ಮರಾಠ ಮೀಸಲಾತಿ: ಒಬಿಸಿ ಸಮುದಾಯಕ್ಕೆ ಅನ್ಯಾಯ ಮಾಡಬೇಡಿ, ಬಲಾಬಲಗಳ ಸವಾಲಿಗೆ ಮುಂದಾದ ಮರಾಠ ಸಮುದಾಯ
Maratha Reservation: ಕುಂಬಿ ಪ್ರಮಾಣಪತ್ರ ನೀಡಿ ಮರಾಠ ಸಮುದಾಯವನ್ನು ಒಬಿಸಿ ಮೀಸಲಾತಿಗೆ ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇದಕ್ಕೆ ಎನ್‌ಸಿಪಿ ಶಾಸಕ ಪ್ರಕಾಶ್ ಶೆಂಜೆ ವಿರೋಧ ವ್ಯಕ್ತಪಡಿಸಿದ್ದಾರೆ. ಕುಂಬಿ ಪ್ರಮಾಣಪತ್ರ ನೀಡಿ ಮರಾಠ ಸಮುದಾಯವನ್ನು ಒಬಿಸಿ ಮೀಸಲಾತಿಯಲ್ಲಿ ಸೇರಿಸಿಕೊಳ್ಳಬಾರದು. ಇದು ಒಬಿಸಿ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಹೇಳಿದ್ದಾರೆ. ನಮ್ಮಲ್ಲಿಯು ಬಡ ಮಕ್ಕಳು ಇದ್ದಾರೆ. ಅವರಿಗೆ ಇದರಿಂದ ಅನ್ಯಾಯವಾಗುತ್ತದೆ. ನಮ್ಮ ಮಕ್ಕಳಿಗೆ ನೀಡಿದ ಮೀಸಲಾತಿಯನ್ನು ಕಸಿಕೊಳ್ಳುತ್ತಿದ್ದಾರೆ. ಇದನ್ನು ಒಬಿಸಿ ನಾಯಕರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಪುಣೆ, ನ.7: ಮಹಾರಾಷ್ಟ್ರದಲ್ಲಿ ಜಾತಿ ಮೀಸಲಾತಿ ದಂಗಲ್ ಜೋರಾಗಿದೆ. ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಕುಂಬಿ ಪ್ರಮಾಣಪತ್ರ ನೀಡಿ ಮರಾಠ ಸಮುದಾಯಕ್ಕೆ(Maratha Reservation) ಮೀಸಲಾತಿ ನೀಡಬೇಕು ಎಂಬ ಬೇಡಿಕೆಯನ್ನು ಇಡಲಾಗಿತ್ತು. ಇದಕ್ಕಾಗಿ ಮರಾಠ ಸಮುದಾಯದ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರು ಸತ್ಯಾಗ್ರಹ ಕೂಡ ಮಾಡಿದ್ದರು. ಸರ್ಕಾರ ಇವರ ಸತ್ಯಾಗ್ರಹಕ್ಕೆ ಮಣಿದು, ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ಒಪ್ಪಿಗೆ ನೀಡಿದೆ. ಇದಕ್ಕಾಗಿ ಒಂದು ಸಮಿತಿಯನ್ನು ರಚನೆ ಮಾಡಿದ್ದು. ಇದೀಗ ಕುಂಬಿ ಪ್ರಮಾಣಪತ್ರ ನೀಡಿ ಮರಾಠ ಸಮುದಾಯವನ್ನು ಒಬಿಸಿ ಮೀಸಲಾತಿಗೆ ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇದಕ್ಕೆ ಎನ್‌ಸಿಪಿ ಶಾಸಕ ಪ್ರಕಾಶ್ ಶೆಂಜೆ ವಿರೋಧ ವ್ಯಕ್ತಪಡಿಸಿದ್ದಾರೆ. ಕುಂಬಿ ಪ್ರಮಾಣಪತ್ರ ನೀಡಿ ಮರಾಠ ಸಮುದಾಯವನ್ನು ಒಬಿಸಿ ಮೀಸಲಾತಿಯಲ್ಲಿ ಸೇರಿಸಿಕೊಳ್ಳಬಾರದು. ಇದು ಒಬಿಸಿ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಹೇಳಿದ್ದಾರೆ. ನಮ್ಮಲ್ಲಿಯು ಬಡ ಮಕ್ಕಳು ಇದ್ದಾರೆ. ಅವರಿಗೆ ಇದರಿಂದ ಅನ್ಯಾಯವಾಗುತ್ತದೆ. ನಮ್ಮ ಮಕ್ಕಳಿಗೆ ನೀಡಿದ ಮೀಸಲಾತಿಯನ್ನು ಕಸಿಕೊಳ್ಳುತ್ತಿದ್ದಾರೆ. ಇದನ್ನು ಒಬಿಸಿ ನಾಯಕರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಒಬಿಸಿ ನಾಯಕರು, ಎಲ್ಲರೂ ಕೂಡ ನಮ್ಮ ಮೀಸಲಾತಿಗಳನ್ನು ರಕ್ಷಣೆ ಮಾಡುವ ಪ್ರಯತ್ನವನ್ನು ಮಾಡಬೇಕಿದೆ. ಈಗಾಗಲೇ ಒಬಿಸಿ ಸಮುದಾಯದ ಎಲ್ಲರನ್ನು ಒಗ್ಗೂಡಿಸಿದೆ. ಈ ಕಾರಣಕ್ಕಾಗಿ ದೀಪಾವಳಿ ನಂತರ ರಾಜ್ಯಾದ್ಯಂತ ಆಂದೋಲನ ಆರಂಭಿಸುತ್ತೇವೆ ಎಂದು ಪ್ರಕಾಶ್ ಶೆಂದೆ ಹೇಳಿದ್ದಾರೆ. ಈ ಹಿಂದೆ ಸರ್ಕಾರ ಇದರಿಂದ ಒಬಿಸಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿತ್ತು. ಇದೀಗ ನಮ್ಮಿಂದ ಕಿತ್ತುಕೊಂಡು ಅವರಿಗೆ ನೀಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಈ ನಿರ್ಧಾರವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ಒಬಿಸಿ ಮೀಸಲಾತಿಗಳನ್ನು ಮರಾಠ ಸಮುದಾಯಕ್ಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಎನ್‌ಸಿಪಿ ನಾಯಕ ಛಗನ್ ಭುಜಬಲ್ ಅವರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ಶೆಂದೆ ನೀವು ರಾಜೀನಾಮೆ ನೀಡಬೇಡಿ, ನೀವು ಸದನದ ಒಳಗೆ ಹೋರಾಟ ಮಾಡಿ, ನಾವು ಹೊರಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕಾಗಿ ಯಾವುದೇ ಸಮಿತಿಯನ್ನು ನಾವು ರಚಿಸುವುದಿಲ್ಲ. ನ್ಯಾಯಂಗ ಹೋರಾಟಕ್ಕೂ ಸಿದ್ಧ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರ: ಮರಾಠ ಮೀಸಲಾತಿ ಆಂದೋಲನದ ನಡುವೆಯೇ ಸರ್ವಪಕ್ಷ ಸಭೆ ಕರೆದ ಸಿಎಂ ಏಕನಾಥ್ ಶಿಂಧೆ
ನಮಗೆ ಸವಾಲು ಹಾಕಬೇಡಿ, ನಿಮ್ಮ ಬಲ ಮತ್ತು ನಮ್ಮ ಬಲ ಎಷ್ಟಿದೆ? ನೋಡುವ: ಮನೋಜ್ ಜಾರಂ
ಇನ್ನು ಎನ್‌ಸಿಪಿ ನಾಯಕ ಛಗನ್ ಭುಜಬಲ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮರಾಠ ಸಮುದಾಯದ ಹೋರಾಟಗಾರ ಮನೋಜ್ ಜಾರಂ, NCP ನಾಯಕ ಛಗನ್ ಭುಜಬಲ್ ಅವರು ಮರಾಠರಿಗೆ OBC ಮತ್ತು ಸಂಪೂರ್ಣ ಕುಂಬಿ ಪ್ರಮಾಣಪತ್ರದಿಂದ ಮೀಸಲಾತಿ ನೀಡಲು ನಿರಾಕರಿಸಿದ್ದಾರೆ. ನಾವು ಕೂಡ 54 ಪ್ರತಿಶತ ಮರಾಠರು ಮಾತ್ರ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ನಮಗೆ ಯಾವುದೇ ರೀತಿಯಲ್ಲಿ ಸವಾಲು ಹಾಕಬೇಡಿ ಎಂದು ಹೇಳಿದ್ದಾರೆ. ನಿಮ್ಮ ಬಲ ಮತ್ತು ನಮ್ಮ ಬಲ ಎಷ್ಟಿದೆ? ಎಂಬುದನ್ನು ನೋಡುವ, ಈ ಕ್ಷಣವೇ ಜಾತಿ ಗಣತಿ ನಡೆಯಲಿ. ನಾವು ದೇಶದಲ್ಲಿ ಸುಮಾರು 32 ಕೋಟಿ ಜನರಿದ್ದೇವೆ. ರಾಜ್ಯದಲ್ಲಿಯೂ ನಾವು ಶೇ.54ರಿಂದ 60ರಷ್ಟಿದ್ದೇವೆ. ನಮ್ಮ ದಾರಿಗೆ ತಡೆಯಾಗಿ ನಿಲ್ಲಬೇಡಿ ಎಂದು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮನೋಜ್ ಜಾರಂ ತುರ್ತು ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ಛಗನ್ ಭುಜಬಲ್ಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ನಮ್ಮ ದಾರಿಗೆ ತಡೆಯಾಗಿ ನಿಲ್ಲಬೇಡಿ. ನಾವು ನಿಮಗಿಂತ ಹೆಚ್ಚು ಜನ ಇದ್ದೇವೆ. ಸರ್ಕಾರ ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತದೆ ಎಂಬ ನಂಬಿಕೆ ಇದೆ. ನಮ್ಮ ಮಕ್ಕಳಿಗೆ ಅನ್ಯಾಯ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Tue, 7 November 23