ಮರಾಠ ಮೀಸಲಾತಿ ಮಸೂದೆ ಅಂಗೀಕಾರ; ಉಪವಾಸ ಸತ್ಯಾಗ್ರಹ ಕೈಬಿಡಲು ಮನೋಜ್ ಜಾರಂಗೆ ನಿರಾಕರಣೆ

|

Updated on: Feb 21, 2024 | 2:36 PM

ಉಪವಾಸ ಸತ್ಯಾಗ್ರಹ ಮುಂದುವರಿಸಲು ನಿರ್ಧರಿಸಿರುವ ಮನೋಜ್ ಜಾರಂಗೆ-ಪಾಟೀಲ್ "ಚುನಾವಣೆ ಮತ್ತು ಮತಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಮರಾಠ ಸಮಾಜಕ್ಕೆ ಮಾಡಿದ  ದ್ರೋಹ, ಮರಾಠ ಸಮುದಾಯವು ನಿಮ್ಮನ್ನು ನಂಬುವುದಿಲ್ಲ. ನಮ್ಮ ಮೂಲ ಬೇಡಿಕೆಗಳಿಂದ ಮಾತ್ರ ನಮಗೆ ಲಾಭವಾಗುತ್ತದೆ.  ಮೀಸಲಾತಿ ನೀಡಲಾಗಿದೆ ಎಂದು ಸರ್ಕಾರ ಈಗ ಸುಳ್ಳು ಹೇಳುತ್ತಿದೆ ಎಂದಿದ್ದಾರೆ.

ಮರಾಠ ಮೀಸಲಾತಿ ಮಸೂದೆ ಅಂಗೀಕಾರ; ಉಪವಾಸ ಸತ್ಯಾಗ್ರಹ ಕೈಬಿಡಲು ಮನೋಜ್ ಜಾರಂಗೆ ನಿರಾಕರಣೆ
ಮನೋಜ್ ಜಾರಂಗೆ-ಪಾಟೀಲ್
Follow us on

ಮುಂಬೈ ಫೆಬ್ರುವರಿ 21: ಮಂಗಳವಾರದಂದು ತರಾತುರಿಯಲ್ಲಿ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಮರಾಠರಿಗೆ ಕೋಟಾ(Maratha quota) ಒದಗಿಸುವ ಮಸೂದೆಯನ್ನು ಮಹಾರಾಷ್ಟ್ರ (Maharashtra) ಸರ್ಕಾರ ಅಂಗೀಕರಿಸಿದ್ದರೂ ಸಹ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ-ಪಾಟೀಲ್ (Manoj Jarange-Patil) ಅವರು ತಮ್ಮ ಹುಟ್ಟೂರಾದ ಜಲ್ನಾದಲ್ಲಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.  ಪ್ರಬಲ ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಕ್ರಮವನ್ನು ಜಾರಂಗೆ-ಪಾಟೀಲ್ ಸ್ವಾಗತಿಸಿದರೆ, ಮಸೂದೆಯು ಕಾನೂನು ಪರಿಶೀಲನೆಗೆ ಒಳಪಡುತ್ತದೆಯೇ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಶಾಸಕಾಂಗದ ಎರಡೂ ಸದನಗಳು ಮರಾಠ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದವು, ಇದು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಶೇಕಡಾ 10 ರಷ್ಟು ಕೋಟಾವನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದ್ದು, ಶೇಕಡಾ 50 ರಷ್ಟು ಮಿತಿಯನ್ನು ಮೀರಿದೆ. ಈ ಮಸೂದೆಯು ಆಗಿನ ದೇವೇಂದ್ರ ಫಡ್ನವಿಸ್ ಸರ್ಕಾರವು ಪರಿಚಯಿಸಿದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕಾಯಿದೆ, 2018 ರಂತೆಯೇ ಇದೆ. ಸುಪ್ರೀಂಕೋರ್ಟ್ 1992 ರಲ್ಲಿ ನಿಗದಿಪಡಿಸಿದ 50 ಪ್ರತಿಶತ ಮಿತಿಯನ್ನು ಉಲ್ಲೇಖಿಸಿ 2018 ರ ಕಾಯಿದೆಯನ್ನು ರದ್ದುಗೊಳಿಸಿತು.

“ಚುನಾವಣೆ ಮತ್ತು ಮತಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಮರಾಠ ಸಮಾಜಕ್ಕೆ ಮಾಡಿದ  ದ್ರೋಹ, ಮರಾಠ ಸಮುದಾಯವು ನಿಮ್ಮನ್ನು ನಂಬುವುದಿಲ್ಲ. ನಮ್ಮ ಮೂಲ ಬೇಡಿಕೆಗಳಿಂದ ಮಾತ್ರ ನಮಗೆ ಲಾಭವಾಗುತ್ತದೆ.  ಮೀಸಲಾತಿ ನೀಡಲಾಗಿದೆ ಎಂದು ಸರ್ಕಾರ ಈಗ ಸುಳ್ಳು ಹೇಳುತ್ತಿದೆ ಎಂದು ಜಾರಂಗೆ ಪ್ರತಿಕ್ರಿಯಿಸಿದ್ದಾರೆ.

ಜಾರಂಗೆ ಹೇಳಿದ್ದೇನು?

ಜಾರಂಗೆ-ಪಾಟೀಲ್ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದು ಯಾಕೆ?

ಇತರ ಹಿಂದುಳಿದ ವರ್ಗಗಳ (OBC) ವರ್ಗದಲ್ಲಿ ಕೋಟಾವನ್ನು ಜಾರಂಗೆ ಪಾಟೀಲ್ ಒತ್ತಾಯಿಸುತ್ತಾರೆ. ಏಕೆಂದರೆ ಇದೇ ರೀತಿಯ ಮಸೂದೆಯು ಕಾನೂನು ಪರಿಶೀಲನೆಯನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ ಮತ್ತು 2021 ರಲ್ಲಿ ಅದನ್ನು ರದ್ದುಗೊಳಿಸಲಾಯಿತು.
ಜಾರಂಗೆ ಪಾಟೀಲ್ ಅವರು ಎಲ್ಲಾ ಮರಾಠರನ್ನು ಕುಣಬಿ ಎಂದು ಪರಿಗಣಿಸಬೇಕು ಮಹಾರಾಷ್ಟ್ರದಲ್ಲಿ ಒಬಿಸಿ ಬ್ಲಾಕ್ ಅಡಿಯಲ್ಲಿ ಒಂದು ಜಾತಿ ಮತ್ತು ಅದಕ್ಕೆ ಅನುಗುಣವಾಗಿ ಮೀಸಲಾತಿ ನೀಡಬೇಕು. ರಕ್ತ ಸಂಬಂಧಗಳಿಗೆ ಕುಣಬಿ ನೋಂದಣಿಗೆ ಅವಕಾಶ ನೀಡಬೇಕೆಂದು ಬಯಸುತ್ತಾರೆ.

ಆದಾಗ್ಯೂ, ಕುಣಬಿ ಪ್ರಮಾಣಪತ್ರಗಳ ನಿಜಾಮರ ಕಾಲದ ದಾಖಲೆಗಳನ್ನು ಹೊಂದಿರುವ ಜನರು ಮಾತ್ರ ಇದರ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಸರ್ಕಾರ ನಿರ್ಧರಿಸಿತು.

“ಸರ್ಕಾರ ನೀಡುವ ಮೀಸಲಾತಿಯು ಕೇವಲ 100-150 ಮರಾಠ ಜನರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ, ನಮ್ಮ ಜನರು ಮೀಸಲಾತಿಯಿಂದ ವಂಚಿತರಾಗುತ್ತಾರೆ. ಆದ್ದರಿಂದ ನಾನು Sage Soyare (ಫ್ಯಾಮಿಲಿ ಟ್ರೀಯಲ್ಲಿ ಒಳಪಟ್ಟ ಸಂಬಂಧಿಕರು) ಅನ್ನು ಜಾರಿಗೆ ತರಲು ಒತ್ತಾಯಿಸುತ್ತೇನೆ. ಮುಂದಿನ ಸುತ್ತಿನ ಆಂದೋಲನವನ್ನು ನಾಳೆ ಘೋಷಿಸಲಾಗುವುದು. ನಮಗೆ ಬೇಕಾದುದನ್ನು ನಾವು ಪಡೆಯುತ್ತೇವೆ ಎಂದು ಹೇಳಿದ ಜಾರಂಗೆ ತಮ್ಮ ಕೈಯಿಂದ ಇಂಟ್ರಾವೆನಸ್ ಡ್ರಿಪ್ ಅನ್ನು ತೆಗೆದುಹಾಕಿದ್ದು ವೈದ್ಯರಿಂದ ಹೆಚ್ಚಿನ ಚಿಕಿತ್ಸೆ ಪಡೆಯಲು ನಿರಾಕರಿಸಿದರು.

ಇದನ್ನೂ ಓದಿ: Maratha Quota: ಮರಾಠ ಮೀಸಲಾತಿ ಕುರಿತು ಮಹಾರಾಷ್ಟ್ರ ಸರ್ಕಾರದ ಮಹತ್ವದ ನಿರ್ಧಾರ, ಶೇ.10 ಮೀಸಲಾತಿ ನೀಡುವ ಪ್ರಸ್ತಾವಕ್ಕೆ ಅನುಮೋದನೆ

ಜಾರಂಗೆ-ಪಾಟೀಲ್ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ, “ಮನೋಜ್ ಜಾರಂಗೆ ಪಾಟೀಲ್ ಮತ್ತು ಮರಾಠ ಸಮುದಾಯದ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಬಂದಿರುವ ಆಕ್ಷೇಪಣೆಗಳನ್ನು ಸರ್ಕಾರ ಅಧ್ಯಯನ ಮಾಡಿ ತೀರ್ಮಾನ ಕೈಗೊಳ್ಳಲಿದೆ. ಪ್ರತಿಭಟನೆ ಮಾಡುವ ಅಗತ್ಯವಿಲ್ಲ ಎಂದು ನಾನು ಅವರನ್ನು ವಿನಂತಿಸುತ್ತೇನೆ. ಸರ್ಕಾರ ಮರಾಠ ಸಮುದಾಯದ ಪರವಾಗಿ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ