಗ್​ ವಾರಿಯರ್​) ಅತ್ಯುತ್ತಮ ಗಾಯಕ: ರಾಘವ್​ ಚೈತನ್ಯ (ಏಕ್​ ಟುಕ್ಡಾ ಧೂಪ್​- ತಪ್ಪಡ್​) ಅತ್ಯುತ್ತಮ ಗಾಯಕಿ: ಆಸೀಸ್ ಕೌರ್​ (ಮಲಂಗ್​) ಜೀವಮಾನ ಸಾಧಕ ಪ್ರಶಸ್ತಿ: ಇರ್ಫಾನ್​ ಖಾನ್​ ಅತ್ಯುತ್ತಮ ಸಾಹಸ ನಿರ್ದೇಶನ: ರಂಜಾನ್​ ಬುಲುತ್​, ಪಿ.ಆರ್​. ಯಾಧವ್​ (ತಾನಾಜಿ: ದಿ ಅನ್​ಸಂಗ್​ ವಾರಿಯರ್​)

ಅತ್ಯುತ್ತಮ ಹಿನ್ನಲೆ ಸಂಗೀತ: ಮಂಗೇಶ್​ ಉರ್ಮಿಳಾ ಧಾಕ್ಡೆ (ತಪ್ಪಡ್​) ಅತ್ಯುತ್ತಮ ಛಾಯಾಗ್ರಹಣ: ಅವಿಕ್​ ಮುಖ್ಯೋಪಧ್ಯಾಯ (ಗುಲಾಬೋ ಸಿತಾಬೋ) ಅತ್ಯುತ್ತಮ ನೃತ್ಯ ನಿರ್ದೇಶನ: ಫರ್ಹಾ ಖಾನ್​ (ದಿಲ್​ ಬೇಚಾರಾ) ಅತ್ಯುತ್ತಮ ವಸ್ತ್ರ ವಿನ್ಯಾಸ: ವೀರ ಕಪೂರ್​ (ಗುಲಾಬೋ ಸಿತಾಬೋ) ಅತ್ಯುತ್ತಮ ಸಂಕಲನ: ಯಶಾ ಪುಷ್ಪಾ ರಾಮ​ಚಂದನಿ (ತಪ್ಪಡ್​)

ಅತ್ಯುತ್ತಮ ನಿರ್ಮಾಣ ವಿನ್ಯಾಸ: ಮಾನಸಿ ಧ್ರುವ್​ ಮೆಹ್ತಾ (ಗುಲಾಬೋ ಸಿತಾಬೋ) ಅತ್ಯುತ್ತಮ ವಿಎಫ್​​ಎಕ್ಸ್​: ಪ್ರಸಾದ್​ ಸುತಾರ್ (ತಾನಾಜಿ: ದಿ ಅನ್​ಸಂಗ್​ ವಾರಿಯರ್​) ವಿಮರ್ಶಕರ ಆಯ್ಕೆ ವಿಭಾಗದಲ್ಲಿ ಅಮಿತಾಭ್​ ಬಚ್ಚನ್​ ಅತ್ಯುತ್ತಮ ನಟ (ಗುಲಾಬೋ ಸಿತಾಬೋ) ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಸರ್’​ ಸಿನಿಮಾದಲ್ಲಿನ ನಟನೆಗಾಗಿ ತಿಲೋತ್ತಮಾ ಅವರು ಅತ್ಯುತ್ತಮ ನಟಿ ಎನಿಸಿಕೊಂಡಿದ್ದಾರೆ. ವಿಮರ್ಶಕರ ಆಯ್ಕೆಯ ಅತ್ಯುತ್ತಮ ಸಿನಿಮಾ ಮನ್ನಣೆಗೆ ‘ಈಬ್​ ಅಲೆ ಊ’ ಚಿತ್ರ ಪಾತ್ರವಾಗಿದೆ.

ಇದನ್ನೂ ಓದಿ: Taapsee Pannu: 66ನೇ ಫಿಲ್ಮ್​ ಫೇರ್​ ಪ್ರಶಸ್ತಿ; ಇರ್ಫಾನ್​ ಖಾನ್-ತಾಪ್ಸಿ ಪನ್ನು​ ಅತ್ಯುತ್ತಮ ನಟ-ನಟಿ!

National Film Awards 2019: ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಒಲಿದ ರಾಷ್ಟ್ರ ಪ್ರಶಸ್ತಿ

Published On - 12:04 pm, Sun, 28 March 21

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್