Updated on: Nov 07, 2023 | 5:01 PM
ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೋಹಿ ಪ್ರತಿಮೆ ಅನಾವರಣ ಸಮಾರಂಭ ಇಂದು(ನ.07) ನಡೆದಿದೆ.
ಭಾರತ-ಪಾಕ್ ಗಡಿಯಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿಯ ಮೊದಲ ಅಶ್ವಾರೋಹಿ ಪ್ರತಿಮೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉದ್ಘಾಟಿಸಿದರು.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಭಾರತ-ಪಾಕ್ ಗಡಿಯಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿಯ ಮೊದಲ ಪ್ರತಿಮೆ ಇದಾಗಿದ್ದು, ಇದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದ ಮುಖ್ಯಮಂತ್ರಿ ಏಕನಾಥ್ ಶಿಂಧೆ.
ರಾಷ್ಟ್ರೀಯ ರೈಫಲ್ಸ್-41 ರ ಸೈನಿಕರು ಈ ಕಾರ್ಯಕ್ರಮಕ್ಕಾಗಿ ಕೆಲ ದಿನಗಳಿಂದಲೇ ಬಹಳ ಉತ್ಸುಕರಾಗಿದ್ದು, ಕಳೆದ ವಾರ ಕುಪ್ವಾರಕ್ಕೆ ಶಿವಾಜಿಯ ಪ್ರತಿಮೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು.
ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಕುದುರೆ ಸವಾರಿ ಮಾಡುತ್ತಿರುವ ಮಾದರಿಯ ಕಾಶ್ಮೀರದ ಕುಪ್ವಾರದಲ್ಲಿರುವ ಪ್ರತಿಮೆ ಇದೀಗಾ ಎಲ್ಲರ ಗಮನಸೆಳೆದಿದೆ.