ಮದುವೆಯಾಗಿ 15 ವರ್ಷಗಳಾದರೂ ಮಕ್ಕಳಿಲ್ಲ; ಗಂಡು ಕರುವನ್ನು ದತ್ತು ಪಡೆದ ದಂಪತಿ

|

Updated on: Dec 18, 2020 | 1:43 PM

ಗಂಡುಕರುವನ್ನು ದತ್ತು ಪಡೆದ ರೈತ ದಂಪತಿ ಮುಂಡನ (ಕೇಶಮುಂಡನ ಕಾರ್ಯಕ್ರಮ) ಆಯೋಜಿಸಿದ್ದು, ಅತಿಥಿಗಳಿಗೆ ಆಹ್ವಾನ ನೀಡಿದ್ದಾರೆ.ಮುಂಡನ ಕಾರ್ಯಕ್ರಮದಲ್ಲಿ ಸುಮಾರು 500 ಅತಿಥಿಗಳು ಭಾಗಿಯಾಗಿದ್ದರು

ಮದುವೆಯಾಗಿ 15 ವರ್ಷಗಳಾದರೂ ಮಕ್ಕಳಿಲ್ಲ; ಗಂಡು ಕರುವನ್ನು ದತ್ತು ಪಡೆದ ದಂಪತಿ
ಪ್ರಾತಿನಿಧಿಕ ಚಿತ್ರ
Follow us on

ಲಕ್ನೋ: ಉತ್ತರ ಪ್ರದೇಶದ ಶಹಜಾನ್​ಪುರ್​ದ ರೈತ ದಂಪತಿ ವಿಜಯ್ ಪಾಲ್ ಮತ್ತು ರಾಜೇಶ್ವರಿ ದೇವಿ ಅವರಿಗೆ ಮದುವೆಯಾಗಿ 15 ವರ್ಷಗಳಾದರೂ ಮಕ್ಕಳಾಗಿಲ್ಲ. ಹಾಗಾಗಿ ಅವರು ದತ್ತು ಪಡೆಯಲು ತೀರ್ಮಾನಿಸಿದ್ದರು. ವಿಶೇಷವೇನೆಂದರೆ ಅವರು ದತ್ತು ಪಡೆದಿದ್ದು ಗಂಡು ಕರುವನ್ನು!

ಗುರುವಾರ ಗಂಡು ಕರುವನ್ನು ದತ್ತು ಪಡೆದ ಈ ದಂಪತಿ ಅದಕ್ಕೆ ‘ಲಾಲ್ತೂ ಬಾಬಾ’ ಎಂದು ನಾಮಕರಣ ಮಾಡಿದ್ದಾರೆ. ವಿಜಯ್ ಪಾಲ್ ಅವರ ಅಪ್ಪ ಅವರ ಮನೆಯಲ್ಲಿ ಸಾಕಿದ್ದ ಹಸುವಿನ ಕರು ಇದಾಗಿದೆ. ವಿಜಯ್ ಪಾಲ್ ಅವರ ಹೆತ್ತವರು ತೀರಿಕೊಂಡಾಗ ಹಸು ಕೂಡಾ ಸಾವಿಗೀಡಾಗಿತ್ತು.

ಗಂಡು ಕರುವನ್ನು ದತ್ತು ಪಡೆದ ಈ ದಂಪತಿ ಮುಂಡನ (ಕೇಶಮುಂಡನ ಕಾರ್ಯಕ್ರಮ) ಆಯೋಜಿಸಿದ್ದು, ಅತಿಥಿಗಳಿಗೆ ಆಹ್ವಾನ ನೀಡಿದ್ದಾರೆ. ಮುಂಡನ ಕಾರ್ಯಕ್ರಮದಲ್ಲಿ ಸುಮಾರು 500 ಅತಿಥಿಗಳು ಭಾಗಿಯಾಗಿದ್ದರು. ಈ ಕರು ಹುಟ್ಟಿದಾಗಿನಿಂದ ನಮ್ಮ ಜೀವನದ ಜತೆ ಉತ್ತಮ ನಂಟು ಬೆಸೆದು ಕೊಂಡಿದ್ದು, ನಮ್ಮ ಮಗನಂತೆ ನಾವು ಇವನನ್ನು ಸ್ವೀಕರಿಸಿದ್ದೇವೆ. ನಾವು ಗೋವನ್ನು ಅಮ್ಮ ಎಂದು ಪರಿಗಣಿಸುವಾಗ ಗಂಡು ಕರುವನ್ನು ಮಗ ಎಂದು ಯಾಕೆ ಸ್ವೀಕರಿಸಬಾರದು ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯ್ ಪಾಲ್ ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಕಳೆದ ವರ್ಷ ‘ನಿರಾಶ್ರಿತ್/ ಬೇಸಹಾರಾ ಗೋವಂಶ್ ಸಹಭಾಗಿತಾ ಯೋಜನಾ’ ಎಂಬ ಯೋಜನೆಯೊಂದನ್ನು ಜಾರಿಗೆ ತಂದಿತ್ತು. ಈ ಯೋಜನೆ ಪ್ರಕಾರ, ಯಾವುದೇ ವ್ಯಕ್ತಿ ಹಸುವನ್ನು ದತ್ತು ಪಡೆದರೆ ಅದ ಪಾಲನೆ-ಪೋಷಣೆಗಾಗಿ ದಿನಕ್ಕೆ 30 ರೂಪಾಯಿ ನೀಡಲಾಗುತ್ತದೆ.

 

ಗೋವಿನ ಮೇಲೆ ಕ್ರೌರ್ಯ ಆರೋಪ: ಯೂಟ್ಯೂಬ್, ಫೇಸ್​​ಬುಕ್​​ನಲ್ಲಿರುವ ವಿಡಿಯೊ ತೆಗೆಯಲು ಅಮೂಲ್ ಒತ್ತಾಯ

Published On - 1:36 pm, Fri, 18 December 20